ಮಂಗಳೂರು ಜೂನ್.09 : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ `ಮರಕೊಗಾವಾತೊ ನೂರು ಬ್ಯಾರಿಙ’ (ಮರೆಯಲಾಗದ ನೂರು ಬ್ಯಾರಿ ಮಹನೀಯರು) ಎಂಬ ವ್ಯಕ್ತಿ ಪರಿಚಯಗಳನ್ನು ಒಳಗೊಂಡ ಗ್ರಂಥ ಮಾಲಿಕೆಯನ್ನು ಪ್ರಕಟಿಸಲು ನಿರ್ಧರಿಸಿದೆ.
ಕರ್ನಾಟಕ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಗಳಿಸಿರುವ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಬ್ಯಾರಿ ಮಹನೀಯರ ಬಗ್ಗೆ ಸಾರ್ವಜನಿಕರಿಂದ ಮಾಹಿತಿಯನ್ನು ಕೋರಿದ್ದು, ಈ ಮಾಹಿತಿಗಳ ಪೈಕಿ ಪ್ರಾಶಸ್ತ್ಯ ಪಡೆದ ನೂರು ವ್ಯಕ್ತಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು. ಒಬ್ಬರಿಗೆ 3 ರಿಂದ 5 ಪುಟಗಳು ಮೀಸಲಿಡಲಾಗುವುದು. ಇದರಲ್ಲಿ ಅವರ ವ್ಯಕ್ತಿ ಪರಿಚಯ, ಸಾಧನೆ, ಅಪರೂಪದ ಸಂಗ್ರಹ ಚಿತ್ರಗಳು ಅಡಕವಾಗಿರಬೇಕು.
ಸಾರ್ವಜನಿಕರು ಬ್ಯಾರಿ ಭಾಷೆ, ಕಲೆ, ಸಾಹಿತ್ಯ, ರಾಜಕೀಯ, ಸಾಮಾಜಿಕ, ಶಿಕ್ಷಣ, ಔದ್ಯೋಗಿಕ, ಸರ್ಕಾರದ ಮಾಜಿ ಹಾಗೂ ಹಾಲಿ ನೌಕರರು, ಸಾಂಸ್ಕೃತಿಕ ಸಂಘಟಕರು ಮುಂತಾದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಬ್ಯಾರಿ ಮಹನೀಯರ ಬಗ್ಗೆ ಅಕಾಡೆಮಿ ಕಚೇರಿಯ ವಾಟ್ಸಪ್ ಸಂಖ್ಯೆ 7483946578 ಅಥವಾ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಸಾಮರ್ಥ್ಯ ಸೌಧ, ಮಂಗಳೂರು ತಾಲೂಕು ಪಂಚಾಯತ್ ಹಳೆ ಕಟ್ಟಡ, 2ನೇ ಮಹಡಿ, ಮಿನಿ ವಿಧಾನಸೌಧದ ಬಳಿ, ಮಂಗಳೂರು 575001 ಈ ವಿಳಾಸಕ್ಕೆ ಹೆಸರನ್ನು ಸೂಚಿಸಬಹುದು. ಅಥವಾ 3 ರಿಂದ 5 ಪುಟಗಳ ಮಾಹಿತಿಯನ್ನು ಒದಗಿಸಬಹುದು. ಪೂರ್ಣ ಮಾಹಿತಿ ಒದಗಿಸಿದವರ ಹೆಸರನ್ನು ಗ್ರಂಥದಲ್ಲಿ ನಮೂದಿಸಲಾಗುತ್ತದೆ.
ಇದು ಮುಂದಿನ ಪೀಳಿಗೆಗೆ ಹಾಗೂ ಇತಿಹಾಸದಲ್ಲಿ ಅಚ್ಚೊತ್ತಿ ನಿಲ್ಲುವ ಬ್ಯಾರಿ ಮಹನೀಯರ ಕುರಿತು ಇರುವ ಐತಿಹಾಸಿಕ ಗ್ರಂಥವಾಗಿರುವುದರಿಂದ ಸಾರ್ವಜನಿಕರು ಈ ಬಗ್ಗೆ ಅಕಾಡೆಮಿಯ ಈ ಮಹತ್ತರವಾದ ಯೋಜನೆಯಲ್ಲಿ ಕೈಜೋಡಿಸಬೇಕೆಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿರುತ್ತಾರೆ. ಬ್ಯಾರಿ ಮತ್ತು ಮಲಾಮೆ ಭಾಷಿಗರಲ್ಲದ ಉರ್ದು, ಕೇರಳ ಮಲಯಾಳಂ ಹಾಗೂ ಇನ್ನಿತರ ಭಾಷಿಕರು ಈ ಗ್ರಂಥದ ವ್ಯಾಪ್ತಿಗೆ ಒಳಪಡುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಪುಸ್ತಕ ಪ್ರಕಟನಾ ಸಮಿತಿಯ ಸದಸ್ಯ ಹಂಝ ಮಲಾರ್ ಮೊಬೈಲ್ ಸಂಖ್ಯೆ 9481017495, ಜಲೀಲ್ ಮುಕ್ರಿ ಮೊಬೈಲ್ ಸಂಖ್ಯೆ 9945479369, ಆಯಿಶಾ ಯು.ಕೆ ಮೊಬೈಲ್ ಸಂಖ್ಯೆ 9035308709 ಇವರನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಇವರ ಪ್ರಕಟಣೆ ತಿಳಿಸಿದೆ.
Comments are closed.