ಮಂಗಳೂರು : ನಗರದ ಆನೆಗುಂಡಿ ಬಳಿಯ ಗೆಸ್ಟ್ ಹೌಸ್ ಒಂದರಲ್ಲಿ ಇಸ್ಪೀಟ್ ಅಡುತ್ತಿದ್ದ ಜುಗಾರಿ ಅಡ್ಡೆಗೆ ನಗರ ಅಪರಾಧ ಪತ್ತೆ ದಳ (ಸಿಸಿಬಿ) ಪೊಲೀಸರು ದಾಳಿ ನಡೆಸಿ ಜುಗಾರಿ ಅಡ್ಡೆಯ ಕಿಂಗ್ ಪಿನ್ ಚೇತನ್ ಯಾನೆ ಕರಿಯ ಹಾಗೂ ಪ್ರಮುಖ ಆರೋಪಿ ಮುಲ್ಲಕಾಡ್ ಪೋರ್ತ್‌ಮೈಲ್‌ನ ಚೇತನ್ ಕುಮಾರ್ ಸಹಿತ 14 ಮಂದಿಯನ್ನು ಬಂಧಿಸಿದ್ದಾರೆ.
ನಗರದ ಆನೆಗುಂಡಿ 2ನೇ ತಿರುವಿನಲ್ಲಿರುವ ಕ್ರಿಸ್ಟಲ್ ಹೋಮ್ ಗೆಸ್ಟ್ ಹೌಸ್‌ನಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟ್ (ಜುಗಾರಿ) ಆಡುತ್ತಿದ್ದ ಕಿಂಗ್ ಪಿನ್ ಬರ್ಕೆಯ ಚೇತನ್ ಯಾನೆ ಕರಿಯ ಹಾಗೂ ಪ್ರಮುಖ ಆರೋಪಿ ಮುಲ್ಲಕಾಡ್ ಪೋರ್ತ್‌ಮೈಲ್‌ನ ಚೇತನ್ ಕುಮಾರ್, ಉಡುಪಿಯ ಕಲ್ಸಂಗದ ನಿಖಿಲ್, ಅಶೋಕ ನಗರದ ಧೀರಜ್, ದಂಬೇಲ್‌ನ ಸಚಿನ್, ಚೊಕ್ಕಬೆಟ್ಟುವಿನ ಸುರೇಂದ್ರ ಭಂಡಾರಿ, ಕಾನಕತ್ಲ ಮುಹಮ್ಮದ್ ಅನ್ವರ್, ಬೆಂಗರೆ ಮುಹಮ್ಮದ್ ಜುಬೈರ್, ಕಾವೂರಿನ ನಾಗೇಶ್ ಶ್ರೀಯಾನ್, ಕುಳಾಯಿ ಭರತೇಶ್ ಶ್ರೀಯಾನ್, ಜೋಕಟ್ಟೆಯ ಮುಹಮ್ಮದ್ ಇಮ್ರಾನ್, ಕೊಣಾಜೆ ಮುಹಮ್ಮದ್ ಅನ್ವರ್, ಬಂಗ್ರ ಕೂಳೂರಿನ ಹೇಮಂತ್, ಕುಂಜತ್ತಬೈಲ್‌ನ ಸತೀಶ್ ಪೂಜಾರಿ ಮುಂತಾದವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಗಳು ಆಟಕ್ಕೆ ಬಳಸಿದ 1,75,200 ರೂ., 18 ಮೊಬೈಲ್, 52 ಇಸ್ಪೀಟ್ ಎಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಪಡೆದ ಸಿಸಿಬಿ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಮತ್ತು ಎಸ್ಐ ಕಬ್ಬಾಳ್ ರಾಜ್ ಅವರ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಮುಂದಿನ ತನಿಖೆಗೆ ಆರೋಪಿಗಳನ್ನು ಹಾಗೂ ವಶಕ್ಕೆ ಪಡೆಯಲಾದ ಸೊತ್ತುಗಳನ್ನು ಉರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಬೈಕಂಪಾಡಿಯಲ್ಲಿ ಬಳಿ ಸರಣಿ ದಾಳಿ :
ರಮಾನಂದ ಮಾರ್ಗದರ್ಶನದಲ್ಲಿ ಬೈಕಂಪಾಡಿ ಬಳಿಯ ಕ್ಲಬ್ ನಲ್ಲಿ ಜುಗಾರಿ ನಡೆಯುತ್ತಿತ್ತು ಇತ್ತೀಚೆಗೆ ಪೊಲೀಸರ ಸರಣಿ ದಾಳಿಯಿಂದಾಗಿ ಬೈಕಂಪಾಡಿ ಬಳಿಯ ಗುಡ್ಡೆ ಸಹಿತ ಪ್ರತಿ ದಿನ ಬೇರೆ ಬೇರೆ ಅಡ್ಡೆಗಳಲ್ಲಿ ಇಸ್ಪೀಟ್ ಜುಗಾರಿ ಆಟ ನಡೆಯುತ್ತಿತ್ತು. ಆದರೆ ಪೊಲೀಸರ ಸರಣಿ ದಾಳಿಯಿಂದಾಗಿ ಬೈಕಂಪಾಡಿಯಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಸ್ವಲ್ಪ ದಿನದ ಮಟ್ಟಿಗೆ ಬ್ರೇಕ್ ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಚೇತನ್ ನೇತ್ರತ್ವದಲ್ಲಿ ಬೈಕಂಪಾಡಿಯಲ್ಲಿ ಜುಗಾರಿ ಆಡುತ್ತಿದ್ದ ವ್ಯಕ್ತಿಗಳನ್ನು ಕರೆತಂದು ಆನೆಗುಂಡಿಯ ಮನೆಯೊಂದರಲ್ಲಿ ಜುಗಾರಿ ನಡೆಸಲಾಗುತ್ತಿತ್ತು. ಈ ಕುರಿತ ಮಾಹಿತಿ ಪಡೆದ ಸಿಸಿಬಿ ಇನ್ ಸ್ಪೆಕ್ಟರ್ ಶಿವಪ್ರಕಾಶ್ ಮತ್ತು ಎಸ್ಐ ಕಬ್ಬಾಳ್ ರಾಜ್ ಅವರ ತಂಡ ಜುಗಾರಿ ಅಡ್ಡೆಗೆ ದಾಳಿ ನಡೆಸಿ ಇಸ್ಪೀಟ್ ಆಟದಲ್ಲಿ ನಿರತರಾಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
Comments are closed.