ಕರಾವಳಿ

ಕರ್ಕಿ ನಾರಾಯಣ ಹಾಸ್ಯಗಾರರ ಕಲಾತಪಸ್ಸು ಕಲಾ ರಂಗಕ್ಕೆ ಅಧಾರ : ಕಲ್ಕೂರ

Pinterest LinkedIn Tumblr

ಮಂಗಳೂರು : ಯಕ್ಷಗಾನ ಕಲೆಯನ್ನು ಒಂದು ತಪಸ್ಸನ್ನಾಗಿ ಸ್ವೀಕರಿಸಿದ ಕರ್ಕಿ ಮನೆತನದ ಶ್ರೀ ನಾರಾಯಣ ಹಾಸ್ಯಗಾರರು ಇಂದು ನಮ್ಮೊಂದಿಗಿಲ್ಲ. ಆದರೆ ಅವರು ತಮ್ಮ ಪ್ರದರ್ಶನದ ಮೂಲಕ ಆಳವಾದ ಛಾಪನ್ನು ಮೂಡಿಸಿದ್ದಾರೆ.

ನವರಸಗಳನ್ನು ಮುಖ , ಕಣ್ಣುಗಳ ಮೂಲಕ ಅಭಿವ್ಯಕ್ತಿಗೊಳಿಸುವುದರಲ್ಲಿ ನಾರಾಯಣ ಹಾಸ್ಯಗಾರರು ಸಿದ್ದ ಹಸ್ತರು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ ಕಲ್ಕೂರ ನೆನಪಿಸಿಕೊಂಡರು. ಕರ್ಕಿ ನಾರಾಯಣ ಹಾಸ್ಯಗಾರರ ಬದುಕು ಕಲಾ ಪ್ರಾವೀಣ್ಯಗಳು ಕಲಾರಂಗಕ್ಕೆ ಅಧಾರಗಳೆಂದು ಅವರು ಹೇಳಿದರು.

ಯಕ್ಷಗಾನ ವಿದ್ವಾಂಸ ಡಾ ಎಂ. ಪ್ರಭಾಕರ ಜೋಶಿ ಅವರು ಕರ್ಕಿ ಮನೆತನದ ಕಲಾ ಪರಿಯನ್ನು ತಿಳಿಸಿ ನಾರಾಯಣ ಹಾಸ್ಯಗಾರರ ಕಲೆ ಮತ್ತು ವ್ಯಕ್ತಿತ್ವಗಳನ್ನು ನೆನಪಿಸಿದರು.

ಕಲೆಯಲ್ಲಿ ಮನೆತನದ ಪರಂಪರೆಯ ಮಹತ್ವವನ್ನು ಕುರಿತು ಶಾಸ್ತ್ರಿಗಳ ಕರ್ಕೆ ಒಡನಾಟವನ್ನು ಜಿ.ಕೆ. ಭಟ್ ಸೇರಾಜೆ, ಸೀತಾರಾಮ ಭಟ್ ಸೇರಾಜೆ ವಿವರಿಸಿದರು. ಸಾಹಿತಿಗ ಳಾದ ನಿತ್ಯಾನಂದ ಕಾರಂತ, ಜನಾರ್ದನ ಹಂದೆ ಮಾತಾಡಿದರು, ಪುಷ್ಪನಮನ ಗೀತನಮನ ಅರ್ಪಿಸಲಾಯಿತು.

Comments are closed.