ಕರಾವಳಿ

ಮರವಂತೆಯಲ್ಲಿ ದೋಣಿ ಪಲ್ಟಿ: ಮೀನುಗಾರರು ಅದೃಷ್ಟವಶಾತ್ ಪಾರು

Pinterest LinkedIn Tumblr

ಕುಂದಾಪುರ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆಯಲ್ಲಿ ದೋಣಿ ದುರಂತ ನಡೆದಿದ್ದು ಪವಾಡಸದೃಶ ರೀತಿಯಲ್ಲಿ ಮೀನುಗಾರರು ಪಾರಾಗಿದ್ದಾರೆ.

ಶ್ರೀನಿವಾಸ ಖಾರ್ವಿ ಮಾಲೀಕತ್ವದ ಆದಿ ಆಂಜನೇಯ ದೋಣಿ ಮಗುಚಿದ ಪರಿಣಾಮ ದೋಣಿ ಶ್ರೀನಿವಾಸ್ ಖಾರ್ವಿಯವರ ಕಾಲಿಗೆ ಗಂಭೀರ ಗಾಯವಾಗಿದ್ದು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾಲ್ವರು ಮೀನುಗಾರರು ಮರವಂತೆಯಲ್ಲಿ ಮೀನುಗಾರಿಕೆಯಲ್ಲಿ ನಿರತರಾಗಿದ್ದ ವೇಳೆ ಅಲೆ ರಭಸಕ್ಕೆ ದಿಬ್ಬಕ್ಕೆ ಹೊಡೆದಿರೆ. ಅದೃಷ್ಟವಶಾತ್ ಮೀನುಗಾರರು ಸಮುದ್ರದಲ್ಲಿ ಈಜಿ ತಮ್ಮ ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾರೆ. ದೋಣಿ ಮಾಲೀಕನ ಕಾಲು ಮೇಲೆ ಬಿದ್ದ ಪರಿಣಾಮ ಅವರಿಗೆ ಗಾಯವಾಗಿದ್ದು ಗಂಗೊಳ್ಳಿ 24*7 ಅಂಬುಲೆನ್ಸ್ ಮೂಲಕ ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಘಟನೆಯಲ್ಲಿ ನಾಡ ದೋಣಿಯ ಎರಡು ಇಂಜಿನ್ ಸಮುದ್ರ ಪಾಲಾಗಿದೆ.

Comments are closed.