ಕರಾವಳಿ

ಭಿನ್ನ ಸಾಮರ್ಥ್ಯದ ಯುವಕನಿಗೆ ಟೀಂ ಮಿಥುನ್ ರೈ ತಂಡದಿಂದ ಅರ್ಥಿಕ ಸಹಾಯ

Pinterest LinkedIn Tumblr

ಮಂಗಳೂರು : ಮಂಗಳೂರಿನ ರಿಯಾ ಹೋಪ್ ಫಾರ್ಮ್ (ರಿಯಾ ಫೌಂಡೇಶನ್) ನಲ್ಲಿ ತನ್ನ ಜೀವನದ ಕನಸು ಕಾಣುತ್ತಿದ್ದ ಭಿನ್ನ ಸಾಮರ್ಥ್ಯದ ವಿಘ್ನೇಶ್ ಎಂಬ ಹುಡುಗನಿಗೆ ಟೀಂ ಮಿಥುನ್ ರೈ ತಂಡದಿಂದ ಆರ್ಥಿಕ ಸಹಾಯ ನೀಡಿದೆ.

ಹತ್ತು ಹಲವು ರೀತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರು ಈಗಾಗಲೇ ಲಾಕ್ ಡೌನ್ ಸಂದರ್ಭ ಹಲವಾರು ಕುಟುಂಬಗಳಿಗೆ ಅಹಾರ ಕಿಟ್ ಗಳನ್ನು ನೀಡುವ ಮೂಲಕ ಬಡ ಜನತೆಯ ಕಷ್ಟಗಳಿಗೆ ಸ್ಪಂದಿಸಿದ್ದರು.

ಲಾಕ್ ಡೌನ್ ಸಂದರ್ಭದಲ್ಲಿ ರಾತ್ರಿ ಹಗಲೆನ್ನದೇ ಜಿಲ್ಲೆಯ ಹಲವೆಡೆಗಳಿಗೆ ತೆರಳಿ ಕಷ್ಟದಲ್ಲಿರುವವರನ್ನು ಗುರುತಿಸಿ, ಅವರಿಗೆ ಅಗತ್ಯ ವಸ್ತುಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದರು. ಈ ಸಂದರ್ಭದಲ್ಲಿ ಮಿಥುನ್ ರೈಯವರಿಗೆ ಇವರ ಬೆಂಬಲಿಗರು ಸಾಥ್ ನೀಡಿದ್ದರು.

ಇದೀಗ ನಗರದಲ್ಲಿ ವಾಸ್ತವ್ಯ ಹೊಂದಿರುವ ಒಂದು ಬಡ ಕುಟುಂಬ ತಮ್ಮ ಮಗ ವಿಘ್ನೇಶ ಇತರರಂತೆ ಸಮಾಜದಲ್ಲಿ ಬಾಳಬೇಕೆಂಬ ಆಸೆಯೊಂದಿಗೆ ವಿಧ್ಯಾಭ್ಯಾಸಕ್ಕಾಗಿ ಆತನಿಗೆ ತರಬೇತಿ ನೀಡುತಿದ್ದರು, ಆದರೆ ಈಗ ಆರ್ಥಿಕವಾಗಿ ಕುಗ್ಗಿ ಹೋಗಿರುವ ಕುಟುಂಬಕ್ಕೆ ತಮ್ಮ ಮಗನ ಚಿಕಿತ್ಸೆ, ಹಾಗೂ ಕಲಿಕೆಗಳಿಗೆ ಬಹಳ ತೊಂದರೆಯಾಗುತ್ತಿತ್ತು ಈ ವಿಷಯವನ್ನರಿತ ಟೀಂ ಮಿಥುನ್ ರೈ ತಂಡ ವಿಘ್ನೇಶನ ವಿದ್ಯಾಭ್ಯಾಸಕ್ಕೆ ರೂ.16,500 ಫೀಸ್ ಕಟ್ಟಿಸುವ ಮೂಲಕ ಆರ್ಥಿಕ ಸಹಾಯ ನೀಡಿದೆ.

ಶ್ರೀಮಂತ ಮನೆತನದಲ್ಲಿ ಹುಟ್ಟಿದ್ದರೂ… ತನ್ನ ಕುಟುಂಬ ಪರಿವಾರದ ಸದಸ್ಯರು ದೇಶವಿದೇಶಗಳಲ್ಲಿ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದ್ದರೂ… ತನಗೂ ಪ್ರತಿಷ್ಠಿತ ಸಂಸ್ಥೆಗಳಿಂದ ಕರೆ ಬಂದರೂ… ಎಲ್ಲವನ್ನೂ ನಿರಾಕರಿಸಿ ತಾನೂ ಮಾತ್ರ ಯಾವೂದೇ ರೀತಿಯ ಅಹಂ ಇಲ್ಲದೇ ಬಡವರ ಸೇವೆಯಲ್ಲಿ ತೊಡಗಿರುವ ಮಿಥುನ್ ರೈಯವರ ಸಾಮಾಜಿಕ ಕೆಲಸಕಾರ್ಯಗಳಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Comments are closed.