
ಪ್ರೋತ್ಸಾಹಧನ ಪ್ರತಿಭಾನ್ವೇಷಣೆಗೆ ಪ್ರೇರಕ : ಶಿಕ್ಷಕಿ ವಂದನಾ ರೈ
ಮಂಗಳೂರು, ಆ.26: ನನ್ನ ಆನ್‌ಲೈನ್ ತರಗತಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಮಿಲಿಯನ್ಸ್‌ಗೂ ಮಿಕ್ಕಿದ ಪ್ರತ್ಯುತ್ತರಗಳು ಬರುತ್ತ ಶುಭಾಶಶಯಗಳ ಸುರಿಮಳೆಯೇ ಹರಿಯುತ್ತಿವೆ. ಅದರ ಮಧ್ಯೆಯಲ್ಲೊಬ್ಬರು ಡಾ| ಅಬ್ದುಲ್ ಶಕೀಲ್ ಎಂಬ ನಮ್ಮೂರ ಸಹೃದಯಿ ಸೌದಿ ಅರೇಬಿಯಾದಿಂದ ನನ್ನ ಬಗ್ಗೆ ತಿಳಿದು ಕಂಡುಹಿಡಿದು ಕರೆಮಾಡಿ ಸಹಾಯಸ್ತ ಚಾಚುವ ಬಗ್ಗೆ ತಿಳಿಸಿದರಲ್ಲದೆ ಅವರು ಆ ಮೊತ್ತವನ್ನು ಇಲ್ಲಿ ನನಗೆ ಹಸ್ತಾಂತರಿಸಿರುವುದು ಸ್ತುತ್ಯರ್ಹ.
ಶಿಕ್ಷಕರಿಗೆ ಅನೇಕ ತಿಂಗಳಿಂದ ಸಂಬಳ ಬಾರದಿದ್ದರೂ ಶಾಲಾ ಆಡಳಿತ ಮಂಡಳಿಯಾ ವಿದ್ಯಾಥಿಗಳ ಪಾಲಕರು ನೀಡುವ ಸಂಭಾವನೆಯೇ ಆಧಾರವಾಗಿದೆ. ಇಂತಹ ಸಮಯದಲ್ಲಿ ನಮ್ಮಂತಹವರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಇಂತಹ ಗಣ್ಯರ ಸಹಾಯಸ್ತ ಪ್ರೇರಣೆಯಾಗಿ ಶಕ್ತಿ ತುಂಬಿದೆ. ಪ್ರೋತ್ಸಾಹಧನ ಪ್ರತಿಭಾನ್ವೇಷಣೆಗೆ ಪ್ರೇರಣೆ ಎಂದು ಕಾರ್ಕಳದ ಜೇಸಿಸ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ವಂದನಾ ಗೋಪಾಲ್ ರೈ ತಿಳಿಸಿದರು.
ನನ್ನ ಅಪ್ರತಿಮ ಪ್ರತಿಭೆಯನ್ನು ಗುರುತಿಸಿ ಮಂಗಳೂರು ದೇರಳಕಟ್ಟೆ ರೆಂಜಡಿ ಮೂಲತಃ ಸೌದಿ ಅರೇಬಿಯಾ ಇಲ್ಲಿನ ಡಾ| ಅಬ್ದುಲ್ ಶಕೀಲ್ ಮಾಧ್ಯಮಗಳ ಮೂಲಕ ತಿಳಿದು ಕೊಡಮಾಡಿದ ಪ್ರತಿಭಾ ಪ್ರೊತ್ಸಾಹನಿಧಿ ಸ್ವೀಕರಿಸಿ ಡಾ| ಶಕೀಲ್ ಅವರಂತಹ ಇನ್ನಷ್ಟು ಸಹೃದಯಿ ಪ್ರೋತ್ಸಾಹಕರು ಹುಟ್ಟಿ ನಾಡಿನ ಶಿಕ್ಷಕರಿಗೆ ಪ್ರೇರಣಾಶಕ್ತಿ ಆಗಲಿ ಎಂದರು.
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ರಾಜ್ಯ ಇದರ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಮತ್ತು ಸದಸ್ಯ ಪತ್ರಕರ್ತ ಅರೀಫ್ ಕಲ್ಕಟ್ಟ ಇವರ ಸಹಯೋಗದಲ್ಲಿ ಪರಂಪರ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ ಕಾರ್ಕಾಳ ಮುಖ್ಯಕಾರ್ಯ ನಿರ್ವಣಾಧಿಕಾರಿ ಗಂಗಾಧರ್ ಪಣಿಯೂರು, ಹ್ಯೂಮನಿಟಿ ಕ್ಲಬ್ ಬಂಟ್ವಾಳ ಇದರ ಸದಸ್ಯ, ಪತ್ರಕರ್ತ ಜೇಸಿ ಸಂದೀಪ್ ಎಲ್.ಸಾಲ್ಯಾನ್ ಉಪಸ್ಥಿತರಿದ್ದು ಕಾರ್ಕಳದ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಗೆ ತೆರಳಿ ಡಾ| ಶಕೀಲ್ ಕೊಡಮಾಡಿದ ಪ್ರೊತ್ಸಾಹನಿಧಿಯನ್ನು ವಂದನಾ ರೈ ಇವರಿಗೆ ಹಸ್ತಾಂತರಿಸಿ ಶುಭಾರೈಸಿದರು.
ಕಾರ್ಕಳ ತಾಲೂಕು ಬಜೆಗೋಳಿ ನಲ್ಲೂರು ಗ್ರಾಮೀಣ ಪ್ರದೇಶದ ನಿವಾಸಿ, ಸಾಧನೆಗಳ ಸರದಾರೆ, ಪ್ರತಿಭಾನ್ವಿತ ಶಿಕ್ಷಕಿ ವಂದನಾ ಇವರ ಮಕ್ಕಳಿಗೆ ಕಲಿಸುವ ವಿಭಿನ್ನಶೈಲಿಯ ಪ್ರಯತ್ನ ಅಭಿನಂದನೀಯ. ಇಂತಹ ಕಾರ್ಯತತ್ಪರತೆ ಇನ್ನೂ ಹೆಚ್ಚಿನ ಶಿಕ್ಷಕರಲ್ಲಿ ಆವಿರ್ಭಾವಗೊಂಡು ರಾಷ್ಟ್ರದ ಭಾವೀ ಪ್ರಜೆಗಳಾದ ನಮ್ಮ ಮಕ್ಕಳನ್ನು ಸದೃಢ, ಸತ್ಪ್ರಜೆಗಳಾಗಿ ಸನ್ನದ್ಧರಾಗಿಸುವಲ್ಲಿ ಮತ್ತಷ್ಟು ಶಿಕ್ಷಕರು ತಮ್ಮನ್ನು ಪರಿಚಯಿಸಬೇಕು.
ಇದು ನನ್ನದು ಬರೇ ಪ್ರೀತಿಪೂರ್ವಕ ಗೌರವಧನ ಅಷ್ಟೇ. ಈ ಬಹುಮಾನ ನೀಡಲು ಅನೇಕ ಕಾರಣಗಳಿಗೆ. ಜಾಗತಿಕವಾಗಿ ತಾಂಡವವಾಡಿದ ಕೋವಿಡ್‌ನಂತಹ ಸಾಂಕ್ರಮಿಕ ರೋಗದ ಕಾಲಘಟ್ಟದಲ್ಲಿ ಶಿಕ್ಷಣಾಲಯಗಳೂ ಮುಚ್ಚಿದ್ದು ಶಿಕ್ಷಕರಿಗೂ ಸಂಬಳ ಕೈಸೇರಿಲ್ಲ ಅನ್ನುವುದನ್ನೂ ಮನವರಿಸಿ ನನ್ನ ಕಿಂಚತ್ತಿನ ಸಹಾಯಾಸ್ತ ನೀಡಿರುವೆ.
ಶಿಕ್ಷಕರ ಜೊತೆಗೂ ನಾವು ಐಕ್ಯಮತದೊಂದಿಗೆ ಇರುವುದನ್ನು ಮನಗಂಡು ಶ್ಲಾಘನೀಯ ಬಹುಮಾನ ಮೊತ್ತ ನೀಡಿರುವೆ. ಇನ್ನಷ್ಟು ಉದ್ಯಮಿಗಳು, ಸಹೃದಯಿ ಕೊಡುಗೈದಾನಿಗಳು ಮುಂದೆಬಂದು ತೆರೆಮರೆಯಲ್ಲಿನ ಇನ್ನೂ ಅನೇಕ ಶಿಕ್ಷಕರ ಜೊತೆ ನಾವೂ ಇದ್ದೇವೆ ಎಂದು ಪ್ರತಿಭಾನ್ವಿತರಿಗೆ ಪ್ರೋತ್ಸಾಹಿಸಿದ್ದಲ್ಲಿ ನಮ್ಮ ಉತ್ತೇಜನ ಶಿಕ್ಷಕರಿಗೆ ಆಸರೆಯಾಗಬಲ್ಲದು ಎಂದು ಡಾ| ಶಕೀಲ್ ತಿಳಿಸಿದ್ದಾರೆ.
ಕೋವಿಡ್ ಸಂದಿಗ್ಧ ಕಾಲದಲ್ಲಿ ಶಿಕ್ಷಕರನ್ನು ಮತ್ತು ಮಕ್ಕಳನ್ನು ಸ್ಪಂದಿಸುವಂತಹ ದಾನಿಗಳನ್ನು ಕ್ರಮೇಣವಾಗಿ ನೋಡುತ್ತಿರುವುದೇ ಹೃದಯಶ್ರೀಮಂತಿಕೆಯಾಗಿದೆ. ಒಳ್ಳೆಯ ಕೆಲಸಗಳು ತನ್ನಷ್ಟಕ್ಕೆ ಆಗುತ್ತಲೇ ಹೋಗುತ್ತಿದ್ದು ಇಂತಹ ಸಮಯದಲ್ಲಿ ಮಾನವೀಯ ನೆಲೆಯಲ್ಲಿನ ಈ ನೆರವು ಕೂಡಾ ತನ್ನಷ್ಟಕ್ಕೆ ಹರಿದುಬರುತ್ತದೆ.
ಜಾಗತೀಕರಣದ ಹುರಿಯಲ್ಲಿ ಮಾನವೀಯತೆಯು ಧಗಧಗಿಸುತ್ತಿರುವ ಸಂಕಷ್ಟದ ಸಮಯದಲ್ಲೂ ಮಾನವೀಯ ನೆಲೆಯಲ್ಲಿ ಮಾನವೀಯತೆಗೂ ಕೊರತೆಯಿಲ್ಲ ಅನ್ನುವುದಕ್ಕೆ ಈ ನೆರವು ಸಾಕ್ಷಿಯಾಗಿದೆ. ಅರ್ಥ ಮಾಡುವ ಅಂತಃರಣ ಇದ್ದಾಗ ಮಾತ್ರ ಮನುಷ್ಯರಾಗಿ ಮನುಷ್ಯರನ್ನು ಬೆಳೆಸುವ ಪ್ರೀತಿಯ ಸೆಳೆಯನ್ನು ಇಂತಹ ಸೇವೆಯಿಂದ ಕಾಣಲು ಸಾಧ್ಯ ಎಂದು ಗಂಗಾಧರ್ ಪಣಿಯೂರು ಈ ಸಂದರ್ಭದಲ್ಲಿ ತಿಳಿಸಿದರು.
Comments are closed.