ಕರಾವಳಿ

ಕೊರೋನಾ ಲಾಕ್‌ಡೌನ್- ಕೊಲ್ಲೂರು ದೇವಳಕ್ಕೆ 14 ಕೋಟಿ ಆದಾಯ ನಷ್ಟ: ಆನ್​ಲೈನ್ ಸೇವೆಗೆ ಮನವಿ

Pinterest LinkedIn Tumblr

ಕುಂದಾಪುರ: ಪ್ರಸಿದ್ದ ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ‌ಮೂಕಾಂಬಿಕಾ ದೇವಳಕ್ಕೆ ಕೋವಿಡ್-19 ಕೊರೋನಾ ಲಾಕ್‌ಡೌನ್ ಹಿನ್ನೆಲೆ 2-3 ತಿಂಗಳ 14 ಕೋಟಿ ಆದಾಯ ಕಡಿಮೆಯಾಗಿದ್ದು ಭಕ್ತಾಧಿಗಳು ಇನ್ನು ಮುಂದೆ ಆನ್​ಲೈನ್ ಮ‌ೂಲಕ ಸೇವೆ ಸಲ್ಲಿಸಬಹುದು ಎಂದು ಮನವಿ‌ ಮಾಡಲಾಗಿದೆ.

ಧಾರ್ಮಿಕ ದತ್ತಿ ಇಲಾಖೆಗೊಳಪಡುವ ‘ಎ’ ಶ್ರೇಣಿಯ ಕೊಲ್ಲೂರು ಶ್ರೀ ದೇವಳದ ಆದಾಯವು ಕಳೆದ ವರ್ಷ (2019) ಮಾರ್ಚ್, ಎಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ 13 ಕೋಟಿ ಆಗಿತ್ತು. ಆದರೆ ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ವಿಧಿಸಿದ ಹಿನ್ನೆಲೆ ದೇವಾಲಯಗಳು ಮುಚ್ಚಿ ಸರಕಾರ ಆದೇಶಿಸಿತ್ತು. ಲಾಕ್‌ಡೌನ್ ನಿಂದ ಭಕ್ತಾಧಿಗಳಿಗೆ ಪ್ರವೇಶ ನಿಷೇಧಿಸಿರುವುದರಿಂದ ಈ ವರ್ಷ 14 ಕೋಟಿ ಆದಾಯ ಕಡಿಮೆಯಾಗಿದೆ.

ಆದ್ದರಿಂದ ಸೇವೆ ಮಾಡಲು ಇಚ್ಚಿಸುವ ಭಕ್ತರು ಆನ್​ಲೈನ್ ಮೂಲಕ ಸೇವೆಗಳಿಗೆ ಹಣ ಸಂದಾಯ ಮಾಡಬಹುದು.ಅಲ್ಲದೆ ಶ್ರೀ ದೇವಳಕ್ಕೆ ದೇಣಿಗೆ‌ ನೀಡುವ ಭಕ್ತರು ಬ್ಯಾಂಕ್ ನ ಶ್ರೀ ದೇವಳದ ಉಳಿತಾಯ ಖಾತೆಗೆ ಹಣ ಜಮಾ ಮಾಡಬಹುದು. ಭಕ್ತರು ಸರಿಯಾದ ಅಂಚೆ ವಿಳಾಸವನ್ನು ನೀಡಿದಲ್ಲಿ ಸ್ವೀಕೃತ ರಸೀದಿ ಮತ್ತು ಸೇವಾ ಪ್ರಸಾದವನ್ನು ಅಂಚೆ ಮೂಲಕ ಕಳಿಸಲಾಗುತ್ತದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.