ಕರಾವಳಿ

ದ.ಕ. ಜಿಲ್ಲೆಯಲ್ಲಿ ಇಂದು ಸಂಜೆ 7ರಿಂದ ಸೋಮವಾರ ಬೆಳಗ್ಗೆ 7ರ ತನಕ ಸಂಪೂರ್ಣ ಸೀಲ್ ಡೌನ್

Pinterest LinkedIn Tumblr

ಮಂಗಳೂರು, ಮೇ.23: ದ.ಕ. ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮೇ 23ರ ಶನಿವಾರ ಸಂಜೆ 7 ಗಂಟೆಯಿಂದ ಮೇ 25ರ ಸೋಮವಾರ ಬೆಳಗ್ಗೆ 7 ಗಂಟೆಯ ತನಕ ಸೀಲ್ ಡೌನ್ ಮಾಡಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಅಗತ್ಯ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ದಿನಪತ್ರಿಕೆ, ತರಕಾರಿ, ಮೀನು ಮಾಂಸ, ಹಾಲು, ಔಷಧ ಪೂರೈಕೆಗೆ ನಿರ್ಬಂಧ ಇರುವುದಿಲ್ಲ. ಇತರೆ ಅಂಗಡಿ ಮುಂಗಟ್ಟು, ಹೋಟೆಲ್, ಬಾರ್ ಗಳು ಜಿಲ್ಲೆಯಲ್ಲಿ ಮುಚ್ಚಿರುತ್ತದೆ. ಉಳಿದಂತೆ ಜಿಲ್ಲೆಯಲ್ಲಿ ಎಲ್ಲಾ ಖಾಸಗಿ ಸಾರ್ವಜನಿಕ ವಾಹನ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿದೆ.

ನಿಗದಿಯಾಗಿದ್ದ ಮದುವೆಗಳಿಗೆ ಷರತ್ತುಗಳೊಂದಿಗೆ ಅವಕಾಶ:

ಇನ್ನು ಈ ಹಿಂದೆ ಭಾನುವಾರ ನಿಗದಿಯಾಗಿರುವ ಮದುವೆಗೆ ಅನುಮತಿ ನೀಡಲಾಗಿದೆ. ಸ್ಥಳೀಯ ಸಂಸ್ಥೆ ಯಿಂದ ಮದುವೆಗೆ ಅನುಮತಿ ಕಡ್ಡಾಯವಾಗಿದೆ. ಮದುವೆ ನಿಮಿತ್ತ ಪ್ರಯಾಣಿಸುವವರು ವಾಹನಗಳಿಗೆ ಸ್ಥಳೀಯ ಸಂಸ್ಥೆಯಿಂದ ಅನುಮತಿ ಪಡೆಯುವುದು ಅಗತ್ಯವಾಗಿದೆ. ಅಲ್ಲದೆ ಸರಕಾರದ ಮಾರ್ಗಸೂಚಿಯಂತೆ ಮದುವೆ ನಡೆಸಲು ಆದೇಶ ನೀಡಲಾಗಿದೆ. ಇನ್ನುಳಿದಂತೆ ಜಿಲ್ಲೆಯಲ್ಲಿ ಇತರೆ ಯಾವುದೇ ಕಾರ್ಯಗಳು ನಡೆಯುವುದಿಲ್ಲ. ಜಿಲ್ಲೆ ಸಂಪೂರ್ಣ ಸ್ಥಬ್ದಗೊಳ್ಳಲಿದೆ.

ರವಿವಾರ ದ.ಕ. ಜಿಲ್ಲೆ ಸಂಪೂರ್ಣ ಸೀಲ್ ಡೌನ್

ಶನಿವಾರ ಸಂಜೆಯಿಂದ ಸೋಮವಾರ ಬೆಳಗ್ಗೆ ತನಕ ಜಿಲ್ಲೆ ಸಂಪೂರ್ಣ ಸ್ತಬ್ದ

ಅಗತ್ಯ ಸೇವೆ ಹೊರತುಪಡಿಸಿ ಯಾವುದಕ್ಕೂ ಅವಕಾಶವಿಲ್ಲ.

Comments are closed.