ಮಂಗಳೂರು : ನಗರದ ಕೋವಿಡ್ ಆಸ್ಪತ್ರೆಯಿಂದ ಪಾಸಿಟಿವ್ ರೋಗಿಯೊಬ್ಬ ಭಾನುವಾರ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.
ಮೂಲತಹ ಪುತ್ತುರು ದರ್ಬೆ ನಿವಾಸಿ ಕಳೆದ ಕೆಲವು ವರ್ಷಗಳಿಂದ ಮಂಗಳೂರಿನಲ್ಲಿ (ಮಂಗಳೂರಿನ ಅಜ್ಜಿ ಮನೆಯಲ್ಲಿ ವಾಸ್ತವ್ಯ) ವಾಸ್ತವ್ಯ ಮಾಡುತ್ತಿದ್ದ ದೇವರಾಜ್ 18 ಎಂಬ ಯುವಕ ತಪ್ಪಿಸಿಕೊಂಡಾತ ಎಂದು ಪೊಲೀಸರು ತಿಳಿಸಿದ್ದಾರೆ.
ಕೋವಿಡ್ 19 ರೋಗ ಲಕ್ಷಣಗಳು ಇದೆ ಎಂಬ ಶಂಕೆಯಿಂದ ಜುಲೈ 1ರಂದು ಸ್ವತ: ವೆನ್ಲಾಕ್ ಆಸ್ಪತ್ರೆಗೆ ತೆರಳಿ ತಪಾಸಣೆ ಒಳಗಾಗಿದ್ದ ದೇವರಾಜ್ ನನ್ನು ವಾರ್ಡ್ ಒಂದರಲ್ಲಿ ದಾಖಲಿಸಿಕೊಂಡ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು.
ಭಾನುವಾರ ಬಂದ ವರದಿಯಲ್ಲಿ ಈತನಿಗೆ ಕೋವಿಡ್ 19 ದೃಢ ಪಟ್ಟಿದೆ. ಈ ಹಿನ್ನೆಲೆಯಲ್ಲಿ ಅತನನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈತ ಭಾನುವಾರ ಸಂಜೆ ಸುಮಾರು 4 ಗಂಟೆಯ ಸಮಯ ವೆನ್ ಲಾಕ್ ಆಸ್ಪತ್ರೆಯ ಕೋವಿಡ್ ಬ್ಲಾಕ್ ನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.
ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಅತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅತನ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ. ಈತನ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ತಿಳಿದರೆ ಮತ್ತು ಎಲ್ಲಿಯಾದರೂ ಕಂಡು ಬಂದರೆ ನಗರ ಪೊಲೀಸ್ ಕಂಟ್ರೋಲ್ ನಂಬರ್ 9480802300 ಹಾಗೂ ಪಾಂಡೇಶ್ವರ ಪೊಲೀಸ್ ಠಾಣಾ 0824 2220530 ಈ ನಂಬರ್ ಗೆ ಮಾಹಿತಿ ನೀಡಬಹುದು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಮುಖ ಅಂಶಗಳು :
ಆರೋಪಿತ ಮೂಲತಃ ಪುತ್ತೂರು, ದರ್ಬೆ ನಿವಾಸಿ ದೇವರಾಜು(18).
ಕೋವಿಡ್ ಆಸ್ಪತ್ರೆಯಿಂದ ಕೊರೋನಾ ಸೋಂಕಿತ ಎಸ್ಕೇಪ್
ಮಂಗಳೂರು ವೆನ್ಲಾಕ್ ಕೋವಿಡ್ ಆಸ್ಪತ್ರೆಯಿಂದ ಪರಾರಿ
ದೇವರಾಜು (18)ಪರಾರಿಯಾದ ಸೋಂಕಿತ ಆರೋಪಿ
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ದರ್ಬೆ ನಿವಾಸಿ
ಮಂಗಳೂರಿನ ಅಜ್ಜಿ ಮನೆಯಲ್ಲಿ ವಾಸವಿದ್ದ ಆರೋಪಿ
ಪಾಸಿಟಿವ್ ಆಗಿದ್ದ ಹಿನ್ನಲೆ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು
ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಈತ ಕಂಡುಬಂದರೆ 9480802300 / 0824 2220530 ಗೆ ಮಾಹಿತಿ ನೀಡಲು ಪೊಲೀಸರ ಮನವಿ
Comments are closed.