ಕರಾವಳಿ

ಸ್ಯಾಂಡಲ್‌ವುಡ್‌ ಡ್ರಗ್ಸ್ ಪ್ರಕರಣಕ್ಕೆ ಹೊಸ ತಿರುವು : ಸ್ಫೋಟಕ ಮಾಹಿತಿ ನೀಡಿದ ಕಿಂಗ್‌ಪಿನ್‌ ಅನಿಕಾ

Pinterest LinkedIn Tumblr

ಬೆಂಗಳೂರು: ಕನ್ನಡ ಚಿತ್ರರಂದ ಕಲಾವಿದರು ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪಗಳ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನ‌ಲ್ಲಿ ಸಂಚಲನ ಮೂಡಿಸಿರುವ ಮಾದಕ ವಸ್ತು ಪ್ರಕರಣಕ್ಕೆ ಹೊಸ ಹೊಸ ತಿರುವು ಲಭಿಸಿದೆ.

ಈ ಪ್ರಕರಣದ ಕಿಂಗ್‌ಪಿನ್‌ ಅನಿಕಾ ಕೊರಿಯರ್‌ ಮೂಲಕ, ಅಂಚೆ ಚೀಟಿಗಳ ಹಿಂದೆ ಎಲ್‌ಎಸ್‌ಡಿ ಅಂಟಿಸಿ, ಬೊಂಬೆಗಳಲ್ಲಿ ಇರಿಸಿ ರವಾನಿಸುತ್ತಿದ್ದಳು. ಪಾರ್ಟಿಗಳಿಗೆ ಉಡುಗೊರೆ ಬಾಕ್ಸ್‌ಗಳಲ್ಲಿ ಸರಬ ರಾಜು ಮಾಡಲಾಗುತ್ತಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.

ಮತ್ತೂಂದೆಡೆ ಪ್ರಕರಣದ ಕಿಂಗ್‌ಪಿನ್‌ ಅನಿಕಾ ಎನ್‌ಸಿಬಿ ಅಧಿಕಾರಿಗಳ ಎದುರು ಐದು ಪುಟಗಳ ಹೇಳಿಕೆ ದಾಖಲಿಸಿದ್ದು, ಹಲವು ಮಹತ್ವದ ವಿಷಯ ಗಳು ಅದರಲ್ಲಿವೆ ಎನ್ನಲಾಗಿದೆ.

ಸ್ಯಾಂಡಲ್‌ವುಡ್‌ ನಟ-ನಟಿಯರು ಮತ್ತು ಸಂಗೀತಗಾರರು ತನ್ನ ಗ್ರಾಹಕರು. ಅದು ಹೊರತು ಪಡಿಸಿ ವಿದ್ಯಾರ್ಥಿಗಳಿಗೆ ಪೂರೈಕೆ ಮಾಡಲಾಗುತ್ತಿತ್ತು. ಪ್ರತೀ ಎಂಡಿಎಂಎ (ಸಿಂಥೆಟಿಕ್‌ ಮಾದಕ ವಸ್ತು) ಮಾತ್ರೆಯನ್ನು 2ರಿಂದ 5 ಸಾವಿರ ರೂ.ಗೆ ಮಾರಾಟ ಮಾಡಿದ್ದೇನೆ. ಮುಖ್ಯವಾಗಿ ಲಾಕ್‌ ಡೌನ್‌ ಸಂದರ್ಭದಲ್ಲೇ ಹೆಚ್ಚು ವಹಿವಾಟು ನಡೆಸ ಲಾಗಿತ್ತು ಎಂದು ಆಕೆ ಹೇಳಿಕೆ ದಾಖಲಿಸಿದ್ದಾಗಿ ಮೂಲಗಳು ತಿಳಿಸಿವೆ.

ಅನಿಕಾ ಕೋಡ್‌ವರ್ಡ್‌ಗಳ ಮೂಲಕ ದಂಧೆ ನಡೆಸುತ್ತಿದ್ದಳು. ತನ್ನ ಸಾಮಾಜಿಕ ಜಾಲತಾಣದ ಖಾತೆ ಹೆಸರು ಕೂಡ ಬಿ-ಮನಿ ಎಂದಿದೆ. ಅಮೀನಮ್‌ ಖಾನ್‌ ಮೊಹಮ್ಮದ್‌ ಮೂಲಕ ದಂಧೆ ನಡೆಸುತ್ತಿದ್ದ ಈಕೆಯ ಸಬ್‌ಡೀಲರ್‌ ಡುಗಯ್‌ ಡುಂಜೋ ತಲೆಮರೆಸಿಕೊಂಡಿದ್ದಾನೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಲೌಕ್‌ ಡೌನ್‌ ಸಂದರ್ಭ ನಟರಿಗಿಂತ ನಟಿಯರೇ ಹೆಚ್ಚು ಮಾದಕ ವಸ್ತು ಸೇವಿಸುತ್ತಿದ್ದರು ಎಂಬುದು ಗೊತ್ತಾಗಿದೆ. ಈ ಚಟ ಅಂಟಿಸಿಕೊಂಡವರಲ್ಲಿ ಹೆಚ್ಚಿನವರು ಕ್ಲಾಸ್‌ -1 ಮಾದಕ ವಸ್ತುಗಳಿಗಾಗಿ ಬೇಡಿಕೆ ಇರಿಸುತ್ತಿದ್ದರು. ಸಾಮಾನ್ಯವಾಗಿ ನಟಿಯರು ವೈನ್‌ ಸೇವಿಸುತ್ತಿದ್ದು, ಲಾಕ್‌ಡೌನ್‌ ಸಂದರ್ಭದಲ್ಲಿ ಮದ್ಯ ಮಾರಾಟ ಇಲ್ಲದ್ದರಿಂದ ಮಾದಕ ವಸ್ತುಗಳಿಗೇ ಶರಣಾಗಿದ್ದರು ಎಂದು ಮೂಲಗಳು ತಿಳಿಸಿವೆ.

ನಿರ್ದೇಶಕ ಇಂದ್ರಜಿತ್ ಲಂಕೇಶ್‌ಗೆ ನೋಟಿಸ್ ಜ್ಯಾರಿ :

ಇದೇವೇಳೆ ಕನ್ನಡ ಚಿತ್ರರಂದ ಕಲಾವಿದರು ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪಗಳ ಬೆನ್ನಲ್ಲೇ, ಸ್ಯಾಂಡಲ್ ವುಡ್‌ನ‌ ಕೆಲವು ಸ್ಟಾರ್‌ ಗಳು ಮಾದಕ ವಸ್ತು ಸೇವನೆ ಮಾಡುತ್ತಿದ್ದುದು ಸತ್ಯ ಎಂಬ ಹೇಳಿಕೆ ನೀಡಿರುವ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಅವರಿಗೆ ಈ ಸಂಬಂಧ ಮಾಹಿತಿ ಹಂಚಿಕೊಳ್ಳುವಂತೆ ನೋಟಿಸ್ ನೀಡಲಾಗಿದೆ.

ಇತ್ತೀಚಿಗಷ್ಟೇ ಎನ್‍ಸಿಬಿ ತನಿಖಾಧಿಕಾರಿಗಳು ಕೇರಳದ ಡಿ.ಅನಿಕಾ ಸೇರಿದಂತೆ ಹಲವರನ್ನು ಬಂಧಿಸಿದ್ದರು. ಈ ವೇಳೆ ಕನ್ನಡ ಚಿತ್ರರಂಗದ ಹಲವು ಕಲಾವಿದರು ಡ್ರಗ್ಸ್ ದಂಧೆಯಲ್ಲಿ ಭಾಗಿ ಆರೋಪ ಕೇಳಿಬಂದಿತ್ತು. ಇದಾದ ಬಳಿಕ ಸಿನಿಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ಈ ಬಗ್ಗೆ ಪ್ರತಿಕ್ರಿಯಿಸಿ ಚಿತ್ರರಂಗದ ಹಲವರು ಡ್ರಗ್ಸ್ ಮಾರಾಟದಿಂದಲೇ ಐಷಾರಾಮಿ ಕಾರಿನಲ್ಲಿ ಓಡಾಡುತ್ತಿದ್ದಾರೆ ಎಂದಿದ್ದರು.

ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿಸಿಬಿ ಅಧಿಕಾರಿಗಳು, ಖಚಿತ ಮಾಹಿತಿ ನೀಡುವಂತೆ ಕೋರಿ ಇಂದ್ರಜಿತ್ ಲಂಕೇಶ್ ಅವರಿಗೆ ನೋಟಿಸ್ ನೀಡಿದ್ದಾರೆ. ಅಷ್ಟೇ ಅಲ್ಲದೆ, ಬೆಂಗಳೂರು ಪೊಲೀಸರು ಡ್ರಗ್ಸ್ ವಿರುದ್ಧ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಡಾರ್ಕ್‍ನೆಟ್ ಮೂಲಕ ನಡೆಯುವ ದಂಧೆಯನ್ನೂ ಭೇದಿಸಿದ್ದೇವೆ. ಮಾಹಿತಿ ನೀಡಲು ಉಚಿತ ಸಹಾಯವಾಣಿ 1098 ಕೆಲಸ ಮಾಡುತ್ತಿದೆ ಎಂದು ಸಿಸಿಬಿಯ ಜಂಟಿ ಆಯುಕ್ತ ಸಂದೀಪ್ ಪಾಟೀಲ ಹೇಳಿದ್ದಾರೆ.

Comments are closed.