ಕರಾವಳಿ

ಟೀಂ ಬಿ ಹ್ಯೂಮನ್‌ನಿಂದ ಮಾನವೀಯ ಸೇವೆ: ಪುಟಾಣಿ ಆಯಿಷಾಳ ಯಶಸ್ವಿ ಶಸ್ತ್ರಚಿಕಿತ್ಸೆಗೆ ನೆರವು

Pinterest LinkedIn Tumblr

ಮಂಗಳೂರು : ಉಳ್ಳಾಲದಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಾ ಬದುಕುತ್ತಿದ್ದ ಅಲ್ತಾಫ್ ಎಂಬವರ ಒಂದುವರೆ ವರ್ಷದ ಪುಟಾಣಿ ಮಗಳು ಆಯಿಷಾ ಅನ್ನತ್ ರ ಹೃದಯ ಶಸ್ತ್ರ ಚಿಕಿತ್ಸೆ ಅಲ್ಲಾಹನ ಅನುಗ್ರಹದಿಂದ ಯಶಸ್ವಿಯಾಗಿ ನಡೆದಿದೆ ಎಂದು ಟೀಂ ಬಿ ಹ್ಯೂಮನ್ ತಂಡದ ಮುಖ್ಯಸ್ಥರು ತಿಳಿಸಿದ್ದಾರೆ.

ಮಗುವಿನ ಶ್ವಾಸಕೋಶದ ರಕ್ತನಾಳದಲ್ಲಿ ಇದ್ದ ಸಮಸ್ಯೆಯನ್ನು ನಿವಾರಿಸಲು ಇಂಡಿಯಾನ ಆಸ್ಪಿಟಲ್ ನ ವೈಧ್ಯರು ನಡೆಸಿದ ಆಪರೇಶನ್ ನಂತರ ಗುಣಮುಖವಾದ ಮಗುವು ಬಳಿಕ ಡಿಸ್ಚಾರ್ ಆಗಿ ಮನೆ ಸೇರಿದೆ.

ಆ ಮಗುವಿನ ಆರೋಗ್ಯದ ಜೊತೆ, ನಗುವು ನಲಿವಿಗೂ ಹಲವರು ಸಹಕರಿಸಿದ್ದಾರೆ. ಆ ಮಗುವಿನ ಕುಟುಂಬದ ಪ್ರಾರ್ಥನೆಯಲ್ಲಿ ತಮಗೂ ಪುಣ್ಯದ ಪಾಲು ಇದೆ. ಕೇವಲ, ದೇವನ ಸಂಪ್ರೀತಿ ಗಳಿಸಲು ತಾವೆಲ್ಲರೂ ನೆರವಾಗಿದ್ದೀರಿ. ಆಯಿಷಾ ಅನ್ನತ್ ಎಂಬ ಪುಟಾಣಿ ಕಂದಮ್ಮಳಿಗೆ ಹೊಸ ಬಾಳು ನೀಡಲು ದೇವನ ಕೃಪೆಯಿಂದ ದಾನ ನೀಡಿದ ಎಲ್ಲರಿಗೂ ಅದರ ಪ್ರತಿಫಲ ಸಿಗಲಿದೆ.

ಬಹಳ ತ್ರಾಸದ ಸಮಯ, ಸಂಕಟ ಮತ್ತು ಅಸಾಹಯಕವಾಗಿದ್ದ ಸಂದರ್ಭದಲ್ಲಿ ನೆರವು ತಲುಪಿಸಿ ಆ ಮಗುವಿನ ಸಂಸಾರಕ್ಕೆ ನೆರವಾದ ಎಲ್ಲರ ಸಂಸಾರದಲ್ಲೂ ಸುಖ – ಸಂತೃಪ್ತಿ- ನೆಮ್ಮದಿ ಇರಲಿ, ನಿಮಗೆ ಇನ್ನಷ್ಟೂ ದಾನ ನೀಡಲು ಅಲ್ಲಾಹನು ಅನುಗ್ರಹ ಕೊಡಲಿ. ನಾವು ಒಂದು ಸಣ್ಣ ನೆರವನ್ನು ತಲುಪಿಸಿದೆವು. ಅದರ ಪ್ರತಿಫಲ ಎಷ್ಟು ಮಧುರವಾಯಿತು. ಪರಸ್ಪರ ಮಾನವೀಯ ಸಂಬಂಧವನ್ನು ಜೀವಂತ ಇರಿಸುವುದೇ ಟೀಂ ಬಿ ಹ್ಯೂಮನ್ ತಂಡದ ಉದ್ದೇಶ ಎಂದು ತಂಡದ ಮುಖ್ಯಸ್ಥರು ತಿಳಿಸಿದ್ದಾರೆ.

ಈಗಾಗಲೇ ಆಸ್ಪೆತ್ರೆಯಲ್ಲಿ ಎಸ್ಟೀಮೇಟ್ ಬಿಲ್ 3.5 ಲಕ್ಷದ ಕುರಿತಂತೆ ನಮ್ಮ ತಂಡ ಮಾತನಾಡಿ ಅದನ್ನು 1.5 ಲಕ್ಷಕ್ಕೆ ನಿಲ್ಲಿಸಿತು. ನಾವು ಕಲೆಕ್ಷನ್ ಮಾಡಿರುವುದು ಒಟ್ಟು ಎರಡು ಲಕ್ಷ ಹನ್ನೆರಡು ಸಾವಿರದ ಐನೂರು, ನಮ್ಮಲ್ಲಿ ಹೆಚ್ಚುವರಿಯಾಗಿ ಬಾಕಿ ಉಳಿದದ್ದು ರೂ.62500/.

ನಮ್ಮ ತಂಡವು ಬೇರೆ ಬೇರೆ ಮೂಲಗಳ ಮೂಲಕ ನಡೆಸಿದ ಒತ್ತಾಯ, ವಿನಂತಿ ಮತ್ತು ಶಿಫಾರಸಿನ ಕಾರಣ ಬಿಲ್ಲ್ ಮೊತ್ತ ಅಷ್ಟು ಕಡಿಮೆ ಆಯಿತು. ಉಳಿದ ಹಣವು ನಮ್ಮ ಖಾತೆಯಲ್ಲಿ ಇರುತ್ತದೆ. ಇನ್ನು ಮುಂದೆ ಈ ಮಗುವಿನ ಚಿಕಿತ್ಸೆಗೆ ನಮ್ಮ ನೆರವು ಇದ್ದೇ ಇದೆ. ಹಾಗೇ, ಉಳಿದ ಮೊತ್ತ ಅಗತ್ಯ ಬಿದ್ದರೆ ಬೇರೊಂದು ರೋಗಿಯ ಚಿಕಿತ್ಸೆಗೆ ಉಪಯೋಗಿಸಲು ನಾವು ತೀರ್ಮಾನಿಸಿದ್ದೇವೆ ಎಂದು ಟೀಂ ಬಿ ಹ್ಯೂಮನ್ ತಂಡದ ಮುಖ್ಯಸ್ಥರು ತಿಳಿಸಿದ್ದಾರೆ.

Comments are closed.