ಕರಾವಳಿ

ವಿಶ್ವಹಿಂದೂ ಪರಿಷದ್ ಆಟೋ ರಿಕ್ಷಾ ಘಟಕದ ವತಿಯಿಂದ ಸೇವಾಕಾರ್ಯ : ಅಕ್ಕಿ ಬೇಳೆ ವಿತರಣೆ -ಗೌರವಾರ್ಪಣೆ

Pinterest LinkedIn Tumblr

ಮಂಗಳೂರು : ವಿಶ್ವಹಿಂದೂ ಪರಿಷದ್ – ಬಜರಂಗದಳ ಆಟೋ ರಿಕ್ಷಾ ಘಟಕ ವಿಶ್ವಶ್ರೀಯಿಂದ ಸೇವಾಕಾರ್ಯ ಮಂಗಳೂರಿನ ಕದ್ರಿಯಲ್ಲಿರುವ ವಿಶ್ವಶ್ರೀ ಕಾರ್ಯಾಲಯದಲ್ಲಿ ನಡೆಯಿತು

ಕಾರ್ಯಕ್ರಮದಲ್ಲಿ 100 ಕ್ಕೂ ಅಧಿಕ ಆಟೋ ರಿಕ್ಷಾ ಚಾಲಕರಿಗೆ ಅಕ್ಕಿ ಬೇಳೆಯನ್ನು ವಿತರಣೆ ಮಾಡಲಾಯಿತು.

1990 ರ ಅಯೋಧ್ಯೆಯ ಆಂದೋಲನದಲ್ಲಿ ಕರಸೇವಕರಾಗಿ ಪಾಲ್ಗೊಂಡ ಜಿಲ್ಲಾಧ್ಯಕ್ಷರಾದ ಶ್ರೀ ಗೋಪಾಲ್ ಕುತ್ತಾರ್ ಮತ್ತು ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್ ರವರಿಗೆ ಗೌರವಾರ್ಪಣೆ ಮಾಡಲಾಯಿತು.

ಜಿಲ್ಲಾ ಉಪಾಧ್ಯಕ್ಷರಾದ ಮನೋಹರ್ ಸುವರ್ಣ, ಜಿಲ್ಲಾ ಸೇವಾ ಪ್ರಮುಖ್ ಪ್ರವೀಣ್ ಕುತ್ತಾರ್, ಉದ್ಯಮಿಗಳಾದ ನಿತ್ಯಾನಂದ್ ಬಜ್ಪೆ, ವಿಜಯ ಕೊಟ್ಟಾರಿ ಅಡ್ಯಾರ್, ಅಶೋಕ್ ಅಡ್ಯಾರ್, ಬೋಳಾರ ಪ್ರಖಂಡ ಸಂಯೋಜಕ್ ಶರಣ್ ಕಂದುಕ, ವಿಶ್ವಹಿಂದೂ ಪರಿಷದ್ ಆಟೋ ರಿಕ್ಷಾಸಮಿತಿಯ ಪ್ರಮುಖರಾದ ವಿಶ್ವನಾಥ ಶೆಟ್ಟಿ, ಪೂಮಾಲೆ ಉರ್ವಸ್ಟೋರ್, ಬಾಲಕೃಷ್ಣ ಉರ್ವಸ್ಟೋರ್, ಚೇತನ್ ಉರ್ವಸ್ಟೋರ್, ಶ್ರೀಕಾಂತ್ ಕೊಟ್ಟಾರ, ಆನಂದ ವೀರನಗರ, ಕೃಷ್ಣ ಕೋಡಿಕಲ್ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

Comments are closed.