ಕರಾವಳಿ

ದ.ಕ.ಜಿಲ್ಲೆಯಲ್ಲಿ ಇಂದು ಒಂದೇ ದಿನ 6 ಪಾಸಿಟಿವ್ ಪತ್ತೆ : ಕ್ವಾರೈಂಟೈನ್‌ನಲ್ಲಿದ್ದವರು – ಭಯಪಡುವ ಅಗತ್ಯವಿಲ್ಲ

Pinterest LinkedIn Tumblr

ಮಂಗಳೂರು, ಮೇ 21 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ 6 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಅರೋಗ್ಯ ಇಲಾಖೆ ಇಂದು ಮಧ್ಯಾಹ್ನ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ ಈ ಬಗ್ಗೆ ದೃಢಪಡಿಸಿದೆ.

ಪಾಸಿಟಿವ್ ದೃಢಪಟ್ಟವರೆಲ್ಲರೂ ದುಬಾಯಿಂದ ಬಂದು ಕ್ವಾರೈಂಟೈನ್ ನಲ್ಲಿದ್ದವರು. ಎಲ್ಲರೂ ಪುರುಷರಾಗಿದ್ದು, 5 ಮಂದಿ ದ.ಕ.ಜಿಲ್ಲೆಯವರು ಹಾಗೂ ಓರ್ವ ಕಲ್ಬುರ್ಗಿ ಜಿಲ್ಲೆಯ ನಿವಾಸಿಯಾಗಿರುತ್ತಾನೆ.

ಇದೇ ವೇಳೆ ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 27 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಪೈಕಿ ದುಬೈ ಹಾಗೂ ಮುಂಬೈಯಿಂದ ಬಂದ ಪ್ರಯಾಣಿಕರಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಇಂದು ಒಂದೇ ದಿನ ಅವಿಭಜಿತ ಜಿಲ್ಲೆಯಲ್ಲಿ 31 ಪ್ರಕರಣ ಖಚಿತಪಟ್ಟಿದೆ.

ಪ್ರಮುಖ ಅಂಶಗಳು :

ಕರಾವಳಿ ಕರ್ನಾಟಕಕ್ಕೆ ಇಂದು ಕರಾಳ ಗುರುವಾರ

ಕರಾವಳಿಯ ಮೂರು ಜಿಲ್ಲೆಗಳಲ್ಲಿ 40 ಕೊರೋನಾ ಪಾಸಿಟಿವ್

ದಕ್ಷಿಣ ಕನ್ನಡ 6, ಉಡುಪಿ 25, ಉತ್ತರ ಕನ್ನಡ 9 ಪ್ರಕರಣಗಳು

ದುಬೈ ಮತ್ತು ಮುಂಬೈಯಿಂದ ಬಂದವರಿಂದಲೇ ಹೆಚ್ಚು ಪಾಸಿಟಿವ್

 ದಕ್ಷಿಣ ಕನ್ನಡ ಜಿಲ್ಲೆಗೆ ಮತ್ತೆ ದುಬೈ ಕಂಟಕ
ಮೇ 18ರಂದು ದುಬೈನಿಂದ ಬಂದ 6 ಮಂದಿಗೆ ಸೋಂಕು
ದುಬೈನಿಂದ ಮಂಗಳೂರಿಗೆ ಬಂದ 178 ಪ್ರಯಾಣಿಕರು
178 ಮಂದಿಯಲ್ಲಿ‌ 6 ಮಂದಿಗೆ ಕೊರೋನಾ ಸೋಂಕು
6 ಮಂದಿಯನ್ನು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರ
ಸೋಂಕಿತರ ಪೈಕಿ‌ 5 ಮಂದಿ ದಕ್ಷಿಣ ಕನ್ನಡ ಮೂಲ,ಓರ್ವ ಕಲಬುರ್ಗಿ ನಿವಾಸಿ
ದುಬೈನಿಂದ ಬಂದ ಮೊದಲ ವಿಮಾನದಲ್ಲಿ15 ಮಂದಿಗೆ ಸೋಂಕು
ಎರಡನೇ ವಿಮಾನದಲ್ಲಿ 6 ಮಂದಿಗೆ ಕೊರೋನಾ ಪಾಸಿಟಿವ್

Comments are closed.