ಕರಾವಳಿ

ಕಾಪು ಠಾಣೆ ASIಗೆ ಕೊರೋನಾ ಪಾಸಿಟಿವ್: 2 ದಿನ ಠಾಣೆ ವೀರಭದ್ರ ದೇವಸ್ಥಾನಕ್ಕೆ ಸ್ಥಳಾಂತರ

Pinterest LinkedIn Tumblr

ಉಡುಪಿ: ಕಾಪು ಪೊಲೀಸ್ ಠಾಣೆಯ ಎ‌ಎಸ್ಸೈಯೊಬ್ಬರಿಗೆ ಇಂದು ಕೊರೋನ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಠಾಣೆಯನ್ನು ಎರಡು ದಿನಗಳ ಕಾಲ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ಇವರು ಕೋಟದಿಂದ ಕಾಪು ಠಾಣೆಗೆ ಬಸ್ಸಿನಲ್ಲಿ ಪ್ರತಿದಿನ ಸಂಚರಿಸುತ್ತಿದ್ದು, ಇದರಿಂದ ಇವರಿಗೆ ಪಾಸಿಟಿವ್ ಬಂದಿರಬಹುದೆಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಠಾಣೆಯನ್ನು ಎರಡು ದಿನಗಳ ಕಾಲ ಸಮೀಪದ ವೀರಭದ್ರ ದೇವಸ್ಥಾನಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿದೆ.

48 ಗಂಟೆಗಳ ಅವಧಿಯಲ್ಲಿ ಠಾಣೆಯನ್ನು ಎರಡು ಬಾರಿ ಸ್ಯಾನಿಟೈಸ್ ಮಾಡಿ, ಮೂರನೆ ದಿನಕ್ಕೆ ಠಾಣೆಯನ್ನು ಮತ್ತೆ ಪುನಾರಂಭಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Comments are closed.