ಕುಂದಾಪುರ: ಬೊಲೆರೋ ವಾಹನದಲ್ಲಿ ಕಳವು ಮಾಡಿದ ಮೂರು ಜಾನುವಾರುಗಳನ್ನು ಅಕ್ರಮವಾಗಿ ಮತ್ತು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ವೇಳೆ ಪೊಲೀಸರು ಅಡ್ಡಗಟ್ಟಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಓರ್ವ ಆರೋಪಿ ಪರಾರಿಯಾಗಿದ್ದಾನೆ. ಕಂಡ್ಲೂರಿನಲ್ಲಿರುವ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಮಂಗಳವಾರ ಮುಂಜಾನೆ ಕಾವ್ರಾಡಿ ಗ್ರಾಮದ ಜನತಾ ಕಾಲೋನಿ ಮಣ್ಣು ರಸ್ತೆಯಲ್ಲಿ ಈ ಕಾರ್ಯಾಚರಣೆ ನಡೆಸಿದ್ದಾರೆ.
ಮುತಾಯಬ್ ಹಾಗೂ ಕಂಡ್ಲೂರಿನ ರಿದಾನ್ ಬಂಧಿತ ಆರೋಪಿಗಳಾಗಿದ್ದು ಕಂಡ್ಲೂರಿನ ಸಮೀರ ಎನ್ನುವಾತ ಪರಾರಿಯಾಗಿದ್ದಾನೆ.

ಕುಂದಾಪುರ ಗ್ರಾಮಾಂತರ ಠಾಣೆ ಎಎಸ್ಐ ರವೀಶ್ ಹೊಳ್ಳ ಎನ್ನುವರು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದು ಮಂಗಳವಾರ ಬೆಳಿಗ್ಗೆ 5.30 ಕ್ಕೆ ಧೂಪದಕಟ್ಟೆ ಕಡೆಯಿಂದ ಒಳರಸ್ತೆಯಲ್ಲಿ ದ್ವಿಚಕ್ರ ವಾಹನ ಹಾಗೂ ಅದರ ಹಿಂಬದಿ ಒಂದು ಕಪ್ಪು ಬೊಲೆರೊ ವಾಹನ ವೇಗವಾಗಿ ಬಂದಿದ್ದು ಪೊಲೀಸರು ಎದರಿಗಿದ್ದ ದ್ವಿಚಕ್ರ ವಾಹನ ಚಾಲಕನನ್ನು ನಿಲ್ಲಿಸಲು ಯತ್ನಿಸಿದರೂ ಸವಾರ ಕಂಡ್ಲೂರಿನ ರಿದಾನ್ ನಿಲ್ಲಿಸದೆ ಮುಂದಕ್ಕೆ ಹೋಗಿದ್ದ. ಬಳಿಕ ಹಿಂಬದಿ ಬರುತ್ತಿದ್ದ ಬೊಲೆರೊ ಚಾಲಕನು ವಾಹನವನ್ನು ಸ್ವಲ್ಪ ಹಿಂಬದಿ ರಸ್ತೆಯ ಬದಿಯಲ್ಲಿ ನಿಲ್ಲಿಸಿ ಅದರಲ್ಲಿದ್ದ ಇನ್ನೊರ್ವನೊಂದಿಗೆ ಪರಾರಿಯಾಗಿರುತ್ತಾನೆ. ಇಬ್ಬರನ್ನು ಪರಿಶೀಲಿಸುವಾಗ ಚಾಲಕ ಕಂಡ್ಲೂರಿನ ಸಮೀರ್ ಹಾಗೂ ಇನ್ನೋರ್ವನು ಮುತಾಯಿಬ್ ಎಂಬುದು ತಿಳಿದುಬಂದಿದೆ. ಆರೋಪಿಗಳು KA 46 M 0344 ನೇ ಬೊಲೆರೋ ವಾಹನದ ಹಿಂಬದಿ ಸೀಟ್ ತೆಗೆದು ಅದರಲ್ಲಿ 3 ಗಂಡು ಕರುಗಳನ್ನು ಹಿಂಸಾತ್ಮಕವಾಗಿ ಕಾಲುಗಳನ್ನು ಕಟ್ಟಿ ತುಂಬಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಈ ಜಾನುವಾರುಗಳನ್ನು ಮೂವರು ಆರೋಪಿಗಳು ಕಳವು ಮಾಡಿದ್ದಲ್ಲದೇ ಮಾಂಸ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಕಲಾಗಿದ್ದು ತನಿಖೆ ನಡೆಯುತ್ತಿದೆ.
Comments are closed.