ಕರಾವಳಿ

ಸಹೃದಯಿ ಸಂಘಟನಾ ಚತುರ ರಾಜು ಶ್ರೀಯಾನ್‌ ವಿಧಿವಶ : ಮುಂಬಯಿ ಕಲಾಲೋಕಕ್ಕೆ ಆಘಾತ

Pinterest LinkedIn Tumblr

ಮುಂಬೈ : ಅರುಣೋದಯ ಕಲಾನಿಕೇತನ ಸಂಸ್ಥೆಯ ಸಂಚಾಲಕ, ಚೈತನ್ಯದ ಚಿಲುಮೆ ರಾಜು ಶ್ರೀಯಾನ್ ನಾವುಂದ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.ಅವರ ಅಗಲಿಕೆಗೆ ಮುಂಬಯಿ ಕಂಬನಿ ಮಿಡಿದಿದೆ.

ನಗರದ ತುಳು ಕನ್ನಡಿಗರಿಗೆ ಚಿರಪರಿಚಿತ ಹಾಗೂ ಜನಾನುರಾಗಿ ವ್ಯಕ್ತಿತ್ವದ ಸಂಘಟನಾ ಚತುರ ಶ್ರೀ ರಾಜು ಶ್ರೀಯಾನ್ ನಾವುಂದ ಜು.23ರಂದು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಹಠಾತ್‌ ನಿರ್ಗಮನದಿಂದ ಮುಂಬಯಿ ಕಲಾ-ಸಾಂಸ್ಕೃತಿಕ ವಲಯ ದಿಗ್ಭ್ರಮೆಗೊಂಡಿದೆ.

ಗುರುವಾರ ಮುಂಜಾನೆ ತೀವ್ರ ಹೃದಯಾಘಾತದಿಂದ ಸಯನ್ ಚುನಾಭಟ್ಟಿಯ ತಮ್ಮ ನಿವಾಸದಲ್ಲಿ ರಾಜು ಶ್ರೀಯಾನ್ ಅಸುನೀಗಿದ್ದು, ಆವರಿಗೆ 46 ವರ್ಷ ವಯಸ್ಸಾಗಿತ್ತು.

ಎಂದಿನಂತೆ ಅರುಣೊದಯ ಕಲಾ ಸಂಸ್ಥೆ ಗೆ ಸಂಬಂಧಿಸಿದ ಕೆಲಸದಲ್ಲಿದ್ದ ವೇಳೆಯೆ ಎದೆ ನೋವು ಕಾಣಿಸಿಕೊಂಡು ಕೆಲ ಕ್ಷಣಗಳಲ್ಲೆ ಅವರು ತೀರಿಕೊಂಡರು.

ಅಗಾಧವಾದ ಜೀವನ ಪ್ರೀತಿ, ಸಂಘಟನಾ ಚಾತುರ್ಯ,ನಯ ವಿನಯ, ಸ್ನೇಹ ಪರತೆ ಹೊಂದಿದ್ದ ರಾಜು ಶ್ರೀಯಾನ್ ಸಕಲರಿಗೂ ಬೇಕಾದವರಾಗಿದ್ದರು. ಯುವ ಪೀಳಿಗೆಗೆ ಆದರ್ಶವಾಗಿದ್ದವರು.

ಕೋಟಕ್ ಮಹೀಂದ್ರ ಬ್ಯಾಂಕ್ನ ಹುದ್ದೆಯಲ್ಲಿದ್ದ ಅವರು ಕೆಲ ವರ್ಷದ ಹಿಂದೆ ಸ್ವಯಂ ನಿವೃತ್ತಿ ಪಡೆದು ಸ್ವಂತ ಉದ್ಯಮ ಪ್ರಾರಂಭಿಸಿದ್ದರು.

ಇವರ ಧರ್ಮಪತ್ನಿ ಶ್ರೀಮತಿ ಡಾ. ಮೀನಾಕ್ಷಿ ಶ್ರೀಯಾನ್ ಶ್ರೇಷ್ಠ ಭರತನಾಟ್ಯ ಕಲಾವಿದೆ. ತಂದೆ ಸ್ಥಾಪಿಸಿದ”ಅರುಣೋದಯ ಕಲಾ ನಿಕೇತನ” ಸಂಸ್ಥೆಯನ್ನು ಸಾವಿರಾರು ವಿದ್ಯಾರ್ಥಿಗಳಿಗೆ ಭರತ ನಾಟ್ಯವನ್ನು ಕಲಿಸುವ ಮೂಲಕ ಮುನ್ನಡೆಸುತ್ತಿದ್ದಾರೆ.

ರಾಜು ಶ್ರಿಯಾನ್‌ ಅವರು ಕನ್ನಡಿಗ ಕಲಾವಿದರ ಪರಿಷತ್ , ಸಾಹಿತ್ಯ ಪರಿಷತ್, ಮೊಗವೀರ ಸಂಘಟನೆಗಳು ಹೀಗೆ ಹತ್ತು ಹಲವು ಸಂಘಟನೆಗಳಲ್ಲಿ ತೊಡಗಿಕೊಂಡಿದ್ದರು.ಅವರದ್ದು ಬಹುಮುಖಿ ಆಸಕ್ತಿಯ ವ್ಯಕ್ತಿತ್ವ.

ಕಲೆ,ಸಾಹಿತ್ಯ,ಸಂಸ್ಕೃತಿಯ ಬಗ್ಗೆ ಅತಿಯಾದ ಕಾಳಜಿ ಹೊಂದಿದ್ದ ರಾಜು ಶ್ರೀಯಾನ್ ರವರು ಅಪಾರ ಜೀವನ ಪ್ರೀತಿಯಿದ್ದ ಸಹೃದಯ ವ್ಯಕ್ತಿ. ಮಹಾನಗರದ ಕನ್ನಡ ಸಾಂಸ್ಕೃತಿಕ ವಲಯದಲ್ಲಿ ರಾಜು ಶ್ರೀಯಾನ್ ಲವಲವಿಕೆಯಿಂದ ಓಡಾಡುತ್ತಿದ್ದ ಯುವಕ. ಶ್ರೀಯುತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಅರುಣೋದಯ”ದ ಯಶೋಗಾಥೆಯ ಸೂತ್ರದಾರ:

ಆರು ದಶಕಗಳ ಹಿಂದೆ ನೃತ್ಯ ಗುರು ಮಹಾಬಲ ಸುವರ್ಣ ದಂಪತಿ ( ಎಮ್. ಎನ್. ಸುವರ್ಣ) ಚೆಂಬೂರಿನ ಚೆಡ್ಡಾನಗರದಲ್ಲಿ ಸ್ಥಾಪಿಸಿದ ಅರುಣೋದಯ ಕಲಾ ನಿಕೇತನ ನೃತ್ಯ ಶಾಲೆಯನ್ನು ಡಾ. ಮೀನಾಕ್ಷಿ ಶ್ರೀಯಾನ್ ಅವರು ನಗರದ ತುಳು ಕನ್ನಡಿಗರ ಮುಂಚೂಣಿಯ ನೃತ್ಯ ಕಲಾ ಶಾಲೆಯಾಗಿ ಬೆಳೆಸಿದ್ದರೆ ಅದರಲ್ಲಿ ರಾಜುಶ್ರೀಯಾನ್ ಕೊಡುಗೆ ಅಪಾರ.. ಸದಾ ಹಸನ್ಮುಖಿ,ಸಂಘ ಸಂಸ್ಥೆ ಗಳ ಬಂಧುವಾಗಿ ತುಳು ಕನ್ನಡ ಜನಮಾನಸದಲ್ಲಿ ಬೆರೆತವರು ಶ್ರೀಯಾನ್. ಈ ಸಂಸ್ಥೆಯ 60 ವರ್ಷದ ಸಮಾರಂಭವನ್ನು ದಿನಪೂರ್ತಿ ವೈವಿಧ್ಯಮಯ ಕಾರ್ಯಕ್ರಮದ ಮೂಲಕ ಅವರು ಸ್ಮರಣೀಯ ಗೊಳಿಸಿದ್ದರು

ಅವರ ನಿಡುಗಾಲದ ಗೆಳೆಯ ಸಾಂಸ್ಕ್ರತಿಕ, ಸಾಹಿತ್ಯ ಲೋಕದ ವಕ್ತಾರ ಕಳ್ಳಿಗೆ ದಯಾಸಾಗರ್ ಚೌಟರ ಆಮಂತ್ರಣ ದ ಮೇರೆಗೆ ಕೆಲ ಸಮಯದ ಹಿಂದಷ್ಟೇ ಪ್ರತಿಷ್ಟಿತ ಅಳಿಕೆ ಸತ್ಯಸಾಯಿ ಲೋಕಸೇವಾ ಸಮೂಹ ಸಂಸ್ಥೆಯಲ್ಲಿ ಅರುಣೋದಯ ಕಲಾ ಸಂಸ್ಥೆ ಅನೇಕ ಗಣ್ಯರ ಸಮ್ಮುಖದಲ್ಲಿ ಅದ್ಭುತ ನೃತ್ಯ ಮಹೋತ್ಸವವನ್ನು ಸಾದರಪಡಿಸುವಲ್ಲಿ ಶ್ರೀಯಾನ್ ಮತ್ತು ಪತ್ನಿ ಗುರು ಡಾ. ಮೀನಾಕ್ಷಿ ಶ್ರೀಯಾನ್ ಜೊತೆ ತಿಂಗಳ ಕಾಲ ಅವಿರತವಾಗಿ ದುಡಿದಿದ್ದರು.

ಇಡೀ ಮುಂಬಯಿಯ ಸಂಸ್ಕ್ರತಿ ಕಲಾ ನೈಪುಣ್ಯತೆಯ ಮುಖವಾಗಿ ಈ ಕಾರ್ಯಕ್ರಮ ಬಹುಭಾಷಾ, ಬಹು ರಾಜ್ಯಗಳ ಗಣ್ಯರ ಗಮನ ಸೆಳೆದು ಅರುಣೋದಯದ ಕಿರೀಟಕ್ಕೆ ಹೊಸ ಗರಿಯಾಯಿತು.

ಆದರೆ ಇದು ರಾಜು ಮುಂದಾಳತ್ವದಲ್ಲಿ ಅರುಣೋದಯ ಕಲಾನಿಕೇತನದ ಕೊನೆಯ ಕಾರ್ಯಕ್ರಮವಾದದ್ದು ಮಾತ್ರ ವಿಷಾದನೀಯ ಸಂಗತಿ, ಸತ್ಯಸಾಯಿ ಸಂಸ್ಥೆಗಳ ಅಧ್ಯಕ್ಷ ರಿಂದ ವಿಶೇಷ ಗೌರವದ ಹಮ್ಮಿಣಿ, ಸತ್ಕಾರವನ್ನೂ ಸಂಸ್ಥೆ ಪಡೆದುಕೊಂಡಿತು ಎನ್ನುವುದು ಈ ಹೊತ್ತು ‘ಭಾರವಾದ’ ನೆನಪಾಗಿ ಉಳಿದಿದೆ.

ಯಾವುದೇ ಕಾರ್ಯವನ್ನು ಕೈಗೆತ್ತಿಕೊಂಡರೂ ತ್ರಿಕರಣಪೂರ್ವಕ ಅದರಲ್ಲಿ ತೊಡಗಿ ಯಶಗಳಿಸುವುದು ರಾಜು ಶ್ರ್ರೀಯಾನ್ ವೈಶಿಷ್ಟ್ಯ. ನೋವಿನ ಸಂಗತಿಯೆಂದರೆ, ಇತ್ತೀಚೆಗೆ ಲಾಕ್ ಡೌನ್ ನಡುವೆಯೇ ಅರುಣೋದಯ ಸ್ಥಾಪಕ ಎಂ. ಎನ್. ಸುವರ್ಣ ರ ಪತ್ನಿ( ಮೀನಾಕ್ಷಿ ಯವರ ತಾಯಿ) ಯೂ ಇಹಲೋಕ ತ್ಯಜಿಸಿದ್ದರು.

ಆಜಾತ ಶತ್ರು :

ಸದಾ ಚಟುವಟಿಕೆಯ, ಚೈತನ್ಯದ ವ್ಯಕ್ತಿಯಾಗಿದ್ದ ರಾಜು ಶ್ರೀಯಾನ್ ಇನ್ನಿಲ್ಲವೆನ್ನುವುದು ಒಳ ಮನಕ್ಕಿಳಿಯುತ್ತಿಲ್ಲ. ಸದಾ ಕಲಾ ಕ್ಷೇತ್ರದ, ಕನ್ನಡ ಸಂಘಟನೆಯ ಕುರಿತ ಮಾತು, ಏನಾದರೂ ಹೊಸತರ ಯೋಜನೆ-ಯೋಚನೆ , ಗೆಳೆಯರ ಯೋಗ ಕ್ಷೇಮದ ಚಿಂತನೆ, ನಯ ವಿನಯದ ಮಾತುಕತೆ, ಸ್ನೇಹಪರತೆ ಎಲ್ಲರೊಡನೊಂದಾಗಿ ಬೆರೆವ- ದುಡಿವ ‘ ಅಜಾತ ಶತ್ರುತ್ವ’ ಇವು ಅವರ ವ್ಯಕ್ತಿತ್ವಕ್ಕೆ ಮೆರಗು ನೀಡಿದ ಗುಣಗಳು.

ಶ್ರೀಯಾನ್ ಅಕಾಲಿಕ ಅಗಲಿಕೆ: ತುಳು-ಕನ್ನಡಿಗ ವಲಯ ದಿಗ್ಬ್ರಮೆ: 

ಸಮಾಜ ಸೇವಕ, ಕಲಾ ಸಂಘಟಕ, ಸ್ನೇಹ ಜೀವಿ ನಾವುಂದ ರಾಜು ಶ್ರೀಯಾನ್ ಅಗಲಿಕೆಗೆ ಸಮಸ್ತ ಮುಂಬಯಿಯ ಸಂಘ ಸಂಸ್ಥೆಗಳು , ಸಾಂಸ್ಕೃತಿಕ ಲೋಕ ದಿಗ್ಭ್ರಮೆಗೊಂಡಿದೆ. ಸಂಘ ಸಂಸ್ಥೆಗಳ ಮುಖ್ಯಸ್ಥರು, ನಗರದ ಎಲ್ಲ ಜಾತಿ, ಸಮುದಾಯ , ಕಲಾ ಸಂಸ್ಥೆಗಳ ಅಧ್ಯಕ್ಷ ಪದಾಧಿಕಾರಿಗಳು, ಕಲಾವಿದರು, ನಾಟಕ , ನೃತ್ಯ ಕ್ಷೇತ್ರದ ಗಣ್ಯರು,ಸಂಘಟಕರು ಅತೀವ ಸಂತಾಪ,ದುಃಖ ವ್ಯಕ್ತಪಡಿಸಿದ್ದಾರೆ.

ಗಣ್ಯರು ಉದ್ಯಮಿಗಳು ದುಃಖ ಸಂತಾಪ:

ಶ್ರೀಯಾನ್ ನಿಧನಕ್ಕೆ ನಾಡೋಜ ಡಾಕ್ಟರ್ ಜಿ ಶಂಕರ್. ಬಿ.ಎಸ್. ಕೆ.ಬಿ. ಅಸೋಸಿಯೇಷನ್ ನ ಅಧ್ಯಕ್ಷ ಡಾ. ಸುರೇಶ್ ರಾವ್, ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್. ಉಪಾಧ್ಯ, ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಘಟಕದ ಪದಾಧಿಕಾರಿಗಳು, ಬಂಟರ ಸಂಘದ ಅಧ್ಯಕ್ಷ ಪದ್ಮನಾಭ್ ಪಯ್ಯಡೆ, ಜಾಗತಿಕ ಬಂಟರ ಸಂಘಗಳ ಒಕ್ಕೂಟಗಳ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕ ಚಂದ್ರಶೇಖರ್ ಪಾಲೆತ್ತಾಡಿ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿಯ ಅಧ್ಯಕ್ಷ ರಮೇಶ್ ಬಂಗೇರ, ಮಾಜಿ ಅಧ್ಯಕ್ಷರುಗಳಾದ ಸುರೇಶ್ ಕಾಂಚನ್, ಗೋಪಾಲ್ ಪುತ್ರನ್, ಮಹಾಬಲ ಕುಂದರ್. ಹಾಗೂ ವಿವಿಧ ಸ್ಥಳೀಯ ಸಮಿತಿಯ ಕಾರ್ಯಧ್ಯಕ್ಷರು ಪದಾಧಿಕಾರಿಗಳು ಸರ್ವ ಸದಸ್ಯರು. ಮೊಗವೀರ ಬ್ಯಾಂಕಿನ ಕಾರ್ಯಾಧ್ಯಕ್ಷ ಸದಾನಂದ ಕೋಟ್ಯಾನ್ ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಕೆ.ಎಲ್. ಬಂಗೇರ, ಶ್ರೀ ಮಧು ಭಾರತ್ ಮಂಡಳಿ ಅಧ್ಯಕ್ಷ ಜಗನ್ನಾಥ ಪುತ್ರ ಕನ್ನಡಿಗ ಕಲಾವಿದರ ಪರಿಷತ್ತಿನ ಅಧ್ಯಕ್ಷ ಡಾ. ಸುರೇಂದ್ರ ಕುಮಾರ್ ಹೆಗ್ಡೆ, ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಭಂಡಾರಿ, ತುಳು ಕನ್ನಡ ಅಭಿಮಾನಿ ಬಳಗದ ಸಂಚಾಲಕ ಎರ್ಮಾಲ್ ಹರೀಶ್ ಶೆಟ್ಟಿ. ಕಲಾ ಜಗತ್ತಿನ ತೋನ್ಸೆ ವಿಜಯ್ ಕುಮಾರ್ ಶೆಟ್ಟಿ, ಶ್ರೀ ಅಯ್ಯಪ್ಪ ಭಕ್ತವೃಂದದ ಅಧ್ಯಕ್ಷ ಇನ್ನಂಜೆ ಚಂದ್ರಹಾಸ ಗುರುಸ್ವಾಮಿ. ವರ್ಲಿ ಅಪ್ಪಾಜಿ ಬೀಡು ಫೌಂಡೇಶನ್ ಅಧ್ಯಕ್ಷ ರಮೇಶ್ ಗುರುಸ್ವಾಮಿ. ಕನ್ನಡ ಕಲಾ ಕೇಂದ್ರದ ಅಧ್ಯಕ್ಷ ಬಾಲಚಂದ್ರ ರಾವ್, ಕರ್ನಾಟಕ ಸಂಘ ಮುಂಬಯಿಯ ಅಧ್ಯಕ್ಷ ಎಂ.ಎಂ. ಕೋರಿ, ಭಾರತ್ ಬ್ಯಾಂಕ್ ನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ, ಬಿಲ್ಲವರ ಅಸೋಸಿಯೇಷನ್ ನ ಅಧ್ಯಕ್ಷ ಚಂದ್ರಶೇಖರ್ ಪೂಜಾರಿ, . ದೇವಾಡಿಗ ಸಂಘದ ಅಧ್ಯಕ್ಷ ರವಿ ದೇವಾಡಿಗ, ಕುಲಾಲ ಸಂಘದ ಅಧ್ಯಕ್ಷ ಪಿ. ದೇವದಾಸ್ ಎಲ್. ಕುಲಾಲ್, ಬಾಂಬೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಕೆ. ಮುರಳಿ ಶೆಟ್ಟಿ, ಕರ್ನಾಟಕ ವಿಶ್ವಕರ್ಮ ಎಸೋಸಿಯೇಷನ್ ನ ಅಧ್ಯಕ್ಷ ಸದಾನಂದ ಆಚಾರ್ಯ, ತೀಯ ಸಮಾಜದ ಅಧ್ಯಕ್ಷ ರವಿ ಮಂಜೇಶ್ವರ, ಮಾಜಿ ಅಧ್ಯಕ್ಷ ಚಂದ್ರಶೇಖರ್ ಬೆಲ್ಚಡ, ರಜಕ ಸಂಘದ ಅಧ್ಯಕ್ಷ ಪಾಂಡು ಮಡಿವಾಳ, ಅಖಿಲ ಕರ್ನಾಟಕ ಜೈನ ಸಂಘದ ಅಧ್ಯಕ್ಷ ಮುನಿರಾಜ್ ಜೈನ್ , ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ್ ಸಾಫಲ್ಯ, ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಗಾಣಿಗ ಸಮಾಜದ ಅಧ್ಯಕ್ಷ ಬ್ರಹ್ಮಾವರ ವಾಸುದೇವ ರಾವ್, ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನದ ಸಂಸ್ಥಾಪಕ ಕೈರಬೆಟ್ಟು ವಿಶ್ವಾನಾಥ್ ಭಟ್, ಅಧಮಾರು ಮಠದ ಪ್ರಬಂಧಕ ರಾಜೇಶ್ ರಾವ್, ಪೇಜಾವರ ಮಠದ ಪ್ರಬಂಧಕ ರಾಮದಾಸ್ ಉಪಾಧ್ಯಾಯ, ಪ್ರಕಾಶ್ ಆಚಾರ್ಯ, ನಿರಂಜನ್ ಭಟ್, ಪದ್ಮಶಾಲಿ ಸಮಾಜ ಸೇವಾ ಸಂಘದ ಅಧ್ಯಕ್ಷ ಉತ್ತಮ ಶೆಟ್ಟಿಗಾರ್, ರಾಮ ರಾಜ ಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ರಾಜ್ ಕುಮಾರ್ ಕಾರ್ನಾಡ್, ಭಂಡಾರಿ ಸೇವಾ ಸಮಿತಿ ಇದರ ಅಧ್ಯಕ್ಷ ಆರ್. ಎಂ. ಭಂಡಾರಿ, ಸಾಂತಾಕ್ರೂಜ್ ಕನ್ನಡ ಸಂಘದ ಅಧ್ಯಕ್ಷ ಎಲ್. ವಿ. ಅಮೀನ್, ಹವ್ಯಕ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷ ಭಾಗವತ್, ಗೋರೆಗಾವ್ ಕರ್ನಾಟಕದ ಸಂಘದ ಅಧ್ಯಕ್ಷ ನಾರಾಯಣ್ ಮೆಂಡನ್, ಟ್ರಸ್ಟಿಗಳಾದ ಜಿ ಟಿ ಆಚಾರ್ಯ .ರಮೇಶ್ ಶೆಟ್ಟಿ ಪಯ್ಯಾರ್, ಸುರೇಂದ್ರ ಸಾಲಿಯಾನ್ ಮುಂಡ್ಕೂರು, ಮಾಜಿ ಅಧ್ಯಕ್ಷ ಭಾಸ್ಕರ್ ಶೆಟ್ಟಿ ದೇವಲಕುಂದ, ಬಿಲ್ಲವ ಚೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ನ ಅಧ್ಯಕ್ಷ ಎನ್. ಟಿ. ಪೂಜಾರಿ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ದೇವಾಡಿಗ, ಭಂಡಾರಿ ಮಹಾಮಂಡಲದ ಮಾಜಿ ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ, ವಿದ್ಯಾದಾಯಿನಿ ಸಭಾದ ಅಧ್ಯಕ್ಷ ಪುರುಷೋತ್ತಮ್ ಎಸ್. ಕೋಟ್ಯಾನ್, ಕಾರ್ಯದರ್ಶಿ ಚಿತ್ರಾಪು ಕೆ.ಎಂ. ಕೋಟ್ಯಾನ್, ಕನ್ನಡದ ಸೇನಾನಿ ಎಸ್. ಕೆ. ಸುಂದರ್, ಅಂಧೇರಿ ಕರ್ನಾಟಕ ಸಂಘದ ಅಧ್ಯಕ್ಷ ಹ್ಯಾರಿ ಸಿಕ್ವೆರಾ, ವಾಶಿ ಕನ್ನಡ ಸಂಘದ ಅಧ್ಯಕ್ಷ ಗೋಪಾಲ್ ವೈ. ಶೆಟ್ಟಿ, ಮೈಸೂರು ಅಸೋಸಿಯೇಷನ್ ನ ಅಧ್ಯಕ್ಷ ಶ್ರೀಮತಿ ಕಮಲ, ವಿಶ್ವ ಹಿಂದೂ ಪರಿಷತ್ತಿನ ಥಾಣೆ ಪ್ರಾಂತ್ಯದ ಅಧ್ಯಕ್ಷ ಪೊಲ್ಯ ಉಮೇಶ್ ಶೆಟ್ಟಿ, ಕರ್ನಿರೆ ಫೌಂಡೇಶನ್ ನ ಅಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ವಿರಾರ್- ನಾಲಾಸೋಪಾರಾ ಕರ್ನಾಟಕ ಸಂಘದ ಗೌರವ ಅಧ್ಯಕ್ಷ ಡಾ ವಿರಾರ್ ಶಂಕರ್ ಶೆಟ್ಟಿ, ಹಿರಿಯ ಪತ್ರಕರ್ತ, ದಯಾಸಾಗರ್ ಚೌಟ. ಹಿರಿಯ ಸಾಹಿತಿಗಳಾದ, ಡಾ. ವ್ಯಾಸರಾವ್ ನಿಂಜೂರು,, ಡಾ. ಜಿ. ಡಿ. ಜೋಶಿ, ಡಾ. ಸುನೀತಾ ಎಂ. ಶೆಟ್ಟಿ, ಡಾ. ಕರುಣಾಕರ್ ಎಂ. ಶೆಟ್ಟಿ, ಡಾ. ಭರತ್ ಕುಮಾರ್ ಪೊಲಿಪು, ವಿಶ್ವನಾಥ್ ಶೆಟ್ಟಿ ಪೇತ್ರಿ , ಡಾ. ಈಶ್ವರ ಅಲೆವೂರು, ಓಂದಾಸ್ ಕಣ್ಣಂಗಾರ್, ಹರೀಶ್ ಹೆಜ್ಮಾಡಿ, ಸಂಬಂಧದ ಸಂಪಾದಕ ಶೀನಿವಾಸ್ ಜೋಕಟ್ಟೆ, ಮೊಗವೀರ ಮಾಸಿಕದ ಸಂಪಾದಕ ಅಶೋಕ್ ಸುವರ್ಣ, ಸಾಫಲ್ಯದ ಸಂಪಾದಕಿ ಡಾ. ಜಿ.ಪಿ. ಕುಸುಮ, ಹವ್ಯಕದ ಸಂಪಾದಕಿ ಅಮಿತ ಭಾಗವತ್, ಅಮೂಲ್ಯದ ಸಂಪಾದಕ ಶಂಕರ್ ವೈ. ಮೂಲ್ಯ, ಮುಂಬಯಿ ನ್ಯೂಸ್ ಸಂಪಾದಕ ಹೇಮ್ ರಾಜ್ ಕರ್ಕೇರ, ತೀಯಾ ಬೆಳಕು ಇದರ ಸಂಪಾದಕ ಶ್ರೀಧರ್, ಬಂಟರವಾಣಿಯ ಸಂಪಾದಕ ಪ್ರೇಮನಾಥ್ ಮುಂಡ್ಕೂರು, ಪತ್ರಪುಷ್ಪದ ಸಂಪಾದಕ ರಾಮ್ ಮೋಹನ್ ಶೆಟ್ಟಿ ಬಳ್ಕುಂಜೆ, ಅಕ್ಷಯದ ಗೌರವ ಸಂಪಾದಕ ಎಂ. ಬಿ. ಕುಕ್ಯಾನ್, ಕನ್ನಡಿಗ ವರ್ಲ್ಡ್ ಡಾಟ್ ಕಾಮ್ ಇದರ ಮುಂಬಯಿ ಪ್ರತಿನಿಧಿ ಈಶ್ವರ್ ಐಲ್, ಕಲಾ ಸಂಘಟಕರು ಗಳಾದ ಪ್ರಕಾಶ್ ಎಂ ಶೆಟ್ಟಿ ಸುರತ್ಕಲ್ .ಕರ್ನೂರು ಮೋಹನ್ ರೈ . ಕರುಣಾಕರ್ ಶೆಟ್ಟಿ ಕುಕ್ಕುಂದೂರು . ಪದ್ಮನಾಭ ಕಟೀಲ್ . ಕಲ್ಕೂರ ಪ್ರತಿಷ್ಠಾನ ಮಂಗಳೂರು ಪ್ರವರ್ತಕ ಪ್ರದೀಪ್ ಕುಮಾರ್ ಕಲ್ಕೂರ, ಸಂಘಟಕರು, ಸಾಹಿತಿಗಳು ಮೊಗವೀರ ಸಮುದಾಯದ ಗಣ್ಯರು ಉದ್ಯಮಿಗಳು ದುಃಖ ಸಂತಾಪ ಸೂಚಿಸಿರುವರು.

ವರದಿ :ದಿನೇಶ್ ಕುಲಾಲ್

Comments are closed.