ಕರಾವಳಿ

ಬಾಳೆ, ಅನಾನಸು, ಪಪ್ಪಾಯ ಬೆಳೆಯುವ ರೈತರಿಗೆ ಹೆಕ್ಟೇರಿಗೆ ರೂ.15000 ಪರಿಹಾರ : ಅರ್ಜಿ ಆಹ್ವಾನ

Pinterest LinkedIn Tumblr

ಮಂಗಳೂರು ಜೂನ್ 18 : ಕೋವಿಡ್-19 ಕಾರಣ ದೇಶದಲ್ಲಿ ವಿಧಿಸಿದ ಲಾಕ್‍ಡೌನ್‍ನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಳೆ, ಅನಾನಸು ಹಾಗೂ ಪಪ್ಪಾಯ ಬೆಳೆ ಬೆಳೆದ ರೈತರು ದಿನಾಂಕ 24-03-2020 ರಿಂದ 31-05-2020 ರವರೆಗೆ ಕಟಾವಿಗೆ ಬಂದಿರುವ ಫಸಲುಗಳನ್ನು ಮಾರಾಟ ಮಾಡಲು ಆಗದೆ ಸಂಕಷ್ಟಕ್ಕೀಡಾಗಿರುತ್ತಾರೆ ಅಥವಾ ಮಾರಾಟ ಮಾಡಿದ ಫಸಲಿಗೆ ಸೂಕ್ತ ಬೆಲೆ ಸಿಗದೆ ನಷ್ಟ ಅನುಭವಿಸಿರುತ್ತಾರೆ.

ಆದ ಕಾರಣ ಕರ್ನಾಟಕ ಸರ್ಕಾರವು ಈ ಬೆಳೆಗಳನ್ನು ಬೆಳೆದು ನಷ್ಟ ಅನುಭವಿಸಿದ ರೈತರಿಗೆ ಹೆಕ್ಟೇರಿಗೆ ಗರಿಷ್ಠ ರೂ.15000 ಗಳಂತೆ (ಪ್ರತೀ ಸೆಂಟ್ಸ್‍ಗೆ ರೂ.60 ರಂತೆ) ಗರಿಷ್ಟ ಒಂದು ಹೆಕ್ಟೇರ್‍ವರೆಗೆ ಪರಿಹಾರ ನೀಡುವ ಕಾರ್ಯಕ್ರಮ ಜಾರಿಗೆ ತಂದಿರುತ್ತದೆ.

ಈ ಹಿನ್ನೆಲೆಯಲ್ಲಿ ಬಾಳೆ, ಅನಾನಸು ಮತ್ತು ಪಪ್ಪಾಯ ಬೆಳೆ ಬೆಳೆದು 2019-20ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯಲ್ಲಿ ದಾಖಲಾಗಿರುವ ಹಾಗೂ ದಿನಾಂಕ 24-03-2020 ರಿಂದ 31-05-2020 ರವರೆಗಿನ ಅವಧಿಯಲ್ಲಿ ಫಸಲು ಕಟಾವು ಆಗಿರುವ, ಮೇಲಿನ ಬೆಳೆಯನ್ನು ಶುದ್ದ ಬೆಳೆಯಾಗಿ ಬೆಳೆದ ರೈತರು ಮಾತ್ರ ಪರಿಹಾರಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.

ಅರ್ಜಿಗಳನ್ನು ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಅಥವಾ ಆಯಾ ಹೋಬಳಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ಸಲ್ಲಿಸಬಹುದು. ತಾಲೂಕು ಹಾಗೂ ಜಿಲ್ಲಾ ಸಮಿತಿಗಳಿಂದ ಅನುಮೋದಿತವಾದ ರೈತರಿಗೆ ಪರಿಹಾರಧನವನ್ನು ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು.

ರೈತರು ಅರ್ಜಿಯೊಂದಿಗೆ ಆಧಾರ್‍ಲಿಂಕ್ ಹಾಗೂ NPCI ಸೀಡಿಂಗ್ ಆಗಿರುವ ಬ್ಯಾಂಕ್ ಖಾತೆಯ ವಿವರಗಳನ್ನು ಆಧಾರ್ ಪ್ರತಿಯೊಂದಿಗೆ ಮತ್ತು ನಿಗದಿತ ಸ್ವಯಂ ಘೋಷಣೆ ಪತ್ರವನ್ನು ಸಲ್ಲಿಸಬೇಕಾಗಿರುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಜೂನ್ 25 ಆಗಿರುತ್ತದೆ.

ಈ ಕೆಳಗಿನ ರೈತರು ಮಾತ್ರ ಅರ್ಜಿ ಸಲ್ಲಿಸಬಹುದು.
ಬಾಳೆ, ಅನಾನಸು ಮತ್ತು ಪಪ್ಪಾಯ ಬೆಳೆ 2019-20ನೇ ಸಾಲಿನ ಮುಂಗಾರು ಹಂಗಾಮಿಗೆ ಬೆಳೆ ಸಮೀಕ್ಷೆಯಲ್ಲಿ ದಾಖಲಾಗಿರಬೇಕು. ಬಾಳೆ, ಅನಾನಸು ಮತ್ತು ಪಪ್ಪಾಯ ಬೆಳೆ ದಿನಾಂಕ 24-03-2020 ರಿಂದ 31-05-2020ರಲ್ಲಿ ಕಟಾವು ಮಾಡಿರುವ ರೈತರು ಮಾತ್ರ ಅರ್ಹರು. ಸದರಿ ಬೆಳೆಯನ್ನು ಶುದ್ದ ಬೆಳೆಯಾಗಿ ಬೆಳೆದಿರುವ ರೈತರು ಮಾತ್ರ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ವಿವರಗಳಿಗೆ ತೋಟಗಾರಿಕೆ ಉಪನಿರ್ದೇಶಕರು, ದ.ಕ.ಜಿ.ಪಂ., ಮಂಗಳೂರು – 9448999226 , ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಮಂಗಳೂರು – 8277806378 (0824-2423615), ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಬಂಟ್ವಾಳ – 8277806371 (08255-234102), ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಪುತ್ತೂರು – 9731854527 (08251-230905)ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಸುಳ್ಯ 9880993238 (08257-232020) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಬೆಳ್ತಂಗಡಿ – 8277806380 (08256-232148) ಸಂಪರ್ಕಿಸಲು ತೋಟಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Comments are closed.