ಮಂಗಳೂರು : ದೇಶದಲ್ಲಿ ಕೊವೀಡ್ 19ರ ನಡುವೆ ಹಲವೆಡೆಗಳಲ್ಲಿ ಸರ್ಕಾರದ ನಿಯಾಮಾನುಸಾರ ಸರಳವಾಗಿ ಶುಭ ಕಾರ್ಯಗಳು ನಡೆಯುತ್ತಿದೆ. ಇದೇ ರೀತಿ ಮಂಗಳೂರಿನಲ್ಲಿ ಇತ್ತೀಚಿಗೆ ನಡೆದ ಮದುವೆಯೊಂದು ವಿಶೇಷ ಕಾರಣಕ್ಕೆ ಗಮನ ಸೆಳೆದಿದೆ.
ನಗರದ ಖ್ಯಾತ ಉದ್ಯಮಿ ಹಾಗೂ ಸಮಾಜ ಸೇವಕ ಶ್ರೀಕರ್ ಪ್ರಭು ಅವರ ಸಹೋದರಿಯ ಮಗಳ ( ದಿವ್ಯಾ ಹಾಗೂ ರಾಕೇಶ್) ಮದುವೆ ಇತ್ತೀಚಿಗೆ ನಗರದ ಬಾಳಂಭಟ್ ಸಭಾಂಗಣದಲ್ಲಿ ಸರಳವಾಗಿ ನಡೆಯಿತು.
ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಸ್ಯಾನಿಟೈಸರ್, ಸಾಮಾಜಿಕ ಅಂತರ ಮೊದಲಾದ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಕೆಲವೆ ಮಂದಿ ಸಮ್ಮಂಧಿಕರ ಸಮ್ಮುಖದಲ್ಲಿ ನಡೆದ ಈ ಮದುವೆಯ ಶುಭ ಸಂದರ್ಭದಲ್ಲಿ ವಧುವಿನ ಸೋದರ ಮಾವ ಶ್ರೀಕರ್ ಪ್ರಭು ಅವರು ಪ್ರಧಾನ ಮಂತ್ರಿಗಳ ಕೋವೀಡ್ ಪರಿಹಾರ ನಿಧಿ ( ಪಿ.ಎಂ. ಕೇರ್ ಫಂಡ್ ) ಗೆ ರೂ.50,000 ( ಐವತ್ತು ಸಾವಿರ) ವನ್ನು ದೇಣಿಗೆ ನೀಡುವ ಮೂಲಕ ತಮ್ಮ ಸೊಸೆಯ ಮದುವೆಯನ್ನು ವಿಶಿಷ್ಟ ರೀತಿಯಲ್ಲಿ ನೆರವೇರಿಸಿದರು.
ಕೊರೋನಾ ವಾರಿಯಾರ್ಸ್‌ಗಳಿಗೆ ಸನ್ಮಾನ :
ಈ ಶುಭ ಸಂದರ್ಭದಲ್ಲಿ ಕೊರೋನಾ ಮಾಹಾಮಾರಿಯ ಹಿನ್ನೆಲೆಯಲ್ಲಿ ಸರ್ಕಾರ ಜಾರಿಗೆ ತಂದಿದ್ದ ಲಾಕ್‌ಡೌನ್ ಸಂದರ್ಭದಲ್ಲೂ ಮನೆ ಮನೆಗಳಿಗೆ ತೆರಳಿ ಅಡುಗೆ ಅನಿಲದ ಸಿಲಿಂಡರ್ ಅನ್ನು ವಿತರಿಸಿದ ಗ್ಯಾಸ್ ಸಂಸ್ಥೆಯ ಮೂವರು ಸಿಬ್ಬಂದಿಗಳನ್ನು ಕೊರೋನಾ ವಾರಿಯಾರ್ಸ್ ಎಂದು ಪರಿಗಣಿಸಿ ಮದುವೆ ಕಾರ್ಯಕ್ರಮದಲ್ಲಿ ಶ್ರೀಕರ್ ಪ್ರಭು ಅವರು ಸನ್ಮಾನಿಸಿ, ಗೌರವಿಸಿದರು.
ಸತೀಶ್ ಕಾಪಿಕಾಡ್
Comments are closed.