ಕರಾವಳಿ

ದೃಷ್ಟಿದೋಷ ಹಿನ್ನೆಲೆ ಬೈಂದೂರಿನಲ್ಲಿಂದು‌ ಸಹಾಯಕರ ಸಹಕಾರದಲ್ಲಿ ಪರೀಕ್ಷೆ ಬರೆದ ಇಬ್ಬರು ವಿದ್ಯಾರ್ಥಿನಿಯರು

Pinterest LinkedIn Tumblr

ಕುಂದಾಪುರ: ಬೈಂದೂರು ತಾಲೂಕು ಕಿರಿಮಂಜೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಕಿರಿಮಂಜೇಶ್ವರ ಪರಿಸರದ ದೃಷ್ಟಿ ದೋಷವುಳ್ಳ ಇಬ್ಬರು ವಿದ್ಯಾರ್ಥಿನಿಯರು ಸಹಾಯಕರ ಸಹಕಾರದಲ್ಲಿ ಅರ್ಥಶಾಸ್ತ್ರ ಪ್ರಶ್ನೆ ಪತ್ರಿಕೆಗೆ ಉತ್ತರ ಬರೆದಿದ್ದಾರೆ. ಇವರಿಬ್ಬರ ಪರೀಕ್ಷಾ ಕೇಂದ್ರ ಬೇರೆಯಾಗಿದ್ದು ಕೊರೋನಾ ಲಾಕ್ ಡೌನ್ ತರುವಾಯ ಕಿರಿಮಂಜೇಶ್ವರ ವ್ಯಾಪ್ತಿಯಲ್ಲಿ ವಸತಿ ಹೊಂದಿದ್ದರಿಂದ ಇಲ್ಲಿಯೇ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿತ್ತು ಎನ್ನಲಾಗಿದೆ.

ದೃಷ್ಟಿದೋಷ, ಶ್ರವಣ ದೋಷವಿರುವ ವಿದ್ಯಾರ್ಥಿಗಳಿಗೆ ವಿಜ್ಞಾನ ಹಾಗೂ ಗಣಿತ ಬದಲು ಬೇರೆ ವಿಷಯಗಳ ಆಯ್ಕೆ ಮಾಡಿಕೊಂಡು ಪರೀಕ್ಷೆ ಬರೆಯಲು ಅವಕಾಶವಿರುವ ಹಿನ್ನೆಲೆ ಈ ಇಬ್ಬರು ಮಕ್ಕಳು ಅರ್ಥಶಾಸ್ತ್ರ ಹಾಗೂ ಸಮಾಜ ಶಾಸ್ತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಸಾಮಾನ್ಯ ವಿದ್ಯಾರ್ಥಿಗಳ ಹಾಗೆ ವಿಷೇಶ ಮಕ್ಕಳಿಗೂ ಪಠ್ಯವಿದ್ದು, ವಿನಾಯಿತಿ ಇರುವ ಗಣಿತ ಹಾಗೂ ವಿಜ್ಞಾನದ ಬದಲು ಅರ್ಥಶಾಸ್ತ್ರ ಆಯ್ಕೆ ಮಾಡಿಕೊಂಡಿದ್ದರಿಂದ ಬೇರೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದಿದ್ದರೂ ಈ ಇಬ್ಬರು ವಿಷೇಶ ವಿದ್ಯಾರ್ಥಿಗಳಿಗೆ ಪರೀಕ್ಷೆ ಪರೆಯಲು ಅವಕಾಶ ಮಾಡಿಕೊಡಲಾಯಿತು.

ಇಬ್ಬರು ವಿಶೇಷ ವಿದ್ಯಾರ್ಥಿನಿಯರಿಗೆ ಇಂಗ್ಲಿಷ್, ಸಮಾಜ ಶಾಸ್ತ್ರ, ಆರ್ಥಶಾಸ್ತ್ರ, ಸಮಾಜ ವಿಜ್ಞಾನ, ಕನ್ನಡ, ಹಿಂದಿ ಇದ್ದು, ಗಣಿತ ಹಾಗೂ ಇಂಗ್ಲಿಷ್ ಬದಲು ವಿದ್ಯಾರ್ಥಿನಿಯರು ಸೋಷಿಯಾಲಜಿ ಮತ್ತು ಎಕನಾಮಿಕ್ಸ್ ಆಯ್ಕೆ ಮಾಡಿಕೊಂಡಿದ್ದಾರೆ. ಎಸ್ಸೆಸ್‌ಎಲ್ಸಿ ಪರೀಕ್ಷೆ ಆರಂಭದ ದಿನ ಎಲ್ಲಾ ವಿದ್ಯಾರ್ಥಿಗಳ ಜೊತೆ ಈ ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು, ಅರ್ಥಶಾಸ್ತ್ರ ಉಳಿದ ವಿದ್ಯಾರ್ಥಿಗಳಿಗೆ ಇಲ್ಲದೆ ಇರುವುದರಿಂದ ಪರೀಕ್ಷೆ ಬರೆಯಲು ಅವಾಕಾಶ ಮಾಡಿಕೊಟ್ಟಿದ್ದು, ಮುಂದಿನ ಪರೀಕ್ಷೆಗಳ ಎಲ್ಲಾ ವಿದ್ಯಾರ್ಥಿಗಳ ಜೊತೆ ನಡೆಯಲಿದೆ. ಗಣಿತ ಹಾಗೂ ವಿಜ್ಞಾನ ಪರೀಕ್ಷೆ ನಡೆಯುವ ದಿನ ಈ ಮಕ್ಕಳು ಬರಬೇಕಾಗಿಲ್ಲ. ವಿಶೇಷ ಮಕ್ಕಳಿಗೆ ಎಲ್ಲಾ ಮಕ್ಕಳ ಜೊತೆಯಲ್ಲಿ ಪರೀಕ್ಷೆ ಬರೆಯಲು ಅವಕಾಶವಿದ್ದು, ಸಹಾಯಕರ ಸಹಕಾರದಲ್ಲಿ ಪರೀಕ್ಷೆ ಬರೆಯುವುದರಿಂದ ವಿದ್ಯಾರ್ಥಿಗಳ ಜೊತೆ ಸಹಾಯಕರಿಗೂ ಪರೀಕ್ಷೆ ಹಾಲ್ ದೊಡ್ಡದಿದ್ದರೆ ಕೊನೆಯಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ. ಆಗದಿದ್ದರೆ ಬೇರೆ ಕೊಠಡಿ ವ್ಯವಸ್ಥೆ ಮಾಡಲಾಗುತ್ತದೆ. ಪರ್ಸನ್ ವಿತ್ ಡಿಸೆಬಿಲಿಟಿಸ್ (ಪಿಡ್ಲ್ಯೂಡಿ) ಕಾಯಿದೆ ಪ್ರಕಾರ ಮಾನಸಿಕ, ದೈಹಿಕ ಹಾಗೂ ಬೇರೆ ನ್ಯೂನ್ಯತೆ ಇರುವ ವಿದ್ಯಾರ್ಥಿಗಳಿಗೆ ವಿನಾಯಿತಿ ಕೊಡುವ ಮ್ಯಾಂಟರಿ ಮಾಡಿದ್ದಾರೆ. ಕೊಡದಿದ್ದರೆ ಬೋರ್ಡ್ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಅವಕಾಶವಿದೆ ಎಂದು ಶಿಕ್ಷಣ ತಜ್ಞರು ಹೇಳುತ್ತಾರೆ.

Comments are closed.