ಚೆನ್ನೈ: ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ವಾಲಿನೋಕ್ಕಂ ಬೀಚ್‍ನಲ್ಲಿ ಬಂಡೆಯಾಕಾರದ ಬೃಹತ್ ತಿಮಿಂಗಿಲವೊಂದು ಪತ್ತೆಯಾಗಿದೆ.
ವಾಲಿನೋಕ್ಕಂ ಬೀಚ್‍ನಲ್ಲಿ ಬೃಹತ್ ತಿಮಿಂಗಿಲ ನೋಡಿ ಜನರು ಅದನ್ನು ನೋಡಲು ಹತ್ತಿರ ಹೋಗಿದ್ದಾರೆ. ಆಗ ತಿಮಿಂಗಿಲ ಮೃತಪಟ್ಟಿರುವುದು ತಿಳಿದು ಬಂದಿದೆ. ತಿಮಿಂಗಿಲಕ್ಕೆ ಸಮುದ್ರದಲ್ಲಿ ಹಡಗು ಡಿಕ್ಕಿ ಹೊಡೆದಿರಬಹುದು. ತಿಮಿಂಗಿಲದ ವಯಸ್ಸನ್ನು ಲೆಕ್ಕಹಾಕಲು ಸಾಧ್ಯವಾಗುತ್ತಿಲ್ಲ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
“ಇದು ಬೃಹತ್ ತಿಮಿಂಗಿಲ. ನಾವು ಇದೀಗ ತಿಮಿಂಗಿಲದ ಮರಣೋತ್ತರ ಪರೀಕ್ಷೆಯನ್ನು ಮುಗಿಸಿದ್ದೇವೆ. ತಿಮಿಂಗಿಲಕ್ಕೆ ದೊಡ್ಡ ಹಡಗು ಹೊಡೆದಿರಬಹದು ಎಂದು ಶಂಕಿಸಿದ್ದೇವೆ. ಆದರೆ ತಿಮಿಂಗಿಲ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ” ಎಂದು ಅರಣ್ಯ ಅಧಿಕಾರಿ ಸಿಕ್ಕಾಂತರ್ ಬಾಷಾ ತಿಳಿಸಿದ್ದಾರೆ.
ಈ ಭಾಗದಲ್ಲಿ ಇಷ್ಟು ಬೃಹತ್ ತಿಮಿಂಗಿಲಗಳು ಕಾಣುವುದಿಲ್ಲ. ಆದರೆ ಜೂನ್‍ನಲ್ಲಿ ಇದೇ ಜಿಲ್ಲೆಯಲ್ಲಿ 18 ಅಡಿ ಉದ್ದದ, ಒಂದು ಕಾಲಿನ ಶಾರ್ಕ್‍ನ ಮೃತದೇಹ ತೀರಕ್ಕೆ ಬಂದಿತ್ತು. ಶವಪರೀಕ್ಷೆ ನಡೆಸಿದ ನಂತರ ಅರಣ್ಯ ಅಧಿಕಾರಿಗಳು ಅದನ್ನು ಕಡಲತೀರದಲ್ಲಿ ಸಮಾಧಿ ಮಾಡಿದ್ದರು.
ಇಂತಹ ಅಪರೂಪದ ಜೀವಿಗಳನ್ನು ಹಿಡಿಯುವುದು 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ಅಪರಾಧ. ಒಂದು ವೇಳೆ ಅಪರೂಪದ ತಿಮಿಂಗಿಲಗಳನ್ನು ಹಿಡಿಯುವುದಾಗಲಿ, ಕೊಲ್ಲುವುದಾಗಲಿ ಮಾಡಿದರೆ ಕಾಯ್ದೆಯಡಿಯಲ್ಲಿ 3 ವರ್ಷದಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಬಾಷಾ ತಿಳಿಸಿದ್ದಾರೆ.
Comments are closed.