ಕರಾವಳಿ

ಮಾಸ್ಕ್ ಧರಿಸುವುದರಿಂದ ರೋಗ ತಡೆಗಟ್ಟಲು ಸಾಧ್ಯ : ಡಾ. ಮುರಲೀ ಮೋಹನ್ ಚೂಂತಾರು

Pinterest LinkedIn Tumblr

ಮಂಗಳೂರು ಜೂನ್ 20 : ಮುಖಕವಚ ಧರಿಸುವುದರಿಂದ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಎಲ್ಲರೂ ಮುಖಕವಚ ಧರಿಸುವುದರಿಂದ ರೋಗವನ್ನು ತಡೆಗಟ್ಟವುದು ಸಾಧ್ಯವಿದೆ ಎಂದು ಪೌರರಕ್ಷಣಾ ಪಡೆಯ ಚೀಫ್ ವಾರ್ಡನ್ ಡಾ. ಮುರಲೀ ಮೋಹನ್ ಚೂಂತಾರು ಹೇಳಿದರು.

ಮಾಸ್ಕ್ ದಿನಾಚರಣೆ ಅಂಗವಾಗಿ ಪೌರರಕ್ಷಣಾ ಪಡೆಯಿಂದ ಕುಲಶೇಖರ ಹಾಗೂ ಶಕ್ತಿನಗರ ಕ್ರಾಸ್ ರಿಕ್ಷಾ ಸ್ಟ್ಯಾಂಡ್ ಆಟೋ ಚಾಲಕರಿಗೆ ಮೌತ್ ಮಾಸ್ಕ್ ಹಾಗೂ ಸ್ಯಾನಿಟೈಸರ್‍ಗಳನ್ನು ವಿತರಿಸಲಾಯಿತು. ಈ ಸಂದರ್ಭ
ಮಾಸ್ಕ್ ಹಾಗೂ ಸ್ಯಾನಿಟೈಸರ್‍ಗಳನ್ನು ವಿತರಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ವಿಷ್ಣುಮೂರ್ತಿ ಭಟ್ ಹಾಗೂ ಉಪಾಧ್ಯಕ್ಷ ಆಲ್ಫಾನ್ಸ್ ಡಿಸೋಜಾ ಉಪಸ್ಥಿತರಿದ್ದರು.

ಪೌರರಕ್ಷಣಾ ಪಡೆಯ ನಿತಿನ್, ಅಂಜನ್ ಹಾಗೂ ಗೃಹರಕ್ಷಕರಾದ ಸುನಿಲ್ ದಿವಾಕರ್, ಮಹೇಶ್, ಲಿಂಗಪ್ಪ, ಉಪಸ್ಥಿತರಿದ್ದರು. 50 ರಿಕ್ಷಾ ಚಾಲಕರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್‍ಗಳನ್ನು ನೀಡಲಾಯಿತು.

Comments are closed.