ಕರಾವಳಿ

ದ.ಕ. ಜಿಲ್ಲೆಯಲ್ಲಿ ಇಂದು ಮತ್ತೆ ಮೂರು ಪಾಸಿಟಿವ್ : ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 69ಕ್ಕೇರಿಕೆ

Pinterest LinkedIn Tumblr

ಮಂಗಳೂರು, ಮೇ,.25: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ಮೂರು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ದಕ್ಷಿಣ ಕನ್ನಡದಲ್ಲಿ ಸೋಂಕು ಪೀಡಿತರ ಸಂಖ್ಯೆ 69ಕ್ಕೇರಿದೆ.

ಮೇ.18 ರಂದು ಮುಂಬೈಯ ದೊಂಬಿವಿಲಿ ಥಾಣೆಯಿಂದ ಆಗಮಿಸಿದ 55 ವರ್ಷದ ವ್ಯಕ್ತಿ ಹಾಗೂ ಮಹಾರಾಷ್ಟ್ರದ ಪುಣೆಯಿಂದ ಆಗಮಿಸಿದ 30 ವರ್ಷ ಪ್ರಾಯದ ಗಂಡಸಿನ ಗಂಟಲು ದ್ರವದ ಮಾದರಿ ಪರೀಕ್ಷಾ ವರದಿ ಸ್ವೀಕೃತವಾಗಿದ್ದು, ಅವರಿಗೆ ಕೊರೋನ ಸೋಂಕು ಇರುವುದು ದೃಢಪಟ್ಟಿದೆ. ಅಲ್ಲದೇ, ಮೇ.20 ರಂದು ಮುಂಬೈಯ ಕುರ್ಲಾದಿಂದ ಆಗಮಿಸಿದ 25 ವರ್ಷದ ಯುವಕನ ಮಾದರಿ ಪರೀಕ್ಷೆಯಲ್ಲಿ ಕೊರೋನ ಪಾಸಿಟಿವ್ ಬಂದಿದೆ ಎಂದು ಜಿಲ್ಲಾಡಳಿತ ಇಂದಿನ ಬುಲೆಟಿನಲ್ಲಿ ತಿಳಿಸಿದೆ. ಸೋಂಕು ದೃಢಪಟ್ಟ ಈ ಮೂರು ಮಂದಿ ಕ್ವಾರೆಂಟೈನ್ ನಲ್ಲಿದ್ದರು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಸೋಂಕು ದೃಢಪಟ್ಟ ಮೂವರಿಗೂ ನಗರದ ಕೋವಿಡ್ ( ವೆನ್ಲಾಕ್ ) ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಕುರಿತು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟ ತಿಳಿಸಿದೆ.

ಪ್ರಮುಖ ಅಂಶಗಳು :

ದಕ್ಷಿಣ ಕನ್ನಡ ಜಿಲ್ಲೆಗೆ ಮತ್ತೆ ಮಹಾ ಕಟಂಕ

ಮಹಾರಾಷ್ಟ್ರ ಲಿಂಕ್ ಇದ್ದ ಮೂವರಿಗೆ ಕೊರೋನಾ ಪಾಸಿಟಿವ್

ಮುಂಬೈನಿಂದ ಬಂದು ಕ್ವಾರಂಟೈನ್ ಆಗಿದ್ದ ಮೂವರಿಗೆ ಕೊರೋನಾ ಪಾಸಿಟಿವ್

ದ.ಕ ಜಿಲ್ಲೆಯ ಬೆಳ್ತಂಗಡಿ ಮೂಲದ ಮೂವರಿಗೆ ಕೊರೋನಾ ಪಾಸಿಟಿವ್

55 ವರ್ಷದ ಪುರುಷ,30 ವರ್ಷದ ಯುವಕ ಮತ್ತು 25 ವರ್ಷದ ಯುವಕನಿಗೆ ಸೋಂಕು ಧೃಡ

ಮುಂಬಯಿ ಮತ್ತು ಪೂನಾ ದಿಂದ ಬಂದಿದ್ದ ಸೋಂಕಿತರು

ಬೆಳ್ತಂಗಡಿಯಲ್ಲಿ ಕ್ವಾರೆಂಟೈನ್ ನಲ್ಲಿದ್ದ ಸೋಂಕಿತರು

Comments are closed.