ಕರಾವಳಿ

ಮಂಗಳೂರು ಕ್ರೈಂ (ಸಿಸಿಬಿ) ಬ್ರಾಂಚ್‌ನ ನಾಲ್ವರು ಪೊಲೀಸರಲ್ಲಿ ಸೋಂಕು ಧೃಢ:

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು, ಜುಲೈ.03: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದು, ಗುರುವಾರ ಕರಾವಳಿಯ ಶಾಸಕರೊಬ್ಬರಿಗೆ ಕೊರೋನಾ ಸೋಂಕು ಧೃಢಪಟ್ಟ ಮರುದಿನವೇ ಮಂಗಳೂರಿನ ನಾಲ್ವರು ಸಿಸಿಬಿ ಪೊಲೀಸರಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.

ನಗರದಲ್ಲಿ ಕಾರ್ಯನಿರ್ವಾಹಿಸುತ್ತಿರುವ ಪೊಲೀಸ್ ಇಲಾಖೆಯ ಪ್ರಮುಖ ಸಂಸ್ಥೆಯಾದ ನಗರ ಅಪರಾಧ ಪತ್ತೆದಳ (ಸಿಟಿ ಕ್ರೈಮ್ ಬ್ರಾಂಚ್ ) ದ ನಾಲ್ವರು ಪ್ರಮುಖ ಪೊಲೀಸರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಪೊಲೀಸರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದೇ ವೇಳೆ ಗುರುವಾರ ಮಂಗಳೂರಿನ ಸುರತ್ಕಲ್ ಬಳಿಯಿರುವ ಪ್ರಸಿದ್ಧ ಸಂಸ್ಥೆಯ 7 ಸಿಆರ್ ಪಿ ಎಫ್ ಸಿಬ್ಬಂದಿಗಳಲ್ಲೂ ಕೊರೊನಾ ಸೋಂಕು ದೃಢಪಟ್ಟಿದೆ. ಸಂಸ್ಥೆಯ ಹೊರ ಭಗದಲ್ಲಿ ಭದ್ರತಾ ಕಾರ್ಯವನ್ನು ಮಾಡುವ ಸಿಬ್ಬಂದಿಗಳು ಇವರಾಗಿದ್ದಾರೆ. ಈ ಏಳು ಮಂದಿಯಲ್ಲಿ ಸೋಂಕು ಇರುವುದು ಇದೀಗ ದೃಢಪಟ್ಟಿದೆ. ಪಾಸಿಟಿವ್ ಬಂದಿರುವ ಎಲ್ಲಾ ಸಿಆರ್ ಪಿ ಎಫ್ ಸಿಬ್ಬಂದಿಗಳ ಮನೆಯವರಿಗೂ ಕ್ವಾರಂಟೈನ್ ವಿಧಿಸಲಾಗಿದೆ.

ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಆರ್ಭಟ ಮುಂದುವರಿದಿದ್ದು, ಜಿಲ್ಲೆಯಲ್ಲಿ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಂಕು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಜಿಲ್ಲಾಡಳಿತ ಆರೋಗ್ಯ ಇಲಾಖೆ ವಿವಿಧ ಆಯಾಮಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆಯಾದರೂ, ಸೋಂಕು ಹೆಚ್ಚಾಗುತ್ತಲೇ ಇದೆ.

ಇದೇ ವೇಳೆ ದ.ಕ. ಜಿಲ್ಲೆಯ ಜನತೆ ಅದರಲ್ಲೂ ಮಂಗಳೂರು ನಗರದ ಜನತೆ ಸೋಂಕು ಹರಡದಂತೆ ಸರ್ಕಾರದ ಅಧಿಸೂಚನೆಗಳನ್ನು ಪಾಲಿಸಿಕೊಂಡು ಎಚ್ಚರವಾಗಿರಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

Comments are closed.