ಕರಾವಳಿ

ಹೆಚ್ಚು ಹೆಚ್ಚು ಗಿಡಗಳನ್ನು ನೆಡುವುದರಿಂದ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ : ರಘುವೀರ್ ಸೂಪರ್‌ಪೇಟೆ

Pinterest LinkedIn Tumblr

ಮಂಗಳೂರು : ಭಾರತ ಸರ್ಕಾರ, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರೂ ಯುವ ಕೇಂದ್ರ, ಮಂಗಳೂರು,ವಿಶ್ವ ಸಂಸ್ಥೆ ಅಭಿವೃದ್ಧಿ ಯೋಜನೆ, ಗ್ರೀನ್ ಬ್ರಿಗೇಡ್, ಮಂಗಳೂರು ಹಾಗೂ ಯುವಕ ಮಂಡಲ ಸೂಟರ್ ಪೇಟೆ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ನೆಹರೂ ಯುವ ಕೇಂದ್ರ, ಮಂಗಳೂರಿನ ಜಿಲ್ಲಾ ಯುವ ಸಮನ್ವಯಾಧಿಕಾರಿ ರಘುವೀರ್ ಸೂಟರ್ ಪೇಟೆಯವರು ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಜೀತ್ ರೋಚ್ ಅವರು ಮಾತನಾಡಿ “ಯುವಕ, ಯುವತಿ, ಮಹಿಳಾ ಮಂಡಲದ ಹಾಗೂ ಸಾಮಾಜಿಕ ಸಂಘ ಸಂಸ್ಥೆಗಳು ಪ್ರತಿದಿನ ಪರಿಸರ ಸಂರಕ್ಷಣಾ ದಿನವನ್ನಾಗಿ ಆಚರಿಸಲು ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು” ತಿಳಿಸಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನೆಹರೂ ಯುವಾ ಕೇಂದ್ರ ಮಂಗಳೂರಿನ ಜಿಲ್ಲಾ ಯುವ ಸಮನ್ವಯಾಧಿಕಾರಿ ರಘುವೀರ್ ಸೂಪರ್ ಪೇಟೆ, “ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಟ್ಟು ಆರೋಗ್ಯ ಪೂರ್ಣ ಸಮಾಜದ ನಿರ್ಮಾಣದಲ್ಲಿ ಕೈ ಜೋಡಿಸಬೇಕೆಂದು ತಿಳಿಸಿದ್ದರು.

ಕಾರ್ಯಕ್ರಮದಲ್ಲಿ ಸಲ್ಮಾ, ಈತನ್, ಶೈಲೇಶ್ ಸೂಟರೊ ಪೇಟ್, ನೆಹರೂ ಯುವ ಕೇಂದ್ರದ ತಾಲೂಕ ಪ್ರತಿನಿಧಿ ವಿಕಾಸ್ ಕುಂಪಾಲ್, ಸೂಗನಗೌಡ, ಸುನೀಲ್, ವಿವೇಕ್, ಮತ್ತು ಯುವಕ ಮಂಡಲದ ಸದಸ್ಯರುಗಳು ಭಾಗವಹಿಸಿದ್ದರು.

Comments are closed.