ಮಂಗಳೂರು : ನಗರದ ಉರ್ವ ಕ್ರಿಕೇಟ್ ಕ್ರೀಡಾಂಗಣಕ್ಕೆ ಹೊನಲು ಬೆಳಕು ಅಳವಡಿಸುವ ಕಾಮಗಾರಿಗೆ 34 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದ್ದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಗುದ್ದಲಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಕಾಮತ್ ಅವರು, ಸ್ಥಳೀಯ ಕ್ರೀಡಾಪಟುಗಳ ಬಹುದಿನದ ಬೇಡಿಕೆಯಾಗಿದ್ದ ಈ ಕಾಮಗಾರಿಯಿಂದ ಪ್ರತಿಭೆಗಳಿಗೆ ಅನುಕೂಲವಾಗಲಿದೆ. ಉರ್ವ ಮೈದಾನದ ಅದೆಷ್ಟೋ ಪ್ರತಿಭೆಗಳು ತಮ್ಮ ಕ್ರೀಡಾ ಪ್ರತಿಭೆ ತೋರಲು ವೇದಿಕೆಯಾಗಿದೆ. ಹಾಗಾಗಿ ಇಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಗಮನಹರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮನಪಾ ಸದಸ್ಯರುಗಳಾದ ಶ್ರೀ ಮತಿ ಸಂಧ್ಯಾ ಮೋಹನ್ ಆಚಾರ್,ಗಣೇಶ್ ಕುಲಾಲ್,ಜಗದೀಶ್ ಶೆಟ್ಟಿ ಬೋಳೂರ್,ಜಯಲಕ್ಷ್ಮೀ ಶೆಟ್ಟಿ,ಜಯಶ್ರೀ ಕುಡುವ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಕುಂದರ್,ಬಿಜೆಪಿ ಮಂಡಲ ಕಾರ್ಯದರ್ಶಿ ಅಮಿತಕಲ,ರಮೇಶ್ ಹೆಗ್ಡೆ,ಬಿಜೆಪಿ ಯುವಮೋರ್ಚಾ ಜಿಲ್ಲಾ ಉಪಾದ್ಯಕ್ಷ ಅಮಿತ್ ರಾಜ್, ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಗೌತಮ್ ಸಾಲ್ಯಾನ್ ಕೊಡಿಕಲ್, ಪಕ್ಷದ ಪ್ರಮುಖರಾದ ಭಾಸ್ಕರ್ ಚಂದ್ರ ಶೆಟ್ಟಿ,ವಸಂತ ಜೆ ಪೂಜಾರಿ ವೆಂಕಟೇಶ್ ಆಚಾರ್,ಗುರುಚರಣ್ ಎಚ್ ಆರ್ ಅಮೃತ ಶೆಣೈ ರಾಧಿಕಾ ಅರವಿಂದ್, ವಿನಾಯಕ್ ಮತ್ತು ಜಗದೀಶ್ ಯುಎಫ್ ಸಿ ಉರ್ವಾ,ತಾರಾನಾಥ ಉರ್ವಾ ಮತ್ತು ಕ್ರಿಕೆಟ್ ಸಂಘ ಸಂಸ್ಥೆಗಳ ಪ್ರಮುಖಕರು ರಿಕ್ಷಾ ಚಾಲಕರು ಉರ್ವಾ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.


Comments are closed.