ಕರಾವಳಿ

ಈ ಕಾರ್ಪೊರೇಟರ್ ಕೆಲಸವನ್ನು ಶ್ಲಾಘಿಸಲೇ ಬೇಕು..

Pinterest LinkedIn Tumblr

ಮಂಗಳೂರು : ಒಬ್ಬ ಮನುಷ್ಯ ಜನತೆಗೆ ಒಳಿತಾಗುವಂತಹ ಒಂದು ಒಳ್ಳೆ ಕೆಲಸ ಮಾಡಿದರೆ ಈ ಬಗ್ಗೆ ಮೆಚ್ಚುಗೆಯ ಪ್ರತಿಕ್ರಿಯೆ ಬರುವುದು ಈ ದಿನಗಳಲ್ಲಿ ಭಾರೀ ಕಡಿಮೆ್. ಆದರೆ ಒಬ್ಬ ಮನುಷ್ಯ ತಪ್ಪು ಮಾಡಿದ್ದಾನೆ ಎಂದು ಹೇಳಿದರೆ ಸಾಕು, ಅ ವ್ಯಕ್ತಿ ತಪ್ಪು ಮಾಡಿರದಿದ್ದರೂ…. ಈ ಬಗ್ಗೆ ಯಾವೂದೇ ವಿಚಾರಣೆಯೂ ಇಲ್ಲದೇ ಅ ವ್ಯಕ್ತಿಯನ್ನು ದೂರುವುದಕ್ಕೆ, ಜಲತಾಣಗಳಲ್ಲಿ ಪ್ರತಿಕ್ರಿಯೆ ನೀಡುವುದಕ್ಕೆ ಹಾಗೂ ಅದೇ ರೀತಿ ಕೆಟ್ಟ ಕೆಟ್ಟ ಭಾಷೆಗಳಲ್ಲಿ ಕಮೆಂಟ್ ಮಾಡಲ್ಲಿಕ್ಕೆ ಹಲವರಿಗೆ ಸಮಯವಿರುತ್ತದೆ.

ಅಂದರೆ ನಮ್ಮ ಸಮಾಜದಲ್ಲಿ ಒಳ್ಳೆ ಕೆಲಸಕ್ಕಿಂತ ಕೆಟ್ಟ ಕೆಲಸವೇ ಜಾಸ್ತಿ ಪ್ರಚಲಿತವಾಗುವುದು. ಒಂದು ಒಳ್ಳೆ ಕೆಲಸ ಯಾರೇ ಮಾಡಲಿ… ಅವರು ಯಾವೂದೇ ಪಕ್ಷದವರೇ ಇರಲಿ.. ಮೆಚ್ಚುಗೆ ವ್ಯಕ್ತಪಡಿಸಬೇಕಾದದ್ದು ನಮ್ಮ ಧರ್ಮ. ಆದರೆ ಇಂದು…

ಇವರ ಕಾರ್ಯವನ್ನು ಶ್ಲಾಘಿಸಲೇ ಬೇಕು:

ಈ ಮಾತು ಬರೆಯಲು ಕಾರಣ, ಕೆಲವು ದಿನಗಳ ಹಿಂದೆ ಮಂಗಳೂರಿನ ಕದ್ರಿ ಕಂಬಳ ರಸ್ತೆ ಬದಿಯಲ್ಲಿ ನೀರು ಹರಿದು ಹೋಗುವ ಚರಂಡಿಯಲ್ಲಿ ಮಣ್ಣು, ಕಸಕಡ್ಡಿಗಳು ನಿಂತು ಮಳೆ ನೀರಿನ ಹರಿವಿಗೆ ಸಮಸ್ಯೆಯಾಗಿ ನೀರು ರಸ್ತೆಯಲ್ಲೇ ಹರಿಯುವ ಮೂಲಕ ಸ್ಥಳೀಯರಿಗೆ ಭಾರೀ ತೊಂದರೆಯುಂಟಾಯಿತು.

ಈ ಬಗ್ಗೆ ಸ್ಥಳೀಯರು ಸ್ಥಳೀಯ ಮನಪಾ ಸದಸ್ಯ ಮನೋಹರ್ ಶೆಟ್ಟಿ ಕದ್ರಿಯವರ ಗಮನಕ್ಕೆ ತಂದರು. ಮಾಹಿತಿ ಸಿಗುತ್ತಿದ್ದಂತೆ ಓಡೊಡಿ ಬಂದ ಮನೋಹರ್ ಶೆಟ್ಟಿಯವರು, ಕಾರ್ಮಿಕರನ್ನು ಕರೆಸಿ, ಪಕ್ಕದಲ್ಲೇ ಇದ್ದ ಮ್ಯಾನ್ವಲ್ ( ಬರೀ ನೀರು ಹರಿದು ಹೋಗುವ) ಚೇಂಬರ್ ನೊಳಗೆ ಇಳಿದು ಪರಿಶೀಲಿಸುವಂತೆ ಹೇಳಿದರು.

ಆದರೆ ಈ ಮ್ಯಾನ್ವಲ್ ಚೇಂಬರ್ ನೊಳಗೆ ಇಳಿಯಲು ಕಾರ್ಮಿಕರು ನಿರಾಕರಿಸಿದಾಗ, ಸತಃ ಕದ್ರಿಯ ಕಾರ್ಪೊರೇಟರ್ ಕದ್ರಿ ಮನೋಹರ್ ಶೆಟ್ಟಿಯವರು ಕೂಡಲೇ ತಮ್ಮ ಮನೆಯಿಂದ ಬದಲಿ ಉಡುಪುಗಳನ್ನು ತರಿಸಿ ಮ್ಯಾನ್ವಲ್ ಚೇಂಬರ್ ಒಳಗಡೆ ಇಳಿದು ಸಮಸ್ಯೆ ಏನೆಂದು ಪರಿಶೀಲಿಸಿದರು.

ಮಾತ್ರವಲ್ಲದೇ ಅಲ್ಲಿ ಶೇಖರಣೆಗೊಂಡಿದ್ದ ಮಣ್ಣು ಹಾಗೂ ಕಸ,ಕಡ್ಡಿಗಳನ್ನು ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿಯಲು ಅನುಕೂಲ ಮಾಡಿಕೊಟ್ಟರು. ಮನೋಹರ್ ಶೆಟ್ಟಿಯವರ ಈ ಜನಪರ ಕಾರ್ಯಕ್ಕೆ ಸ್ಥಳೀಯರಾದ ರವೀಶ್ ರೈ, ಲೋಹಿತ್ ಕದ್ರಿ ಹಾಗೂ ರುಡಾಲ್ಫ್ ಐವರ್ ಲೋಬೋ ಸಹಕಾರ ನೀಡಿದರು.

ಇವರ ಈ ಜನಪರ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಇಂತಹ ಜನಪರ ಉತ್ಸಾಹಿ ಕಾರ್ಪೊರೇಟರ್ ಯಾವೂದೇ ಅಭಿವೃದ್ಧಿ ಕೆಲಸಕಾರ್ಯಗಳನ್ನು ಮಾಡಿದಾಗಲೂ ಇವರ ಬೆನ್ನು ತಟ್ಟುವವರಿಗಿಂತ ಇವರ ತೇಜೋವಧೆ ಮಾಡವವರೆ ಹೆಚ್ಚು ಮಂದಿ ಇದ್ದಾರೆ ಎನ್ನುತ್ತಾರೆ ಮನೋಹರ್ ಶೆಟ್ಟಿಯವರ ಆಪ್ತರು.

_ಸತೀಶ್ ಕಾಪಿಕಾಡ್

Comments are closed.