ಮಂಗಳೂರು, ಜೂನ್.30 : ವೈದ್ಯರು ಮತ್ತು ಸಿಬ್ಬಂದಿಯಲ್ಲಿ ಕೊರೋನಾ ದೃಢಪಟ್ಟ ಹಿನ್ನೆಲೆಯಲ್ಲಿ ಆರು ದಿನಗಳ ಕಾಲ ಮಂಗಳೂರಿನ ಜಿಲ್ಲಾ ಲೇಡಿಗೋಷನ್ ಹೆರಿಗೆ ಆಸ್ಪತ್ರೆಯಲ್ಲಿನ ಸೇವೆ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಇಂದಿನಿಂದ ಜು.5ರವರೆಗೆ ಹೊರ ರೋಗಿ ಮತ್ತು ಒಳರೋಗಿ ಸೇವೆ ಸ್ಥಗಿತಗೊಂಡಿದೆ .ಆಸ್ಪತ್ರೆಯ ಹೆಚ್ಚಿನ ವೈದ್ಯರು ಮತ್ತು ಸಿಬ್ಬಂದಿ ಕ್ವಾರೆಂಟೈನ್ ನಲ್ಲಿರೋ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಆಸ್ಪತ್ರೆಯ ಎಲ್ಲ ವಿಭಾಗಗಳನ್ನು ಫ್ಯೂಮಿಗೇಶನ್ ಹಾಗೂ ಸ್ಯಾನಿಟೈಝೇಶನ್ ಮಾಡುವ ಅಗತ್ಯವಿದೆ. ರೋಗಿಗಳ ಮುಂದಿನ ಚಿಕಿತ್ಸೆಗಾಗಿ ‘ಎಕೆ-ಎಆರ್‌ಕೆ’ ಯೋಜನೆಯಡಿ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ಕಳುಹಿಸಲು ಶಿಫಾರಸು ಪತ್ರ ನೀಡಲು ನಿರ್ಧರಿಸಲಾಗಿದೆ.
ಆಸ್ಪತ್ರೆಯು ಜು. 6ರಿಂದ ಎಂದಿನಂತೆಯೇ ಕಾರ್ಯ ನಿರ್ವಹಿಸಲಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 0824- 2424001ನ್ನು (ಹೆಲ್ಪ್ ಡೆಸ್ಕ್) ಸಂಪರ್ಕಿಸ ಬಹುದು ಎಂದು ಮಂಗಳೂರಿನ ಲೇಡಿಗೋಷನ್ ಸರ್ಕಾರಿ ಹೆರಿಗೆ ಆಸ್ಪತ್ರೆ ಅಧೀಕ್ಷಕಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.