ಕರಾವಳಿ

ಹೊಸಂಗಡಿ ಚೆಕ್’ಪೋಸ್ಟ್ ನಲ್ಲಿ ಕಾರ್ಯಾಚರಣೆ- ಅಕ್ರಮವಾಗಿ ಕಂಟೈನರ್’ನಲ್ಲಿಸಾಗಿಸುತ್ತಿದ್ದ ಕೋಣಗಳ ರಕ್ಷಣೆ, ಇಬ್ಬರ ಬಂಧನ

Pinterest LinkedIn Tumblr

ಕುಂದಾಪುರ: ಅಕ್ರಮವಾಗಿ, ಹಿಂಸಾತ್ಮಕವಾಗಿ ಕಂಟೈನರ್ ವಾಹನದಲ್ಲಿ 17 ಜಾನುವಾರುಗಳನ್ನು ಸಾಗಾಟ ಮಾಡುತ್ತಿರುವುದನ್ನು ಅಮಾಸೆಬೈಲು ಠಾಣೆಯ ಪೋಲಿಸರು ಹೊಸಂಗಡಿ ಚೆಕ್ ಪೋಸ್ಟ್‌ ನಲ್ಲಿ ಪತ್ತೆ ಹಚ್ಚಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳಾದ ಮೆಹಬೂಬ್ (27ವ), ಅಲ್ಲಾ ಭಕ್ಷಿ (33ವ) ಎನ್ನುವರು ಬಂಧಿತರಾಗಿದ್ದು ಹನೀಫ್ ಮಂಗಳೂರು, ಜಾಫರ್ ಸಾಧಿಕ್ ವಿರುದ್ದವೂ ಪ್ರಕರಣ ದಾಖಲಾಗಿದೆ.

ಜು.25 ಶನಿವಾರ ಬೆಳಿಗ್ಗೆ 5 ಗಂಟೆಗೆ ಹೊಸಂಗಡಿ ಚೆಕ್‌ ಪೋಸ್ಟ್ ನಲ್ಲಿ ವಾಹನ ತಪಾಸಣೆಯ ವೇಳೆ ಹುಲಿಕಲ್ ಘಾಟಿ ಕಡೆಯಿಂದ ಚೆಕ್‍ಪೋಸ್ಟ್ ಕಡೆಗೆ ಬರುತ್ತಿದ್ದ ಕೆ.ಎ 17 ಡಿ 6471 ಸಂಖ್ಯೆಯ ಕಂಟೈನರ್ ವಾಹನವನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ವಾಹನದಲ್ಲಿ 3 ಕೋಣಗಳು, 13 ಎಮ್ಮೆ ಮತ್ತು 1 ಹೋರಿಯನ್ನು ಹಿಂಸಾತ್ಮಕವಾಗಿ ತುಂಬಿಸಿ ಕಟ್ಟಿ ಹಾಕಿರುವುದು ಕಂಡು ಬಂದಿದೆ. ಹಾವೇರಿಯಿಂದ ಜಾನುವಾರುಗಳನ್ನು ಮಂಗಳೂರಿಗೆ ಕೊಂಡು ಹೋಗಲಾಗುತ್ತಿತ್ತು. ಈ ಜಾನುವಾರು ಸಾಗಾಟದ ಬಗ್ಗೆ ಯಾವುದೇ ಪರವಾನಿಗೆ ಇಲ್ಲದಿದ್ದು ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ತುಂಬಿಸಿಕೊಂಡು ಹೋಗುತ್ತಿರುವುದು ಕಂಡು ಬಂದಿರುವುದರಿಂದ ವಾಹನವನ್ನು ವಶಕ್ಕೆ ಪಡೆಯಲಾಗಿದೆ.

ಈ ಬಗ್ಗೆ ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.