ಕರಾವಳಿ

ಸ್ಯಾಂಡಲ್‌ವುಡ್‌ಗೆ ಡ್ರಗ್ಸ್‌ ಮಾಫಿಯಾ : ಸ್ಫೋಟಕ ಮಾಹಿತಿ ನೀಡಿದ ಇಂದ್ರಜೀತ್ ಲಂಕೇಶ್ -10ರಿಂದ 15ನಟ-ನಟಿಯರ ಬಣ್ಣ ಬಯಲು

Pinterest LinkedIn Tumblr

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್​ ಮಾಫಿಯಾ ಇರೋದು ನಿಜ, ನನಗೆ ರಕ್ಷಣೆ ಕೊಟ್ಟರೆ ಆ ನಟ ನಟಿಯರ ಹೆಸರು ಹೇಳ್ತೀನಿ ಎಂದಿದ್ದ ಇಂದ್ರಜಿತ್ ಲಂಕೇಶ್​ ಇಂದು ಸಿಸಿಬಿ ವಿಚಾರಣೆಗೆ ಹಾಜರಾಗಿದ್ದು, 10 ರಿಂದ 15 ನಟ ನಟಿಯರ ಹೆಸರುಗಳನ್ನ ದಾಖಲೆ ಸಮೇತ ಅಧಿಕಾರಿಗಳಿಗೆ ನೀಡಿದ್ದೇನೆ ಎನ್ನುವ ಮೂಲಕ ಸ್ಫೋಟಕ ಮಾಹಿತಿ ನೀಡಿದ್ದಾರೆ.

ಸ್ಯಾಂಡಲ್‌ವುಡ್‌ಗೆ ಡ್ರಗ್ಸ್‌ ನಂಟಿದೆ ಎನ್ನುವ ಹೇಳಿಯ ಕುರಿತು ಇಂದು ಸಿಸಿಬಿ ವಿಚಾರಣೆಗೆ ಹಾಜರಾಗಿದ್ದ ಇಂದ್ರಜೀತ್‌ ಲಂಕೇಶ್‌ ಸಿಸಿಬಿ ವಿಚಾರಣೆಯ ನಂತರ ಮಾದ್ಯಮಗಳೊಂದಿಗೆ ಮಾತನಾಡಿದರು.

ಈ ವೇಳೆ ಇಂದ್ರಜೀತ್‌ ಲಂಕೇಶ್‌, “ಅಧಿಕಾರಿಗಳಿಗೆ ಡಿಜಿಟಲ್‌ ಯವಿಡನ್ಸ್ ನೀಡಿದ್ದೇನೆ. ಡ್ರಗ್ಸ್‌ ಪಾರ್ಟಿ ನಡೆಸಿದ ನಟ-ನಟಿಯರ ಹೆಸರಿನ ಸಮೇತ ಅವ್ರ ಕುರಿತ ಪೂರ್ಣ ದಾಖಲೆಯನ್ನ ನೀಡಿದ್ದೇನೆ. ನನ್ನ ವಿಚಾರಣೆಯಿಂದ ಅಧಿಕಾರಿಗಳಿಗೆ ಅವ್ರಿಗೂ ಸಂತೋಷವಾಗಿದೆ. ಯಾಕಂದ್ರೆ, ಅಷ್ಟೊಂದು ಮಾಹಿತಿ ನಾನು ನೀಡಿದ್ದೇನೆ” ಎಂದು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನನಗೆ ಮಾದ್ಯಮ ಸಹಿತ ರಾಜಕಾರಣಿಳು ಬೆಂಬಲ ನೀಡಿದ್ದಾರೆ. ಅವರಿಗೆ ಧನ್ಯವಾದಗಳು ಎಂದಿದ್ದಾರೆ. ಇನ್ನು ಇದೇ ವೇಳೆ ಚಿರಂಜೀವಿ ಸರ್ಜಾ ಬಗ್ಗೆ ತಾನು ಹೇಳಿದ ಮಾತುಗಳನ್ನ ವಾಪಾಸ್‌ ತೆಗೆದುಕೊಳ್ಳುತ್ತೇನೆ ಎಂದು ಇಂದ್ರಜೀತ್‌ ತಿಳಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ರಾಜ್ಯ ರಾಜಧಾನಿಯಲ್ಲಿ ಸಿಸಿಬಿ ಪೊಲೀಸರು ಡ್ರಗ್ಸ್‌ ಮಾಫೀಯಾ ಭೇದಿಸಿದ್ದೇ ತಡ ಸ್ಯಾಂಡಲ್‌ವುಡ್‌ಗೆ ಡ್ರಗ್ಸ್‌ ನಂಟಿದೆ ಎನ್ನುವ ಆರೋಪ ಬಲವಾಗಿ ಕೇಳಿ ಬಂದಿದೆ. ಈ ನಡುವೆ ನಿರ್ದೇಶಕ ಇಂದ್ರಜೀತ್‌ ಲಂಕೇಶ್‌ ಸ್ಪೋಟಕ ಮಾಹಿತಿಗಳನ್ನ ಬಿಚ್ಚಿಟ್ಟಿದ್ದು, ಸ್ಯಾಂಡಲ್‌ ಡ್ರಗ್ಸ್‌ಗೆ ಸಂಬಂಧಿಸಿದಂತೆ ನನ್ನಲ್ಲಿ ಮಾಹಿತಿಗಳಿವೆ. ಸೂಕ್ತ ಭದ್ರತೆ ನೀಡುವುದಾದ್ರೆ ಅಧಿಕಾರಿಗಳಿಗೆ ಹಸ್ತಾಂರಿಸುವೆ ಎಂದಿದ್ದರು.

ಈ ಹಿನ್ನೆಲೆಯಲ್ಲಿ ನಿರ್ದೇಶಕ ಇಂದ್ರಜೀತ್‌ ಲಂಕೇಶ್‌ಗೆ ಸಿಸಿಬಿ ಪೊಲೀಸರು ನೋಟಿಸ್‌ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು. ಅದರಂತೆ ಇಂದು ಸಿಸಿಬಿ ವಿಚಾರಣೆಗೆ ಹಾಜರಾಗಿದ್ದ ಇಂದ್ರಜೀತ್‌ ಅವರು ಮೊದಮೊದಲು ಸ್ಟಾರ್​ಗಳ ಹೆಸರು ಹೇಳೋಕೆ ಹಿಂದೆ ಮುಂದೆ ನೋಡ್ತಿದ್ದಾರೆ ಎನ್ನಲಾಗಿದೆ. ನನಗೆ ಸಮರ್ಪಕವಾಗಿ ರಕ್ಷಣೆ ಸಿಗುತ್ತಾ..? ನನಗೆ ಸಿಕ್ಕಿಲ್ಲ ಅಂದ್ರೆ ನಟ ನಟಿಯರ ಹೆಸರು ಹೇಳಲ್ಲ. ಜೊತೆಗೆ ನನ್ನನ್ನ ಇನ್ಫಾರ್ಮರ್ ಆಗಷ್ಟೇ ನೋಡಿ. ನಾನು ಲಿಖಿತ ಹೇಳಿಕೆ ಕೊಡೋಕೆ ಆಗಲ್ಲ, ಮೌಖಿಕ ಹೇಳಿಕೆ ಕೊಡಬಲ್ಲೆ ಅಷ್ಟೇ ಅಂತ ವಿಚಾರಣೆ ವೇಳೆ ಹೇಳಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಆದರೆ ಬಳಿಕ ಡ್ರಗ್ಸ್‌ ಪಾರ್ಟಿ ನಡೆಸಿದ ನಟ-ನಟಿಯರ ಹೆಸರಿನ ಸಮೇತ ಅವರ ಕುರಿತ ಪೂರ್ಣ ದಾಖಲೆಯನ್ನ ನೀಡಿದ್ದಾರೆ. ಇದರಲ್ಲಿ10 ರಿಂದ 15 ನಟ ನಟಿಯರ ಹೆಸರುಗಳನ್ನು ದಾಖಲೆ ಸಮೇತ ಅಧಿಕಾರಿಗಳಿಗೆ ನೀಡಲಾಗಿದೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

Comments are closed.