ಕರಾವಳಿ

ಅಷ್ಟಮಿ ಹಾಗೂ ಚೌತಿ ಹಬ್ಬಗಳ ಆಚರಣೆಗೆ ಮಾರ್ಗದರ್ಶಿ ಸೂತ್ರಗಳ ಬಿಡುಗಡೆಗೆ ವಿಎಚ್‍ಪಿ ಮನವಿ

Pinterest LinkedIn Tumblr

ಮಂಗಳೂರು : ಸಾರ್ವಜನಿಕಶ್ರೀಕೃಷ್ಣ ಜನ್ಮಾಷ್ಟಮಿ, ಮೊಸರು ಕುಡಿಕೆ (ವಿಟ್ಲ ಪಿಂಡಿ), ಗಣೇಶ ಚತುರ್ಥಿ ಸಮಿತಿಯವರು ಈ ಬಾರಿಯ ಹಬ್ಬ ಆಚರಣೆಯ ಬಗ್ಗೆ ಸಾಕಷ್ಟು ಗೊಂದಲದಲ್ಲಿದ್ದು ಕಾರ್ಯಕ್ರಮದ ಆಯೋಜನೆ, ಆಮಂತ್ರಣ ಪತ್ರಿಕೆ, ಆರ್ಥಿಕ ಸಂಗ್ರಹಗಳನ್ನು ಸಾಕಷ್ಟು ಮೊದಲೇ ತಯಾರಿ ನಡೆಸ ಬೇಕಾದುದ್ದರಿಂದ ಈ ಕೊರೋನಾ ಮಹಾಮಾರಿಯ ಸಂಧರ್ಭದಲ್ಲಿ ಆಚರಿಸಬೇಕಾದ ನಿಯಮಾವಳಿ ಸೂತ್ರಗಳನ್ನು ತಕ್ಷಣ ಪ್ರಕಟಿಸಬೇಕೆಂದು ವಿಶ್ವಹಿಂದೂ ಪರಿಷದ್ ರಾಜ್ಯಸರಕಾರಕ್ಕೆ ಎಲ್ಲಾ ಸಮಿತಿಗಳ ಪರವಾಗಿ ಮನವಿ ಮಾಡಿದೆ.

ಈಗಾಗಲೇ ಇದರ ಬಗ್ಗೆ ಮಾನ್ಯ ಗೃಹ ಸಚಿವರಿಗೆ ಮತ್ತು ಧಾರ್ಮಿಕ ದತ್ತಿಇಲಾಖೆ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು, ಹಬ್ಬಗಳ ಸಂಧರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಸಭೆ ಮೆರವಣಿಗೆ ಇತ್ಯಾದಿಗಳಿಗೆ ಯಾವ ನಿಯಮಾವಳಿಗಳನ್ನು ಪಾಲಿಸಬೇಕಾಗಿದೆಯೋ ಅದಕ್ಕೆ ತಕ್ಕಂತೆ ಶಿಸ್ತುಬದ್ಧವಾಗಿ ಆಚರಿಸಲು ಅನುಕೂಲವಾಗುವಂತೆ ಮಾರ್ಗದರ್ಶಿ ಸೂತ್ರಗಳನ್ನು ತಕ್ಷಣ ಪ್ರಕಟಿಸಲು ಮನವಿ ಮಾಡಿದ್ದೇವೆ ಎಂದು ಪತ್ರಿಕಾ ಪ್ರಕಟನೆಯ ಮೂಲಕ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ತಿಳಿಸಿದ್ದಾರೆ.

Comments are closed.