ಕರಾವಳಿ

ಮಳೆಗಾಲದ ಸಮಸ್ಯೆಗಳಿಗೆ ಮೆಸ್ಕಾಂನಿಂದ ವ್ಯಾಪಕ ಸಿದ್ಧತೆ : 24 ಗಂಟೆ ಕಾರ್ಯನಿರ್ವಾಹಿಸಲಿದೆ ಕಂಟ್ರೋಲ್‍ರೂಂ

Pinterest LinkedIn Tumblr

ಮಂಗಳೂರು : ಮೆಸ್ಕಾಂ ನಲ್ಲಿ24 ಗಂಟೆಗಳ ಕಾರ್ಯನಿರ್ವಹಿಸುವ ಕಂಟ್ರೋಲ್‍ರೂಂ (ಸಂಖ್ಯೆ 1912) ನಿರಂತರವಾಗಿ ಗ್ರಾಹಕರ ಅಹವಾಲುಗಳಿಗೆ ಸ್ಪಂದಿಸಲಿದೆ. ಮಳೆಗಾಲದ ವಿದ್ಯುತ್‍ಜಾಲದ ನಿರ್ವಹಣೆಗೆ ಹಾಗೂ ತುರ್ತು ಸಂದರ್ಭಗಳಿಗೆ ಬೇಕಾಗುವ ವಿದ್ಯುತ್ ಕಂಬಗಳು, ಪರಿವರ್ತಕಗಳು, ವಾಹಕಗಳು, ಇನ್ಸುಲೇಟರ್ ಮತ್ತಿತರ ಸಾಮಾಗ್ರಿಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ದಾಸ್ತಾನುಇಡಲಾಗಿದೆ ಎಂದು ಮೆಸ್ಕಾಂ ಮುಖ್ಯಅಭಿಯಂತರ ಮಂಜಪ್ಪಅವರು ತಿಳಿಸಿದರು.

ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಳೆಗಾಲ ಸಿದ್ಧತೆ ಬಗ್ಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದರು. ಪ್ರತೀ ಉಪವಿಭಾಗದಲ್ಲಿ 10 ಕೆಲಸಗಾರರತಂಡವನ್ನುತುರ್ತು ಕೆಲಸಗಳಿಗಾಗಿ ನಿಯೋಜಿಸಲಾಗಿದ್ದು, 1 ವಾಹನವನ್ನೂ ನಿಯೋಜಿಸಲಾಗಿದೆ.ಮಳೆಗಾಲದ ತುರ್ತು ಕಾಮಗಾರಿಗಳ ನಿರ್ವಹಣೆಗೆ ಅವಶ್ಯವಿರುವ ಸ್ಥಳಗಳಲ್ಲಿ ಹೆಚ್ಚುವರಿ ಗ್ಯಾಂಗ್‍ಮೆನ್‍ಗಳನ್ನು ನಿಯೋಜಿಸಲಾಗಿದೆ ಎಂದು ಅವರು ವಿವರ ನೀಡಿದರು.

ಸಚಿವರಿಂದ ಸಿದ್ಧತೆಗಳ ಪರಿಶೀಲನೆ :

ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಳೆಗಾಲದಲ್ಲಿ ಮೆಸ್ಕಾಂ ಸಿದ್ಧತೆಗಳನ್ನು ಪರಿಶೀಲಿಸಿದರು.

Comments are closed.