ಕರಾವಳಿ

ಕುಂದಾಪುರ ಲಾಡ್ಜ್ ರೂಂನಲ್ಲಿ ಅಂದರ್-ಬಾಹರ್: 14 ಮಂದಿ ಅರೆಸ್ಟ್, 47 ಸಾವಿರ ವಶ

Pinterest LinkedIn Tumblr

ಕುಂದಾಪುರ: ನಗರದ ಲಾಡ್ಜ್ ಒಂದರಲ್ಲಿ ರೂಂ ಪಡೆದು ಇಸ್ಫೀಟ್ ಜುಗಾರಿ‌ ಆಡುತ್ತಿದ್ದ 14 ಮಂದಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ ಘಟನೆ ಆ.15 ಶನಿವಾರ ರಾತ್ರಿ ನಡೆದಿದೆ.

ಸತೀಶ, ಗಣೇಶ, ರಮೇಶ ಮೊಗವೀರ, ರಾಘವೇಂದ್ರ ಶೇರಿಗಾರ್, ಚೇತನ್ ಮೊಗವೀರ, ಸಂದೀಪ, ರಾಘವೇಂದ್ರ, ವಾಸುದೇವ, ಮಾಧವ ಮರಕಾಲ, ವಿಜಯ ಕುಮಾರ್, ಶ್ರೀಕಾಂತ, ತೇಜ ಬಿಲ್ಲವ, ಶಿವ ಮೊಗವೀರ, ಶೇಖರ ಶೆಟ್ಟಿ ಬಂಧಿತ ಆರೋಪಿಗಳಾಗಿದ್ದು ಇವರಿಂದ 47370 ರೂ. ನಗದು, 11 ಮೊಬೈಲ್‌ಗಳನ್ನು ಹಾಗೂ ಇತರೆ ಪರಿಕರ ವಶಕ್ಕೆ ಪಡೆಯಲಾಗಿದೆ.

ಕುಂದಾಪುರ ನಗರ ಠಾಣೆ ಪಿಎಸ್ಐ ಹರೀಶ್ ಆರ್ ಅವರಿಗೆ ಶಾಸ್ತ್ರೀಪಾರ್ಕ್ ಬಳಿಯ ಲಾಡ್ಜ್‌ ನ ರೂಮ್ ನಲ್ಲಿ ಇಸ್ಪೀಟ್‌ ಜುಗಾರಿ ಆಟ ನಡೆಯುತ್ತಿದೆ ಎಂದು ಮಾಹಿತಿ ದೊರೆತಿದ್ದು ಠಾಣಾ ಸಿಬ್ಬಂದಿಗಳ‌ ಜೊತೆ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳ ಸಹಿತ ಜುಗಾರಿಗೆ ಬಳಸಲಾದ ಹಣವನ್ನು ವಶಕ್ಕೆ ಪಡೆಯಲಾಗಿದೆ.

ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.