ಕರಾವಳಿ

ಗಾಂಜಾ ಮಾರಾಟ: ಉಡುಪಿ ಡಿಸಿಐಬಿ ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನ

Pinterest LinkedIn Tumblr

ಉಡುಪಿ: ಉಡುಪಿ ಡಿಸಿಐಬಿ‌ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ಶಿವಳ್ಳಿಯ ಶೀಂಬ್ರಾ ಎಂಬಲ್ಲಿ ಬಂಧಿಸಿದ್ದಾರೆ. ಡಿಸಿಐಬಿ ಇನ್ಸ್‌ಪೆಕ್ಟರ್ ಮಂಜಪ್ಪ ಹಾಗೂ ಸಿಬ್ಬಂದಿಗಳ ತಂಡ ಈ ಕಾರ್ಯಾಚರಣೆ ನಡೆಸಿದೆ.

ಉಡುಪಿ ಶಿವಳ್ಳಿ ನಿವಾಸಿ ಅಬ್ದುಲ್ ರೌಫ್(20) ಮತ್ತು ಉಡುಪಿ‌ ಕೊಳಲಗಿರಿಯ ಅಫ್ತಾಬ್ ಆಲಿ(21) ಬಂಧಿತ ಆರೋಪಿಗಳು. ಇವರಿಂದ 1 ಕೆಜಿ 140 ಗ್ರಾಂ ಗಾಂಜಾ, 2 ಮೊಬೈಲ್ ಫೋನುಗಳು, ಸ್ಕೂಟರ್ ವಶಪಡಿಸಿಕೊಂಡಿದ್ದಾರೆ. ಈ ಸೊತ್ತುಗಳ ಒಟ್ಟು ಮೌಲ್ಯ 1 ಲಕ್ಷದ 45 ಸಾವಿರ ರೂ. ಆಗಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷ ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಕುಮಾರ್ ಚಂದ್ರ, ಡಿವೈಎಸ್ಪಿ ಟಿ.ಆರ್ ಜಯಶಂಕರ್‌ ಅವರ ಮಾರ್ಗದರ್ಶನದಲ್ಲಿ ಡಿಸಿಐಬಿ‌ ಇನ್ಸ್‌ಪೆಕ್ಟರ್ ಮಂಜಪ್ಪ ಹಾಗೂ ಅವರ ಸಿಬ್ಬಂದಿಗಳಾದ ರವಿಚಂದ್ರ,ರಾಮು ಹೆಗ್ಡೆ, ಚಂದ್ರ ಶೆಟ್ಟಿ, ಸುರೇಶ್,ಸಂತೋಷ ಕುಂದರ್,ರಾಘವೇಂದ್ರ ಉಪ್ಪುಂದ,ರಾಜ್ ಕುಮಾರ್, ದಯಾನಂದ ಪ್ರಭು,ಶಿವಾನಂದ ಹಾಗೂ ಚಾಲಕ ರಾಘವೇಂದ್ರ ಈ ಕಾರ್ಯಚರಣೆಯಲ್ಲಿ‌ ಭಾಗವಹಿಸಿದ್ದರು.

Comments are closed.