ಕರಾವಳಿ

ನಾಳೆ ಸ್ವಾತಂತ್ರ್ಯೋತ್ಸವ : ದ.ಕ.ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ – ಕಾರ್ಯಕ್ರಮದ ವಿವರ

Pinterest LinkedIn Tumblr

 

ಮಂಗಳೂರು ಆಗಸ್ಟ್ 14 : ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಸ್ವಾತಂತ್ರ್ಯೋತ್ಸವ ದಿನಾಚರಣೆ ಆಗಸ್ಟ್ 15 ರಂದು ಬೆಳಿಗ್ಗೆ 9 ಗಂಟೆಗೆ ನಗರದ ನೆಹರೂ ಮೈದಾನದಲ್ಲಿ ನಡೆಯಲಿದೆ.

ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡಲಿದ್ದಾರೆ.

ನೆಹರೂ ಮೈದಾನದಲ್ಲಿ ನಡೆಯವ ಬೆಳಿಗ್ಗಿನ ಕಾರ್ಯಕ್ರಮಗಳು ಇಂತಿವೆ:

ಬೆಳಿಗ್ಗೆ 8.45 ಗಂಟೆಗೆ ಸಮಾವೇಶ, 8.55 ಗಂಟೆಗೆ ಗಣ್ಯರ ಆಗಮನ, 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ರಾಷ್ಟ್ರಧ್ವಜಾರೋಹಣ ರಾಷ್ಟ್ರ ಗೀತೆ(ಪೊಲೀಸ್ ಬ್ಯಾಂಡಿನಲ್ಲಿ), 9.05 ಗಂಟೆಗೆ ಸಚಿವರಿಂದ ಪೆರೇಡ್ ವೀಕ್ಷಣೆ, ಗೌರವ ಸ್ವೀಕಾರ, ನಾಡಗೀತೆ, 9.15 ಗಂಟೆಗೆ ಕೋವಿಡ್-19 ವಾರಿಯರ್ಸ್‍ಗಳಿಗೆ ಸನ್ಮಾನ ಕಾರ್ಯಕ್ರಮ, 9.20 ಗಂಟೆಗೆ ಸಚಿವರು ಸ್ವಾತಂತ್ರ್ಯೋತ್ಸವ ಕುರಿತು ಸಂದೇಶ ನೀಡಲಿದ್ದಾರೆ.

10 ಗಂಟೆಗೆ ಪಥ ಸಂಚಲನ ಹಾಗೂ ಪೆರೇಡ್ ವಿಸರ್ಜನೆ ನಡೆಯಲಿದೆ.

ಸ್ವಾತಂತ್ರ್ಯೋತ್ಸವ ಸಮಾರಂಭಕ್ಕೆ ಹಾಜರಾಗುವವರು ಕಡ್ಡಾಯವಾಗಿ ಮುಖಗವಸು(ಮಾಸ್ಕ್) ಧರಿಸಬೇಕು ಹಾಗೂ ಸಾಮಾಜಿಕ ಅಂತರ ಪಾಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

Comments are closed.