ಕರಾವಳಿ

ದ.ಕ ಜಿಲ್ಲೆಯ ಜನರಿಗೆ ಶುಭ ಸುದ್ಧಿ : ಬರೀ ಆಧಾರ್‌ ಕಾರ್ಡ್ ತೋರಿಸಿದರೆ ಖಾಸಗಿ ಆಸ್ಪತ್ರೆಯಲ್ಲೂ ಕೊರೋನಾಕ್ಕೆ ಉಚಿತ ಚಿಕಿತ್ಸೆ

Pinterest LinkedIn Tumblr

ಮಂಗಳೂರು, ಜುಲೈ.13 : ದ.ಕ ಜಿಲ್ಲೆಯ ಜನರಿಗೆ ಶುಭ ಸುದ್ದಿ, ಇನ್ನು ಮುಂದೆ ಜಿಲ್ಲೆಯ ಜನತೆಯಲ್ಲಿ ಯಾರಿಗಾದರೂ ಕೊರೋನಾ ಸೋಂಕು ಕಂಡು ಬಂದರೆ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ.

ಕೊರೋನಾ ಇದೆಯೇ ಎಂಬ ಬಗ್ಗೆ ತಪಾಸಣೆ ಇರಲಿ ಆಥವ ಚಿಕಿತ್ಸೆ ಇರಲಿ ಎಲ್ಲಾದಕ್ಕೂ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ. ಎಪಿಎಲ್ ಕಾರ್ಡ್ ಇರಲಿ ಬಿಪಿಎಲ್ ಕಾರ್ಡ್ ಇರಲಿ. ಯಾವುದೇ ಆರೋಗ್ಯ ಕಾರ್ಡ್ ನ ಅವಶ್ಯಕತೆ ಇಲ್ಲ. ಕೇವಲ ನಿಮ್ಮ ಆಧಾರ್ ಕಾರ್ಡ್ ಇದ್ದರೆ ಸಾಕು. ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಗ್ಯಾರಂಟಿ. ಮಾತ್ರವಲ್ಲ ಆಯುಷ್ಮಾನ್‌ ಭಾರತ್‌ ಯೋಜನೆಯಡಿಯಲ್ಲೂ ಖಾಸಗಿ ಆಸ್ಪತ್ರೆಯಲ್ಲೂ ಪೂರ್ಣ ಪ್ರಮಾಣದ ಉಚಿತ ಚಿಕಿತ್ಸೆ ನೀಡಲಾಗುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಇಂತಹ ಒಂದು ಶುಭ ಸುದ್ದಿ ನೀಡಿದವರು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್‌ ಪೂಜಾರಿಯವರು.

ಸೋಮವಾರ ಸುದ್ಧಿಗಾರ ಜೊತೆ ಮಾತನಾಡಿದ ಸಚಿವರು, ಯಾರಲ್ಲಿ ಆಯುಷ್ಮಾನ್‌ ಭಾರತ್‌ ಕಾರ್ಡ್ ಇರುತ್ತದೋ ಅವರಿಗೆ ಖಾಸಗಿ ಆಸ್ಪತ್ರೆಗೆ ಹೋದರೂ ಕೂಡಾ ಪೂರ್ಣ ಪ್ರಮಾಣದಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಅವರು ಬರೀ ಆಧಾರ್‌ ಕಾರ್ಡ್ ತೆಗೆದುಕೊಂಡು ಹೋದರೆ ಸಾಕು, ಬಿಪಿಎಲ್‌ ಎಪಿಎಲ್‌ ಯಾವುದೇ ಪಡಿತರ ಚೀಟಿ ಹೊಂದಿದ್ದರೂ ಕೂಡಾ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ನಮ್ಮ ಇಲಾಖೆಯಿಂದ ಎಲ್ಲಾ ಆಸ್ಪತ್ರೆಯಲ್ಲಿ ಓರ್ವ ಆರೋಗ್ಯ ಮಿತ್ರ ಇರುತ್ತಾರೆ. ಪ್ರತಿ ಆಸ್ಪತ್ರೆಯ ಮುಂಭಾಗ ಹೆಲ್ಪ್‌ ಡೆಸ್ಕ್‌ ಇರುತ್ತದೆ. ಅಲ್ಲಿ ಅವರ ಆಧಾರ್‍ ಕಾರ್ಡ್ ತೋರಿಸಿದರೂ ಸಾಕು ಕೊರೊನಾ ದೃಢಪಟ್ಟಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಸದ್ಯ ಎಲ್ಲಾ ಖಾಸಗಿ ಆಸ್ಪತ್ರೆಯಲ್ಲಿ 2 ಸಾವಿರಕ್ಕೂ ಅಧಿಕ ಬೆಡ್‌ಗಳು ಇದ್ದು ಅಗತ್ಯವಿದ್ದಲ್ಲಿ ಹಾಸ್ಟೆಲ್‌ಗಳನ್ನು ವ್ಯವಸ್ಥೆ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್‌ ಪೂಜಾರಿಯವರು ತಿಳಿಸಿದ್ದಾರೆ.

ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳಲ್ಲಿನ ವರದಿ ನೆಗೆಟಿವ್ ಸಾಧ್ಯತೆ??

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿತ್ತು. ಆದರೆ ಇನ್ನು ಮುಂದೆ ಈ ಉಚಿತ ಚಿಕಿತ್ಸೆ ಪ್ರಭಾವದಿಂದ ಖಾಸಗಿ ಆಸ್ಪತ್ರೆಗಳಲ್ಲಿ ತಪಾಷಣೆ ಮಾಡಿದವರ ಹೆಚ್ಚಿನವರ ವರದಿ ನೆಗೆಟಿವ್ ಬರುವ ಸಾಧ್ಯತೆ ಇದೆ ಎಂದು ನಗರದ ಹಿರಿಯ ಮತ್ತು ಖ್ಯಾತ ಛಾಯಾಗ್ರಾಹಕರೊಬ್ಬರು ಸಾಮಾಜಿಕ ಜಲತಾಣದಲ್ಲಿ ಬರಹವನ್ನು ಫೋಸ್ಟ್ ಮಾಡಿದ್ದು, ಈ ಬರಹಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

Comments are closed.