ಕರಾವಳಿ

ಮೂರು ಬಾರಿ ಕರಸೇವೆಯಲ್ಲಿ ಪಾಲ್ಗೊಂಡ 94 ವರ್ಷದ ಎಲ್. ಶ್ರೀಧರ್ ಭಟ್‌ರಿಗೆ ಗೌರವ ಸಮರ್ಪಣೆ

Pinterest LinkedIn Tumblr

ಮಂಗಳೂರು : ಅಯೋಧ್ಯ ಯಲ್ಲಿ ಶ್ರೀ ರಾಮ ಮಂದಿರ ದಲ್ಲಿ 3 ಬಾರಿ ಕರಸೇವೆಯಲ್ಲಿ ಪಾಲ್ಗೊಂಡ ವಿಶ್ವ ಹಿಂದೂ ಪರಿಷತ್ತಿನ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ, ಮಂಗಳ ಸೇವಾ ಸಮಿತಿ ಆಶ್ರಮದ ಅಧ್ಯಕ್ಷ ಹಾಗೂ ಗೋವನಿತಾಶ್ರಯದ ಟ್ರಸ್ಟೀ ಯಾಗಿ ಸೇವೆ ಸಲ್ಲಿಸಿದ 94 ವರ್ಷದ ಹಿರಿಯರಾದ ಎಲ್. ಶ್ರೀಧರ್ ಭಟ್ ಇವರನ್ನು ಅಯೋದ್ಯದಲ್ಲಿ ನಡೆದ ಶ್ರೀ ರಾಮ ಮಂದಿರದ ಶಿಲಾನ್ಯಾಸದ ಪುಣ್ಯ ದಿನದಂದು ಅವರ ಮನೆಯಲ್ಲಿ ಮಣ್ಣಗುಡ್ಡೆಯ ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮ ನ ಪಾದ ಮೇಯರ್ ದಿವಾಕರ್ ಪಾಂಡೇಶ್ವರ್ ಗೌರವ ಸಮರ್ಪಣೆ ಮಾಡಿದರು

.ಮ ನ ಪಾ ಸದಸ್ಯೆ ಶ್ರೀಮತಿ ಸಂಧ್ಯಾ ಮೋಹನ್, ಮಹಿಳಾ ಮೋರ್ಚಾದ ಶ್ರೀಮತಿ ರೇಖಾ ಶ್ರೀಧರ್ ಶ್ರೀಮತಿ ರಾಧಿಕಾ ಅರವಿಂದ್, ಶ್ರೀಮತಿ ಗಾಯತ್ರಿ ಭಟ್ ,ಮಣ್ಣಗುಡ್ಡೆ ಬಿಜೆಪಿ ಯ ಕಾರ್ಯದರ್ಶಿ ಮಹೇಶ್ ಕುಂದರ್ ಹಿರಿಯರಾದ ರಾಮಚಂದ್ರ ಭಂಡಾರಿ, ರಘುನಾಥ್ ಪ್ರಭು ಮತ್ತು ಗುರುಚರಣ್ ಎಚ್. ಆರ್, ಬಿ. ಮೋಹನ್ ಆಚಾರ್, ಗೋಕುಲ್ ಭಟ್, ಗಣೇಶ್ ಪ್ರಸಾದ್, ಗುರುದತ್ ಕಾಮತ್, ಶ್ರೀರಾಮ್ ಪೈ ಮುಂತಾದವರು ಉಪಸ್ಥಿತರಿದ್ದರು

Comments are closed.