ಕರಾವಳಿ

ಮಂಗಳೂರಿನಲ್ಲಿ “ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಪ್ರಚಾರ ಅಭಿಯಾನ”ಕ್ಕೆ ಚಾಲನೆ

Pinterest LinkedIn Tumblr

ಮಂಗಳೂರು, ಜೂನ್.22 : ಮಣ್ಣಗುಡ್ಡ ವಾರ್ಡಿನ ನಾಗರಿಕರಿಂದ “ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಅಭಿಯಾನ”ದ ಪ್ರಚಾರ ಕಾರ್ಯಕ್ರಮಕ್ಕೆ ಗುಂಡೂರಾವ್ ಲೇನ್ ನಲ್ಲಿರುವ ಶ್ರೀ ನರೇಂದ್ರ ನಾಯಕ್ ಇವರ ಕಾರ್ಯಾಲಯದಲ್ಲಿ ಭಾನುವಾರ ಚಾಲನೆ ನೀಡಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಉದ್ಯಮಿಗಳಾದ ಶ್ರೀ ನರೇಂದ್ರ ನಾಯಕ್ ಅವರು ವಹಿಸಿದ್ದರು ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಜಗದೀಶ್ ಶೆಟ್ಟಿ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಇದೇ ಸಂದರ್ಭದಲ್ಲಿ, ಅಂಗಡಿಗಳಲ್ಲಿ ಹಾಗೂ ಮನೆಗಳಲ್ಲಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವ ಸಲುವಾಗಿ *ಜಾಗೃತಿ ಮೂಡಿಸುವ ಸ್ಟಿಕ್ಕರ್ ಹಾಗೂ ಮಾಹಿತಿ ಪತ್ರವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ದಕ್ಷಿಣ ಪ್ರಾಂತ್ಯದ ಸಹ ಸಂಘಚಾಲಕರಾದ ಡಾ. ವಾಮನ ಶೆಣೈ ಸ್ಥಳೀಯ ಮ ನ ಪಾ ಸದಸ್ಯರಾದ ಶ್ರೀಮತಿ ಸಂಧ್ಯಾ ಮೋಹನ್ ಆಚಾರ್ಯ ಇವರ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಿದರು.

ಮಡಿದ ಹುತಾತ್ಮ ಯೋಧರಿಗೆ ಮೌನ ಪ್ರಾರ್ಥನೆ ನಡೆಯಿತು.  ಅಭ್ಯಾಗತರಾಗಿ ಡೊಂಗರಕೇರಿ ವಾರ್ಡಿನ ಮ ನ ಪಾ ಸದಸ್ಯರಾದ ಶ್ರೀಮತಿ ಜಯಶ್ರೀ ಕುಡ್ವ ಹಾಗೂ ಅಶೋಕನಗರ ವಾರ್ಡಿನ ಮ ನ ಪಾ ಸದಸ್ಯರಾದ ಶ್ರೀ ಗಣೇಶ್ ಕುಲಾಲ್ ಆಗಮಿಸಿದ್ದರು.

ಇದೇ ಸಂದರ್ಭದಲ್ಲಿ ಅಭಿಯಾನಕ್ಕೆ ಬೆಂಬಲವಾಗಿ, ತಮ್ಮ ಹೋಟೆಲ್ ನ ಹೆಸರನ್ನೇ ಬದಲಾಯಿಸಿದ ಶ್ರೀ ಸುನಿಲ್ ಶೆಟ್ಟಿ ಇವರನ್ನು ನಾಗರಿಕರ ಪರವಾಗಿ ಸನ್ಮಾನಿಸಲಾಯಿತು.

ಗುರುದತ್ತ ಕಾಮತ್ ಸ್ವಾಗತಿಸಿ, ರಘುನಾಥ ಪ್ರಭು ನಿರೂಪಿಸಿ, ಸುಜೀರ್ ವಿನೋದ್ ಇವರು ಧನ್ಯವಾದ ಸಮರ್ಪಿಸಿದರು. ಸಾಮಾಜಿಕ ಕಾರ್ಯಕರ್ತರು ಹಾಗೂ ಪರಿಸರದ ನಾಗರಿಕರು ಉಪಸ್ಥಿತರಿದ್ದರು.

Comments are closed.