ಕರಾವಳಿ

ಕಟ್ಕೆರೆ ಕಾಳಿಕಾಂಬ ದೇವಸ್ಥಾನದಲ್ಲಿ ಕಳ್ಳರ ಕೈಚಳಕ: ಬೆಳ್ಳಿ ಖಡ್ಗ, ಪರಶು, ಡಿವಿಆರ್’ಗೆ ಕನ್ನ

Pinterest LinkedIn Tumblr

ಕುಂದಾಪುರ: ಕಳೆದ ಆರು ವರ್ಷಗಳ ಹಿಂದೆ 50ಲಕ್ಷಕ್ಕೂ ಅಧಿಕ ನಗ-ನಗದು ಕಳವಾಗಿದ್ದ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಕಟ್ಕೆರೆ ಶ್ರೀ ನಾಹಾದೇವಿ ಕಾಳಿಕಾಂಬ ಅಮ್ಮನ ದೇವಸ್ಥಾನದಲ್ಲಿ ಬುಧವಾರ ತಡರಾತ್ರಿ ಮತ್ತೆ ಕಳ್ಳರು ಕೈಚಳಕ ತೋರಿದ್ದಾರೆ. ಸೈನ್ ಇನ್ ಸೆಕ್ಯೂರಿಟಿಯವರ ಸೇಫ್ ಕುಂದಾಪುರ ಪ್ರಾಜೆಕ್ಟ್ ಸದಸ್ಯರ ಸಮಯಪ್ರಜ್ಞೆಯಿಂದ ಬಾರೀ ಕಳ್ಳತನ ತಪ್ಪಿದ‌ಂತಾಗಿದೆ.

ದೇವಸ್ಥಾನದ ಮುಖ್ಯದ್ವಾರದ ಬಾಗಿಲು ಒಡೆದು ಒಳ ಪ್ರವೇಶಿಸಿದ ಕಳ್ಳರು ದೇವಸ್ಥಾನದ ಒಳಗಿನ ದೇವಿ ಮೂರ್ತಿಯ ಕೈಯಲ್ಲಿದ್ದ ಬೆಳ್ಳಿಯ ಖಡ್ಗ, ಪರಶು (ಕೊಡಲಿ) ಕಳವುಗೈದಿದ್ದಾರೆ. ಅಲ್ಲದೆ ಬಾಗಿಲಿಗೆ ಅಳವಡಿಸಿ ಬೆಳ್ಳಿ ಲೇಪನವನ್ನು ಕಿತ್ತು ತೆಗೆಯಲು ಯತ್ನಿಸಿ ಹಾಳುಗೈದಿದ್ದಾರೆ. ಅಲ್ಲದೆ ಸಿಸಿ ಟಿವಿ ಡಿವಿಆರ್ ಹಾಗೂ ಹಾರ್ಡ್ ಡಿಸ್ಕ್ ಕದ್ದು ಪರಾರಿಯಾಗಿದ್ದಾರೆ. ದೇವಸ್ಥಾನ ಪ್ರವೇಶಕ್ಕೂ ಮೊದಲು ಸಿಸಿ ಟಿವಿ ವಯರ್ ಗಳನ್ನು ನಾಶಪಡಿಸಿದ್ದು ತಿಳಿದುಬಂದಿದೆ. ಕಳವಾದ ಬೆಳ್ಳಿ ಆಭರಣಗಳ ಒಟ್ಟು ಮೌಲ್ಯ 25 ಸಾವಿರ ಆಗಿದ್ದು ಒಂದೂವರೆ ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ನಷ್ಟವಾಗಿದೆ‌.

ಸೇಫ್ ಕುಂದಾಪುರ ಪ್ರಾಜೆಕ್ಟ್’ನವರ ಸಮಯಪ್ರಜ್ಞೆ- ತಪ್ಪಿದ ಭಾರಿ ಅನಾಹುತ..
ಕಟ್ಕೇರಿಯ ಮಹಾದೇವಿ ಕಾಳಿಕಾಂಬಾ ದೇವಸ್ಥಾನದಲ್ಲಿ ಸಿಸಿ ಟಿವಿ ಅಳವಡಿಸಿದ್ದು ಸೇಫ್ ಕುಂದಾಪುರ ಪ್ರಾಜೆಕ್ಟ್ ಸೈನ್ ಇನ್ ಸೆಕ್ಯೂರಿಟಿ ಲೈವ್ ಕ್ಯಾಮರಾ ಕಣ್ಗಾವಲು ಇದ್ದಿತ್ತು. ಸುಮಾರು 1.27 ರ ಹೊತ್ತಿಗೆ ಸಿಸಿ ಕ್ಯಾಮೆರಾ ಬಂದ್ ಆಗಿದ್ದು ಇದನ್ನು ಗಮನಿಸಿದ ಸಿಸಿ ಕ್ಯಾಮೆರಾ ವೀಕ್ಷಸುತ್ತಿದ್ದ ಸಂಸ್ಥೆಯ ಸದಸ್ಯ ಪೊಲೀಸ್ ಠಾಣೆಗೆ ತಿಳಿಸಿದ ಹಿನ್ನೆಲೆಯಲ್ಲಿ ಠಾಣೆಯಿಂದ ಬೀಟ್ ಸಿಬ್ಬಂದಿ ತಕ್ಷಣ ದೇವಸ್ಥಾನದ ಬಳಿ ಬಂದಾಗ ಯಾವುದೋ ವಾಹನ ಬಂದದ್ದನ್ನು ಅರಿತ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ದೇವಸ್ಥಾನದಲ್ಲಿ 26 ಲಕ್ಷದ ಬೆಳ್ಳಿ ಮತ್ತು ಇನ್ನಿತರೇ 5 ಲಕ್ಷದ ಮೌಲ್ಯದ ವಸ್ತುಗಳಿದ್ದು ದೊಡ್ಡದೊಂದು ಅನಾಹುತ ತಪ್ಪಿದಂತಾಗಿದೆ.ಅಲ್ಲದೆ ಇದೆ ದೇವಸ್ಥಾನ 2014 ರಲ್ಲಿ ಕಳುವಾಗಿದ್ದು ಸರಿಸುಮಾರು 10 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿತ್ತು.

ಸ್ಥಳಕ್ಕೆ ಕುಂದಾಪುರ ಎಎಸ್ಪಿ ಹರಿರಾಂ ಶಂಕರ್‌, ಸರ್ಕಲ್ ಇನ್ಸ್‌ಪೆಕ್ಟರ್ ಗೋಪಿಕೃಷ್ಣ, ಕುಂದಾಪುರ ಪಿಎಸ್ಐ ಹರೀಶ್ ಆರ್. ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.