ಕರಾವಳಿ

ದ.ಕ.ಜಿಲ್ಲೆಯಲ್ಲಿ ಭಾನುವಾರ ದಾಖಲೆಯ196 ಮಂದಿಯಲ್ಲಿ ಸೋಂಕು ಪತ್ತೆ : ಐವರು ಮೃತ್ಯು

Pinterest LinkedIn Tumblr

ಮಂಗಳೂರು, ಜುಲೈ.13 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು ರವಿವಾರ ಮತ್ತೊಮ್ಮೆ ದಾಖಲೆಯ 196 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ಜಿಲ್ಲೆಯಲ್ಲಿ ಇದುವರೆಗೆ ದೃಢಪಟ್ಟ ಕೊರೊನಾ ಸೋಂಕು ಪ್ರಕರಣಗಳಲ್ಲಿ ರವಿವಾರ ಮತ್ತೊಮ್ಮೆ ಹೆಚ್ಚಿನ ಪ್ರಕರಣಗಳು ದಾಖಲಾಗಿದೆ. ಶನಿವಾರ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 2034 ಇತ್ತು. ಆದರೆ ರವಿವಾರ ಒಂದೇ ದಿನ 196 ಮಂದಿಯಲ್ಲಿ ಸೋಂಕು ಪತ್ತೆಯಾಗುವ ಮೂಲಕ ಸೋಕಿತರ ಸಂಖ್ಯೆ 2230ಕ್ಕೆ ಏರಿಕೆಯಾಗಿದೆ.

ಸೋಂಕಿತರ ಪೈಕಿ 20 ಪ್ರಾಥಮಿಕ ಸಂಪರ್ಕಿತರು, ಐಎಲ್‌ಐ 91, ಎಸ್‌ಎಆರ್‌ಐ 16, ವಿದೇಶದಿಂದ ಆಗಮಿಸಿದ್ದ 10, ಕಾಂಟ್ಯಾಕ್ಟ್ ಅಂಡರ್ ಟ್ರೇಸಿಂಗ್ 57, ಪ್ರೀ-ಡೆಲಿವರಿ ಸ್ಯಾಂಪಲ್‌ನಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಎಲ್ಲ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಒಂದೇ ದಿನದಲ್ಲಿ 196 ಪಾಸಿಟಿವ್ ಪ್ರಕರಣಗಳು ದಾಖಲಾಗಿರುವುದು ಜಿಲ್ಲೆಯಲ್ಲಿ ಇದೇ ಮೊದಲು. ಇದಕ್ಕಿಂತಲೂ ಆತಂಕದ ಸಂಗತಿಯೆಂದರೆ, ಇವರಲ್ಲಿ ಸೋಂಕು ಮೂಲವೇ ಪತ್ತೆಯಾಗದ ಬರೋಬ್ಬರಿ 57 ಪ್ರಕರಣಗಳಿವೆ. ಹಿಂದೆ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ, ಹೊರ ಪ್ರದೇಶಗಳಿಂದ ಬಂದವರಿಗೇ ಹೆಚ್ಚು ಪಾಸಿಟಿವ್ ಬರುತ್ತಿದ್ದರೆ, ಕೆಲ ದಿನಗಳಿಂದ ಏಕಾಏಕಿ ಸೋಂಕು ಹರಡುವ ಸ್ವರೂಪವೇ ಬದಲಾಗಿಬಿಟ್ಟಿದ್ದು, ಇದು ಜಿಲ್ಲೆಯ ಜನತೆಯ ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 2230ಕ್ಕೆ ಏರಿಕೆಯಾಗಿದೆ. 94 ಮಂದಿ ಆಸ್ಪತ್ರೆಯಿಂದ ಗುಣಮುಖ ರಾಗಿದ್ದಾರೆ ಎಂದು ಜಿಲ್ಲಾಡಳಿತ ಅಧಿಕೃತ ಮಾಹಿತಿ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಐವರು ಕೊರೋನಕ್ಕೆ ಬಲಿ:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ವ್ಯಾಪಕವಾಗಿ ಕಂಡು ಬರುತ್ತಿದ್ದು, ಸೋಂಕಿಗೆ ಬಲಿಯಾಗುವವರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರವಿವಾರ ಮತ್ತೆ ಐವರು ಕೊರೊನಾಗೆ ಬಲಿಯಾಗುವ ಮೂಲಕ ಕೋವಿಡ್‌ಗೆ ಬಲಿಯಾಗುತ್ತಿರುವವರ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬರುತ್ತಿದೆ. ನಿನ್ನೆ ಒಂದೇ ದಿನ ಮತ್ತೆ ಐವರು ಕೊರೋನಕ್ಕೆ ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ.

ಮಂಗಳೂರಿನ ಉರ್ವಾಸ್ಟೋರ್ ನ 72 ವರ್ಷದ ವೃದ್ಧ, ಬಳ್ಳಾಲ್‌ಭಾಗ್ ನಿವಾಸಿ 60 ವರ್ಷದ ವೃದ್ಧೆ, ಬಂದರು ನಿವಾಸಿ 68 ವರ್ಷದ ವೃದ್ಧೆ, ಬೆಳ್ತಂಗಡಿಯ ಪಿಲಿಚಾಮುಂಡಿಕಲ್ಲು ನಿವಾಸಿ 60 ವರ್ಷದ ವೃದ್ಧ, ಪುತ್ತೂರಿನ ಮೂಲಡ್ಕದ 50 ವರ್ಷದ ವ್ಯಕ್ತಿ ಕೂರೊನಾಗೆ ಬಲಿಯಾಗಿದ್ದಾರೆ.

ಈ ಪೈಕಿ ನಾಲ್ವರು ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಪುತ್ತೂರು ಮೂಲದ ಸೋಂಕಿತ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸಾವಿನ ಸಂಖ್ಯೆ 46 ಕ್ಕೇರಿಕೆಯಾಗಿದೆ.

ರವಿವಾರದ ಪ್ರಮುಖ ಅಂಶಗಳು :

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೂಡ ಕೊರೋನಾ ಸ್ಪೋಟ

ಜಿಲ್ಲೆಯಲ್ಲಿ ಇಂದು ಬರೋಬ್ಬರಿ 196 ಕೊರೋನಾ ಪಾಸಿಟಿವ್ ಪತ್ತೆ

ದಿನೇ ದಿನೇ ಕರಾವಳಿಯಲ್ಲಿ ಹೆಚ್ಚಾಗುತ್ತಿದೆ ಸೋಂಕಿತರ ಸಂಖ್ಯೆ

ILI – 91 ಮಂದಿಗೆ ಕೊರೋನಾ ಪಾಸಿಟಿವ್

ಸಂಪರ್ಕವೇ ಪತ್ತೆಯಾಗದ 57 ಮಂದಿಗೆ ಕೊರೋನಾ ಪಾಸಿಟಿವ್

ಪ್ರಾಥಮಿಕ ಸಂಪರ್ಕದಿಂದ 20 ಪಾಸಿಟಿವ್

SARI – 16 ಮಂದಿಗೆ ಕೊರೋನಾ ಪಾಸಿಟಿವ್

ವಿದೇಶದಿಂದ ಬಂದ 10 ಮಂದಿಗೆ ಕೊರೋನಾ ಸೋಂಕು ದೃಢ

ಹೆರಿಗೆಗಿಂತ ಮೊದಲು ಮಾಡಿದ ಟೆಸ್ಟ್‌ ‌ನಲ್ಲಿ‌ ಇಬ್ಬರು ಮಹಿಳೆಯರಿಗೆ ಕೊರೋನಾ ಸೋಂಕು

ದ.ಕ ಜಿಲ್ಲೆಯಲ್ಲಿ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುತ್ತಿದೆ ಸೋಂಕು

ಕಳೆದ ಒಂದು ವಾರದಿಂದ ಪ್ರತಿದಿನ‌ 100 ದಾಟುತ್ತಿರುವ ಸೋಂಕಿತರ ಸಂಖ್ಯೆ.

Comments are closed.