ಕರಾವಳಿ

ದ.ಕ.ಜಿಲ್ಲೆಯಲ್ಲಿ 23 ಮಂದಿಯಲ್ಲಿ ಸೋಂಕು ಪತ್ತೆ : ರಾಜ್ಯದಲ್ಲಿ 213 ಮಂದಿಗೆ ಪಾಸಿಟಿವ್

Pinterest LinkedIn Tumblr

ಮಂಗಳೂರು, ಜೂನ್. 15 : ರಾಜ್ಯದಲ್ಲಿ ಸರಣಿ ಕೊರೊನಾ ಮಹಾಸ್ಪೋಟ ಸಂಭವಿಸುತ್ತಿದ್ದು, ದ.ಕ.ಜಿಲ್ಲೆಯಲ್ಲಿ 23 ಮಂದಿ ಸೇರಿದಂತೆ ಕರ್ನಾಟಕದಲ್ಲಿ ಇಂದು ಮತ್ತೆ ಒಂದೇ ದಿನ ಬರೋಬ್ಬರಿ 213 ಮಂದಿಯಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ರಾಜ್ಯದಲ್ಲಿ ಸೋಮವಾರ ಒಂದೇ ದಿನ 213 ಕೋವಿಡ್ ಪ್ರಕರಣಗಳು ಪಾಸಿಟಿವ್ ಬಂದಿರುವುದಾಗಿ ಮಾಹಿತಿ ನೀಡಿದೆ. ಇದರಲ್ಲಿ ದ.ಕ. ಜಿಲ್ಲೆಯಲ್ಲಿ 23 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದಾಗಿ ವರದಿಯಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 7213ಕ್ಕೆ ಏರಿಕೆಯಾಗಿದೆ.

ಇಂದು ಕಲಬುರ್ಗಿಯಲ್ಲಿ 48, ಯಾದಗಿರಿಯಲ್ಲಿ 13, ಶಿವಮೊಗ್ಗದಲ್ಲಿ 3, ಬೀದರ್‌‌ನಲ್ಲಿ 11, ಬೆಂಗಳೂರು ನಗರದಲ್ಲಿ 35, ದಕ್ಷಿಣ ಕನ್ನಡದಲ್ಲಿ 23, ಧಾರವಾಡದಲ್ಲಿ 20, ಉಡುಪಿಯಲ್ಲಿ 14, ಹಾಸನದಲ್ಲಿ 1, ಬಳ್ಳಾರಿಯಲ್ಲಿ 10, ವಿಜಯಪುರದಲ್ಲಿ 3, ರಾಯಚೂರಿನಲ್ಲಿ 18, ದಾವಣಗೆರೆಯಲ್ಲಿ 1, ಹಾವೇರಿಯಲ್ಲಿ 2, ಬಾಗಲಕೋಟೆಯಲ್ಲಿ 3, ಉಡುಪಿ 2 ಹಾಗೂ ರಾಮನಗರದಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ.

ದ.ಕ. ಜಿಲ್ಲೆಯಲ್ಲಿ 149 ಮಂದಿ ಸೋಂಕಿತರಿಗೆ ಚಿಕಿತ್ಸೆ:

ದ.ಕ. ಜಿಲ್ಲೆಯಲ್ಲಿ 6 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ ಜಿಲ್ಲೆಯಲ್ಲಿ 149 ಮಂದಿ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಇಬ್ಬರು ಕೊರೋನಾಗೆ ಬಲಿ :

ರಾಜ್ಯದಲ್ಲಿ ಇಂದು 180 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇಲ್ಲಿಯವರೆಗೆ 4135 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ನಡುವೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.

Comments are closed.