ಕರಾವಳಿ

ರಸ್ತೆ ಅಗಲೀಕರಣಕ್ಕೆ ಅಂಗಡಿ ಮಾಲಕರ ಅಡ್ಡಿ : ಮನವೊಲಿಸುವಲ್ಲಿ ಶಾಸಕ ಕಾಮತ್ ಯಶಸ್ವಿ

Pinterest LinkedIn Tumblr

ಮಂಗಳೂರು : ನಗರದ ಹೃದಯ ಭಾಗದ ಕ್ಲಾಕ್ ಟವರ್ – ವಿಜಯ ಪೆನ್ ಮಾರ್ಟ್ ( ಹಂಪನಕಟ್ಟೆ ಸಿಗ್ನಲ್) ವರೆಗಿನ ರಸ್ತೆ ಅಗಲೀಕರಣಕ್ಕೆ ಸ್ಥಳೀಯ ಅಂಗಡಿ ಮಾಲಕರ ವಿರೋಧದಿಂದ ಕಾಮಗಾರಿ ತೊಡಕಾಗಿತ್ತು.

ಹಾಗಾಗಿ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು ಸ್ಥಳೀಯ ಪಾಲಿಕೆ ಸದಸ್ಯೆ ಪೂರ್ಣಿಮಾ ಹಾಗೂ ಅಧಿಕಾರಿಗಳೊಂದಿಗೆ ತೆರಳಿ ಅಂಗಡಿ ಮಾಲಕರ ಮನವೊಲಿಸಲು ಮಾತುಕತೆ ನಡೆಸಿದ್ದಾರೆ.

ಅದರ ಫಲಶ್ರುತಿಯಲ್ಲಿ ಅಂಗಡಿ ಮಾಲಕರೂ ಜಾಗ ಬಿಟ್ಟುಕೊಡಲು ಒಪ್ಪಿಗೆ ಸೂಚಿಸಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಅಸಾಧ್ಯವಾಗಿದ್ದ ಈ ಕಾರ್ಯ ಶಾಸಕ ವೇದವ್ಯಾಸ್ ಕಾಮತ್ ಅವರ ಪ್ರಯತ್ನದಿಂದ ಯಶಸ್ಸು ಕಂಡಿದೆ.

ಅಂಗಡಿ ಮಾಲಕರ ಮನವೊಲಿಸಲು ತೆರಳಿದ ನಿಯೋಗದಲ್ಲಿ ಸ್ಥಳೀಯ ಮನಪಾ ಸದಸ್ಯೆ ಪೂರ್ಣಿಮಾ, ಬಿಜೆಪಿ ಮುಖಂಡರು, ಸ್ಮಾರ್ಟ್ ಸಿಟಿ, ಮನಪಾ ಅಧಿಕಾರಿಗಳು‌ ಉಪಸ್ಥಿತರಿದ್ದರು.

Comments are closed.