ಕರಾವಳಿ

ಬೇಕರಿಯಲ್ಲಿ ಒವೆನ್ ಸ್ಪೋಟಗೊಂಡು ಮಾಲಕ ಸಾವು: ಉಡುಪಿಯ ಮಾಬುಕಳದಲ್ಲಿ ಘಟನೆ

Pinterest LinkedIn Tumblr

ಉಡುಪಿ: ಬೇಕರಿಯ ಒವೆನ್ ಸ್ಪೋಟಗೊಂಡು ಬೇಕರಿ‌ ಮಾಲೀಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಉಡುಪಿ ಜಿಲ್ಲೆಯ‌ ಕೋಟ ಬಳಿಯ ಮಾಬುಕಳದಲ್ಲಿ ಬೇಕರಿ ಉತ್ಪನ್ನಗಳ ತಯಾರಿಕಾ ಘಟಕದಲ್ಲಿ ಈ‌ ಘಟನೆ‌ ನಡೆದಿದೆ.

ಒವೆನ್‌ ನಿರ್ವಹಣೆಗಾಗಿ ತೆರಳಿದಾಗ ಒವೆನ್ ಧೀಡೀರಾಗಿ ಸ್ಪೊಟಗೊಂಡು ,ಮಾಲೀಕ ರಾಬರ್ಟ್ ಫುಟಾರ್ಡೋ ಸಾವನ್ನಾಪ್ಪಿದ್ದಾರೆ. ಒವೆನ್ ಬಾಗಿಲು ಬಡಿದಿದ್ದು ಮೃತ ದೇಹ ಛಿದ್ರವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಸ್ಥಳಕ್ಕೆ ಕೋಟ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.

Comments are closed.