ಕುಂದಾಪುರ: ಶೆಡ್’ವೊಂದರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದು ಈ ವೇಳೆ ಓರ್ವ ಪರಾರಿಯಾಗಿದ್ದಾನೆ. ಜಪ್ತಿ ಗ್ರಾಮದ ಇಂಬಾಳಿ ಎಂಬಲ್ಲಿ ಈ ಘಟನೆ ನಡೆದಿದೆ.
ಕಂಡ್ಲೂರು ನಿವಾಸಿಗಳಾದ ಕರಾಣಿ ಮಹಮ್ಮದ್ ನದೀಮ್(25), ಬೆಟ್ಟಿ ಮಹಮ್ಮದ್ ಅಫ್ಜಲ್ (28) ಬಂಧಿತ ಆರೋಪಿಗಳಾಗಿದ್ದು ರಯಾನ್ ಎಂಬಾತ ಪರಾರಿಯಾಗಿದ್ದಾನೆ.
ಗ್ರಾಮಾಂತರ ಠಾಣೆ ಪೊಲೀಸ್ ಉಪನಿರೀಕ್ಷಕ ರಾಜ್ ಕುಮಾರ್ ಅವರಿಗೆ ಜಪ್ತಿಗ್ರಾಮದ ಇಂಬಾಳಿಯಲ್ಲಿರುವ ವ್ಯಕ್ತಿಯೊಬ್ಬರ ಶೆಡ್ಡಿನಲ್ಲಿ ಗಾಂಜಾ ಮಾರಾಟದ ಬಗ್ಗೆ ಖಚಿತ ಮಾಹಿತಿ ಬಂದಿದ್ದು ಈ ವೇಳೆ ದಾಳಿ ನಡೆಸಿ ಆರೋಪಿತರಾದ ಕರಾಣಿ ಮಹಮ್ಮದ್ ನದೀಮ್ ಹಾಗೂ ಬೆಟ್ಟಿ ಮಹಮ್ಮದ್ ಅಫ್ಜಲ್ ರನ್ನು ಬಂಧಿಸಿದ್ದು ಸ್ಥಳದಲ್ಲಿದ್ದ ಇನ್ನೊಬ್ಬ ಆರೋಪಿಯಾದ ರಯಾನನು ತಪ್ಪಿಸಿಕೊಂಡಿದ್ದಾನೆ. ಆರೋಪಿಗಳ ಬಳಿ ಇದ್ದ 360 ಗ್ರಾಂ ತೂಕದ ಗಾಂಜಾ (ಸುಮಾರು 8000/- ಮೌಲ್ಯ) ಹಾಗೂ 2 ಬೈಕ್, ಎರಡು ಮೊಬೈಲನ್ನು ವಶಕ್ಕೆ ಪಡೆಯಲಾಗಿದೆ.
ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
Comments are closed.