ಕರಾವಳಿ

ಪ್ರಧಾನಮಂತ್ರಿ ಮತ್ಸ್ಯ ಸಂಪದಾ ಯೋಜನಯಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ

Pinterest LinkedIn Tumblr

ಮಂಗಳೂರು ಜುಲೈ 18 : ಮೀನುಗಾರಿಕೆ ಇಲಾಖೆಯಿಂದ 2020-21ನೇ ಸಾಲಿನಲ್ಲಿಪ್ರಧಾನ ಮಂತ್ರಿ ಮತ್ಸ್ಯ ಸಂಪದಾ ಯೋಜನೆಯಡಿ ವಿವಿಧ ಕಾರ್ಯಕ್ರಮಗಳಿಗೆ ಮೀನುಗಾರರು, ಮೀನು ಕೃಷಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಮೀನು ಸಾಗಾಟಕ್ಕಾಗಿ ಇನ್ಸುಲೇಟೆಡ್‍ ಟ್ರಕ್ ಖರೀದಿ, ಮೀನು ಮಾರಾಟ ಕಿಯೋಸ್ಕ್ ಸ್ಥಾಪನೆಗೆ ಸಹಾಯ, ಐಸ್‍ಪ್ಲಾಂಟ್ ಮತ್ತುಕೋಲ್ಡ್ ಸ್ಟೋರೇಜ್ ಘಟಕ ಸ್ಥಾಪನೆ ಮತ್ತು ಮರು ನಿರ್ಮಾಣಕ್ಕೆ ಸಹಾಯಧನ, ಆಳ ಸಮುದ್ರ ಮೀನುಗಾರಿಕಾ ದೋಣಿಗಳ ನಿರ್ಮಾಣಕ್ಕೆ ಸಹಾಯ, ಮೀನುಗಾರಿಕಾ ದೋಣಿಗಳಲ್ಲಿ ಜೈವಿಕ ಶೌಚಾಲಯ ಸ್ಥಾಪನೆಗೆ ಉತ್ತೇಜನ, ಸಮುದ್ರದಲ್ಲಿ ಮೀನುಗಾರರ ಸುರಕ್ಷತೆಗೆ ಮೀನುಗಾರಿಕಾ ದೋಣಿಗಳಲ್ಲಿ ಸಂವಹನ, ಟ್ರ್ಯಾಕಿಂಗ್ ಮತ್ತು ಸುರಕ್ಷತಾ ಸಾಧನಗಳ ಅಳವಡಿಕೆಗೆ ಸಹಾಯ, ಸಾಂಪ್ರದಾಯಿಕ ಮೀನುಗಾರರಿಗೆ ಹಳೇ ದೋಣಿಗಳ ಬದಲಿಗೆ ಹೊಸ ಎಫ್‍ಆರ್‍ಪಿ ದೋಣಿಗಳ ಖರೀದಿಗೆ ಸಹಾಯ, ಸಾಂಪ್ರದಾಯಿಕ ದೋಣಿಗಳ ಮೋಟರೀಕರಣಕಾರ್ಯಕ್ರಮ, ಮೀನುಗಾರರಿಗೆ ಮತ್ತು ಮೀನುಗಾರಿಕಾ ದೋಣಿಗಳಿಗೆ ವಿಮೆ ಸೌಲಭ್ಯ, ಅಲಂಕಾರಿಕ ಮೀನುಗಳ ಉತ್ಪಾದನೆ ಮತ್ತುಮಾರಾಟಕ್ಕೆಸಹಾಯ, ಒಳನಾಡು ಮತ್ತು ಹಿನ್ನೀರು ಮೀನು/ಸಿಗಡಿ ಕೃಷಿ ಕೊಳ ನಿರ್ಮಾಣಕ್ಕೆ ಸಹಾಯ, ಒಳನಾಡು ಮತ್ತುಹಿನ್ನೀರು ಪ್ರದೇಶಗಳಲ್ಲಿ ಬಯೋಪ್ಲೋಕ್ ತಂತ್ರಜ್ಞಾನ ಬಳಸಿ ಮೀನು/ಸಿಗಡಿ ಕೃಷಿ ಕೊಳಗಳ ನಿರ್ಮಾಣಕ್ಕಾಗಿ ಸಹಾಯ, ಹಿನ್ನೀರು ಪ್ರದೇಶದಲ್ಲಿ ಏಡಿ, ಕಲ್ಲ, ಪಚ್ಚಿಲೆ ಕೃಷಿಗೆ ಸಹಾಯ, ಇತ್ಯಾದಿ ಯೋಜನೆಗಳಿರುತ್ತವೆ.
ಇದಲ್ಲದೆ ರಾಜ್ಯ ವಲಯ ಯೋಜನೆಯಡಿ ಮೀನುಗಾರಿಕೆ ಬಲೆ, ಸಲಕರಣೆ ಕಿಟ್ ಯೋಜನೆ, ಪರಿಶಿಷ್ಟ ಜಾತಿ ಮೀನುಗಾರರಿಗೆ ದೋಣಿ ನಿರ್ಮಾಣಕ್ಕೆ ಸಹಾಯ,ಗಿರಿಜನ ಉಪಯೋಜನೆಯಡಿ ಮೀನು ಮಾರಾಟ ಮಳಿಗೆ ಸ್ಥಾಪನೆ/ ವಾಹನ ಖರೀದಿಗೆ ಸಹಾಯಧನ, ಮಂಜುಗಡ್ಡೆ ಸ್ಥಾವರಗಳಿಗೆ ವಿದ್ಯುತ್ ಸಹಾಯಧನ ಯೋಜನೆಗಳಿರುತ್ತವೆ.

ಅರ್ಹ ಫಲಾನುಭವಿಗಳು ಅರ್ಜಿಯನ್ನುಅಗತ್ಯ ದಾಖಲೆಗಳೊಂದಿಗೆ ಮಂಗಳೂರು ಮೀನುಗಾರಿಕಾ ಬಂದರಿನಲ್ಲಿರುವ ತಾಲೂಕು ಮಟ್ಟದ ಮೀನುಗಾರಿಕಾ ಇಲಾಖಾ ಕಚೇರಿಗೆ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕಾ ಇಲಾಖಾ ಅಂತರ್ಜಾಲವನ್ನು ನೋಡಬಹುದು. ಮತ್ತು ದೂರವಾಣಿ ಸಂಖ್ಯೆ 0824-2451292 ನ್ನು ಸಂಪರ್ಕಿಸಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಮೀನುಗಾರಿಕಾ ಅಧಿಕಾರಿ ಇವರ ಪ್ರಕಟಣೆ ತಿಳಿಸಿದೆ.

Comments are closed.