ಮಂಗಳೂರು ; ಮಂಗಳೂರು ಮಹಾನಗಹಕ್ರಕುಪತ್ರ ವಿತರ ಪಾಲಿಕೆ ವ್ಯಾಪ್ತಿಯ ಬೋಳೂರು ವಾರ್ಡಿನಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರು ಹಕ್ಕುಪತ್ರ ವಿತರಿಸಿದರು.
ಈ ಕುರಿತು ಮಾತನಾಡಿದ ಶಾಸಕ ಕಾಮತ್, ಬಹಳ ವರ್ಷದಿಂದ ನಡೆಯುವ ಹಕ್ಕುಪತ್ರದ ಹೋರಾಟಕ್ಕೆ ನ್ಯಾಯ ಒದಗಿಸಿದ ಸಂತೋಷವಿದೆ. ಕಳೆದ 45 ವರ್ಷಗಳಿಂದ ಬೋಳೂರು ಸ್ಮಶಾನ ಪರಿಸರ ಹಾಗೂ ಉರ್ವ ಕೊರಗಜ್ಜ ಗುಡಿ ಪರಿಸರದಲ್ಲಿ ವಾಸಿಸುವ ಅನೇಕ ಕುಟುಂಬಗಳು ತಮ್ಮ ಹಕ್ಕುಪತ್ರಕ್ಕಾಗಿ ಅಲೆದಾಡಿ ಕೊನೆಗೆ ನಾನು ಶಾಸಕನಾಗಿ ಆಯ್ಕೆಯಾದ ಪ್ರಾರಂಭದಲ್ಲಿ ನನ್ನನ್ನು ಭೇಟಿ ಮಾಡಿ ಈ ವಿಚಾರದ ಕುರಿತು ಮಾತನಾಡಿದ್ದರು.
ಆ ಸಂದರ್ಭದಲ್ಲಿ ನ್ಯಾಯ ಒದಗಿಸುವ ಭರವಸೆ ನೀಡಿದ್ದೆ. ಅದರಂತೆ ಕೊಟ್ಟ ಮಾತಿನಂತೆ ಜನರಿಗೆ ನೀಡಿದ್ದ ಭರವಸೆ ಈಡೇರಿಸಿದ ತೃಪ್ತಿ ಇದೆ ಎಂದಿದ್ದಾರೆ.
ಶಾಸಕನಾಗಿ ಆಯ್ಕೆಯಾದ ಮೊದಲರಲ್ಲಿ ಬೋಳೂರಿನ ಜನರಿಗೆ ಈ ಕುರಿತು ವಾಗ್ದಾನ ನೀಡಿದ್ದೆ. ಅಧಿಕಾರಗಳ ಜೊತೆ ಚರ್ಚಿಸಿ ತಾಂತ್ರಿಕ ತೊಡಕುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದೇವೆ. ಪರಿಶಿಷ್ಟ ಜಾತಿ – ಪರಿಶಿಷ್ಟ ಪಂಗಡಕ್ಕೆ ಸೇರಿದ 52 ಕುಟುಂಬಗಳು ಉರ್ವ ಕೊಗರಜ್ಜ ಗುಡಿ ಹಾಗೂ ಬೋಳೂರು ಸ್ಮಶಾನ ಪರಿಸರದಲ್ಲಿ ವಾಸವಾಗಿವೆ.ಆದರೆ ಈ ಜಾಗಕ್ಕೆ ಸರ್ವೆ ನಂಬರ್ ಇಲ್ಲದೆ ತಾಂತ್ರಿಕ ತೊಡಕು ಉಂಟಾಗಿತ್ತು. ಹಾಗಾಗಿ ಸರ್ವೇ ಇಲಾಖೆಸರ್ವೆ ನಡೆಸಿ ಹೊಸಸರ್ವೆ ನಂಬರ್ ನೀಡಿ ಆಮೇಲೆ ಎಲ್ಲಾ ಕುಟುಂಬಗಳಿಗೂ ಹಕ್ಕುಪತ್ರ ಮಂಜೂರು ಮಾಡಲಾಯಿತು ಎಂದು ತಿಳಿಸಿದ್ದಾರೆ.
ಸ್ಥಳೀಯ ಪಾಲಿಕೆ ಸದಸ್ಯರಾದ ಜಗದೀಶ್ ಶೆಟ್ಟಿ ಬೋಳೂರು ಮಾತನಾಡಿ, ಶಾಸಕ ವೇದವ್ಯಾಸ್ ಕಾಮತ್ ಅವರು ಹೊಸದಾಗಿ ಶಾಸಕರಾಗಿ ಆಯ್ಕೆಯಾಗಿದ್ದ ಸಂದರ್ಭದಲ್ಲಿ ಈ ಸಮಸ್ಯೆಯನ್ನು ಅವರಲ್ಲಿ ತೋಡಿಕೊಂಡಿದ್ದೆವು. ಬೋಳೂರಿನ ಜನತೆಗೆ ನ್ಯಾಯ ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದರು. ನಮಗೆ ನೀಡಿದ ವಾಗ್ದಾನದಂತೆ ಬೋಳೂರಿನ ಜನತೆಯ ಬಹು ಕಾಲದ ಬೇಡಿಕೆ ಈಡೇರಿಸಿದ್ದಾರೆ ಎಂದರು.
ಬೋಳೂರಿನ ಮಾಧವ ಅವರು ಮಾತನಾಡಿ, ಕಳೆದ 45 ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಜನಪ್ರತಿನಿಧಿಗಳ ಬಳಿಗೆ, ಅಧಿಕಾರಿಗಳ ಬಳಿ ಹಾಗೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೂ ಮನವಿ ಸಲ್ಲಿಸಿದ್ದೆವು. ಆದರೆ ಯಾವುದೂ ಕೂಡ ಫಲ ನೀಡಿರಲಿಲ್ಲ. ಕೊನೆಗೆ ಶಾಸಕ ವೇದವ್ಯಾಸ್ ಕಾಮತ್ ಅವರ ಬಳಿ ನಮ್ಮ ಸಂಕಷ್ಟ ಹೇಳಿಕೊಂಡಾಗ ಹಕ್ಕುಪತ್ರ ನೀಡುವ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ನಮ್ಮ ಶಾಸಕರು ನಡೆದುಕೊಂಡಿದ್ದಾರೆ. ಅವರಿಗೆ ಬೋಳೂರು ಜನತೆಯ ಪರವಾಗಿ ಹಾರ್ದಿಕ ಶುಭಾಶಯಗಳು ಎಂದಿದ್ದಾರೆ.
ಸಭಾ ವೇದಿಕೆಯಲ್ಲಿ ತಹಶೀಲ್ದಾರ್ ಗುರುಪ್ರಸಾದ್, ಕಂದಾಯ ಅಧಿಕಾರಿ ಪ್ರಸನ್ನ, ವಿ.ಎ ಪೂರ್ಣಚಂದ್ರ, ಸ್ಥಳೀಯ ಮುಖಂಡರಾದ ರಾಹುಲ್ ಶೆಟ್ಟಿ ,ತುಕರಾಮ್ ಬಂಗೇರ, ಯೋಗೀಶ್ ಸಾಲ್ಯಾನ್ ಹಾಗೂ ರಾಜೇಶ್ ಉರ್ವ ಉಪಸ್ಥಿತರಿದ್ದರು.
Comments are closed.