ಕರಾವಳಿ

ಪಾಲಿಕೆಯ ಅಧಿಕಾರಿ, ಸಿಬ್ಬಂದಿಗಳು ಸೇರಿ 1300 ಮಂದಿಗೆ ಆಯುಷ್ ರೋಗ ನಿರೋಧಕ ಔಷಧ ವಿತರಣೆ

Pinterest LinkedIn Tumblr

ಮಂಗಳೂರು : ಆಯುಷ್ ಇಲಾಖೆ ದಕ್ಷಿಣ ಕನ್ನಡ ಮತ್ತು ಫಾದರ್‌ಮುಲ್ಲರ್ಸ್ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ದೇರಳಕಟ್ಟೆ ಇವರ ಸಹಯೋಗದಲ್ಲಿ, ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿ, ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರಿಗೆ, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಉಚಿತ ಆಯುಷ್ ರೋಗನಿರೋಧಕ ಔಷಧಿಗಳನ್ನು ವಿತರಿಸಲಾಯಿತು.

ಮಹಾನಗರ ಪಾಲಿಕೆಯ ಜಂಟಿ ಆಯುಕ್ತರಾದ ಶ್ರೀಯುತ ಸಂತೋಷ್ ಹಾಗೂ ಮಹಾಪೌರರಾದ ದಿವಾಕರ್ ಪಾಂಡೇಶ್ವರ ಉಪಸ್ಥಿತರಿದ್ದರು. ಫಾದರ್‌ಮುಲ್ಲರ್ಸ್ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ:ಶಿವಪ್ರಸಾದ್ ಔಷಧಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ: ಮಹಮದ್ ಇಕ್ಬಾಲ್ ರವರು ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿ, ಆಯುಷ್ ಇಲಾಖೆಯ ಗುರಿ, ಉದ್ದೇಶಗಳ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು.

ಶ್ರೀ ಸಂತೋಷ್ ಜಂಟಿ ಆಯುಕ್ತರು, ರೋಗ ನಿರೋಧಕ ಔಷಧಿ ವಿತರಣೆ ಬಗ್ಗೆ ಪ್ರಶಂಸಿದರು.

ಕಾರ್ಯಕ್ರಮದ ನೋಡಲ್ ಅಧಿಕಾರಿ ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ: ಶೋಭಾರಾಣಿ.ಎನ್.ಎಸ್, ಡಾ:ಯಶ್ವಿತಾ, ಡಾ:ಮಹಮದ್ ನೂರುಲ್ಲಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿ, ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರಿಗೆ ಸೇರಿ ಒಟ್ಟು ಸುಮಾರು 1300 ಜನರಿಗೆ ಆಯುಷ್ ರೋಗನಿರೋಧಕ ಔಷಧಿಯನ್ನು ವಿತರಿಸಲಾಯಿತು.

Comments are closed.