ಕರಾವಳಿ

ಮರೋಳಿ ಬಯಲು ರಂಗ ಮಂದಿರ ಕಾಮಗಾರಿಗೆ ಶಾಸಕ ಕಾಮತ್ ಗುದ್ದಲಿಪೂಜೆ

Pinterest LinkedIn Tumblr

ಮಂಗಳೂರು ನಗರ ಪಾಲಿಕೆಯ ಮರೋಳಿ ವಾರ್ಡಿನ ಜೋಡುಕಟ್ಟೆಯಲ್ಲಿ ಬಯಲು ರಂಗ ಮಂದಿರದ ಮುಂದುವರಿದ ಕಾಮಗಾರಿಗೆ ಶಾಸಕ‌ ವೇದವ್ಯಾಸ್ ಕಾಮತ್ ಗುದ್ದಲಿಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಶಾಸಕ ಕಾಮತ್, ಬಯಲು ರಂಗ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದರಿಂದ ಅಭಿವೃದ್ಧಿಪಡಿಸಲು ಸಾರ್ವಜನಿಕರ ಬೇಡಿಕೆಯ ಮೇರೆಗೆ 25 ಲಕ್ಷ ರೂಪಾಯಿ ಬಿಡುಗಡೆಗೊಳಿಸಲಾಗಿದೆ ಎಂದಿದ್ದಾರೆ.

ಮರೋಳಿ ಪರಿಸರದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುದರಿಂದ ಸಾರ್ವಜನಿಕರಿಗೆ ಉಪಯೋಗಕ್ಕಾಗಿ ಬಯಲು ರಂಗ ಮಂದಿರದ ಅವಶ್ಯಕತೆಯನ್ನು ಮನಗಂಡು ಮುಖ್ಯಮಂತ್ರಿ ವಿಶೇಷ ಅನುದಾನದಿಂದ 25 ಲಕ್ಷ ಬಿಡುಗಡೆಗೊಳಿಸಲಾಗಿದೆ. ಶೀಘ್ರವೇ ಕಾಮಗಾರಿ ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ, ಪಾಲಿಕೆ ಸದಸ್ಯರಾದ ಕೇಶವ ಮರೋಳಿ, ರೂಪಶ್ರೀ ಪೂಜಾರಿ, ಸ್ಥಳೀಯ ಮುಖಂಡರಾದ ಕಿರಣ್ ಮರೋಳಿ, ಜಗದೀಶ್ ಅಡು ಮರೋಳಿ,ಅನಿಲ್ ಕೆಂಬಾರ್, ಪ್ರಶಾಂತ್, ಲೋಕೇಶ್, ರಾಘವೇಂದ್ರ ಶೆಣೈ, ವೆಂಕಟರಾಯ ಶೆಣೈ, ಪ್ರವೀಣ್ ಶೆಟ್ಟಿ ನಿಡ್ಡೇಲ್, ನವೀನ್ ಪ್ರಭು, ವಿಜಯ್ ಕುಮಾರ್,ಯೋಗೀಶ್ ಕೆ. ಸರಳ, ಮಾಲತಿ ಶೆಟ್ಟಿ, ಸಮಾಜ ಸೇವಾ ಪ್ರತಿಷ್ಠಾನ ಅದ್ಯಕ್ಷ ಜ್ಯೋತಿ ಕುಮಾರ್, ಗಣೇಶೋತ್ಸವ ಸಮಿತಿ ಮರೋಳಿ ಜೋಡುಕಟ್ಟೆ ಇದರ ಅದ್ಯಕ್ಷ ಜಗದೀಶ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಅದ್ಯಕ್ಷ ವಿಠಲ್ ಶೆಣೈ ಮರೋಳಿ, ಅಯ್ಯಪ್ಪ ಸೇವಾ ಟ್ರಸ್ಟ್ ಅದ್ಯಕ್ಷ ಶರತ್ ಕೆಂಬಾರ್, ವಿಶ್ವ ಹಿಂದೂ ಪರಿಷತ್ ಬಜರಂಗದಳ, ಮಾತೃ ಮಂಡಳಿ ದುರ್ಗಾವಾಹಿನಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

Comments are closed.