ಕರಾವಳಿ

ಗೋಕಳ್ಳ ಸಾಗಾಣಿಕೆಯ ಜಾಲಕ್ಕೆ ಕಡಿವಾಣ ಹಾಕಲು ವಿಶ್ವಹಿಂದೂ ಪರಿಷದ್ ಆಗ್ರಹ

Pinterest LinkedIn Tumblr

ಮಂಗಳೂರು : ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ಜಾನುವಾರುಗಳ ಕಳ್ಳತನವಾಗುತ್ತಿದ್ದು ಇದರ ಹಿಂದೆ ಗೋಕಳ್ಳರ ಬೃಹತ್ ಜಾಲವಿದೆ, ಕದ್ದ ಗೋವುಗಳಿಗೆ ಎಲ್ಲಿಂದಲೋ ಖರೀದಿಸಿದ ಚೀಟಿಗಳನ್ನು ಗೋಕಳ್ಳರು ತಂದು ಕದ್ದ ಜಾನುವಾರುಗಳನ್ನು ಸಕ್ರಮ ಎಂದು ತೋರಿಸುತ್ತಿದ್ದಾರೆ ಇದನ್ನು ತಡೆಯಲು ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ವಿಶ್ವಹಿಂದೂ ಪರಿಷದ್ ಆಗ್ರಹಿಸಿದೆ.

ಗೋಕಳ್ಳ ಸಾಗಾಣಿಕೆಯ ಜಾಲಕ್ಕೆ ಕಡಿವಾಣ ಹಾಕಲು ರಾಜ್ಯಸರಕಾರ ಈ ಕೆಳಗಿನ ಕ್ರಮಗಳನ್ನು ಜಾರಿಗೆ ತರಬೇಕು.

1) ರಾಜ್ಯವ್ಯಾಪ್ತಿ ಜಾನುವಾರು ಸಾಗಾಟಕ್ಕೆ ಆಪ್ ಮಾಡಬೇಕು

2) ಪ್ರತಿ ಪೊಲೀಸ್ ಠಾಣೆಯಲ್ಲಿ ಗೋವುಗಳ ಕಳ್ಳ ಸಾಗಾಟ ಮತ್ತು ಹತ್ಯೆ ಪತ್ತೆಹಚ್ಚಲು ವಿಶೇಷ ತಂಡ ರಚಿಸಬೇಕು, ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಇದರ ಬಗ್ಗೆ ಬೇಹುಗಾರಿಕೆ ನಡೆಸಿ, ತಾಣ ವ್ಯಾಪ್ತಿಯಲ್ಲಿ ಅಕ್ರಮ ಗೋಸಾಗಾಟ, ಅಕ್ರಮ ಕಸಾಯಿಖಾನೆ ನಡೆಯದಂತೆ ಠಾಣಾಧಿಕಾರಿಗಳಿಗೆ ಜವಾಬ್ದಾರಿ ವಹಿಸಬೇಕು. ತಪಿದಲ್ಲಿ ಆ ಠಾಣಾ ಸಿಬ್ಬಂದಿ/ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳಬೇಕು.

3) ಪೊಲೀಸರು ಮಹಾಜರನ್ನು ನ್ಯಾಯಯುತವಾಗಿ ಕಾನೂನು ತಜ್ಞರ ಸಹಕಾರದೊಂದಿಗೆ ಬರೆಯಬೇಕು.

4) ಕೇಂದ್ರ ಸರಕಾರ ರಚಿಸಿದ ನಿಯಮಾವಳಿಯಂತೆ (2016 Transport Ammendment Act 11 ನೇ ತಿದ್ದುಪಡಿ ಪ್ರಕಾರ) ಜಾನುವಾರುಗಳಿಗೆಂದೇ ತಯಾರಾದ ವಿಶೇಷ ಜಾನುವಾರು ವಾಹನದಲ್ಲಿ ಮಾತ್ರ ಜಾನುವಾರುಗಳನ್ನು ಸಾಗಾಟ ಮಾಡಬೇಕು, ತಪಿದ್ದಲ್ಲಿ RTO ಅಧಿಕಾರಿಗಳು ವಾಹನವನ್ನು ಮುಟ್ಟುಗೋಲು ಹಾಕಲು ಕ್ರಮ ಕೈಗೊಳ್ಳಬೇಕು.

ಈ ರೀತಿ ಗೋಕಳ್ಳತನ, ಅಕ್ರಮ ಗೋಸಾಗಾಟ ಜಾಲವನ್ನು ಭೇದಿಸಿ ಗೋವುಗಳನ್ನು ರಕ್ಷಿಸಬೇಕೆಂದು ರಾಜ್ಯಸರಕಾರಕ್ಕೆ ಈ ಪತ್ರಿಕಾ ಹೇಳಿಕೆಯ ಮೂಲಕ ಆಗ್ರಹಿಸುತಿದ್ದೇವೆ ಎಂದು ವಿಶ್ವ ಹಿಂದೂ ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ತಿಳಿಸಿದ್ದಾರೆ.

Comments are closed.