ಕರಾವಳಿ

ನಾಳೆಯಿಂದ ಬಸ್ ಸಂಚಾರ ಆರಂಭ- ಪ್ರತೀ ಬಾನುವಾರ ಕರ್ಫ್ಯು, ಮಧ್ಯ ಮಾರಾಟ ನಿರ್ಬಂಧ – ಏನಿದೆ, ಏನಿಲ್ಲ – ಇಲ್ಲಿದೆ ವಿವರ

Pinterest LinkedIn Tumblr

ಬೆಂಗಳೂರು, ಮೇ 18: ನಾಳೆಯಿಂದ ರಾಜ್ಯದಲ್ಲಿ ಸರಕಾರದ ಎಲ್ಲ ನಾಲ್ಕು ವಿಭಾಗಗಳ ಬಸ್‌ಗಳು ಹಾಗೂ ಖಾಸಗಿ ಬಸ್‌ಗಳಿಗೆ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ರೆಡ್ ಝೋನ್ ಹಾಗೂ ಕಂಟೇನ್‌ ಮೆಂಟ್ ಹೊರತುಪಡಿಸಿ ಬೇರೆಡೆ ಕೆಎಸ್ಆರ್ಟಿಸಿ ಬಿಎಂಟಿಸಿ ಬಸ್ ಸಂಚಾರ ನಾಳೆ ಬೆಳಿಗ್ಗೆಯಿಂದ ಆರಂಭ ವಾಗಲಿದೆ ಎಂದು ಲಾಕ್‌ಡೌನ್ ಸಡಿಲಿಕೆಗೆ ಸಂಬಂಧಿಸಿ ಇಂದು ಸಚಿವರೊಂದಿಗೆ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದರು.

ಎಸಿ ಬಸ್‌ಗಳು ಸಂಚರಿಸುವಂತಿಲ್ಲ.ಬಸ್‌ನಲ್ಲಿ 30 ಜನರಿಗೆ ಹೆಚ್ಚು ಜನ ಪ್ರಯಾಣಿಸುವಂತಿಲ್ಲ. ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸುವುದು ಕಡ್ಡಾಯ. ನಿಯಮ ಉಲ್ಲಂಘಿಸುವವರಿಗೆ ಅಧಿಕಾರಿಗಳು ದಂಡ ಹೇರಲಾಗುವುದು. ಆಟೋ ರಿಕ್ಷಾ, ಟ್ಯಾಕ್ಸಿ ಮ್ಯಾಕ್ಸ್ ಕ್ಯಾಬ್ ಓಡಾಟಕ್ಜೆ ಅವಕಾಶ. ಆಟೋ ಮತ್ತು ಟ್ಯಾಕ್ಸಿ ಯಲ್ಲಿ ಚಾಲಕ ಸೇರಿ ಇಬ್ಬರು ಪ್ರಯಾಣಿಕರು, ಮ್ಯಾಕ್ಸಿಕ್ಯಾಬ್ ನಲ್ಲಿ ಚಾಲಕ ಸೇರಿ ಮೂವರು ಪ್ರಯಾಣಿಸಲು ಅವಕಾಶ. ಲಾಕ್ ಡೌನ್ ನಾಲ್ಕರಲ್ಲಿ ಮೇ 31 ರವರೆಗೆ ಮುಂದುವರೆಯಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಕೇಂದ್ರ ಸರ್ಕಾರದ ಮಾರ್ಗಸೂಚಿ

ಕಂಟೇನ್ಮೆಂಟ್ ಝೋನ್ ಗಳಲ್ಲಿ ಬಿಗಿ ಭಧ್ರತೆ, ಕಾನೂನು ಬಾಹಿರ ವರ್ತನೆ ಮಾಡಿದ್ರೆ ಕ್ರಿಮಿನಲ್ ಕೇಸ್, ಬಿಎಂಟಿಸಿ, ಕೆಎಸ್ ಆರ್ ಟಿಸಿ, ಈಶಾನ್ಯ, ನೈರುತ್ಯದಲ್ಲಿ ಸಂಚಾರ. ನಾಳೆ ಬೆಳಿಗ್ಗೆಯಿಂದಲೇ ಬಸ್ ಸಂಚಾರ,
ಖಾಸಗಿ ಬಸ್ ಗಳ ಸಂಚಾರಕ್ಕೂ ಅವಕಾಶ, ಆದ್ರೆ ಮೂವತ್ತು ಪ್ರಯಾಣಿಕರಿಗೆ ಮಾತ್ರ ಅವಕಾಶ, ಮಾಸ್ಕ್ ಹಾಕಿಕೊಳ್ಳೋದು ಕಡ್ಡಾಯ, ಇಲ್ಲದಿದ್ರೆ ಸಾರಿಗೆ ಅಧಿಕಾರಿಗಳು ದಂಡ ಹಾಕ್ತಾರೆ, ಹೊರ ರಾಜ್ಯಗಳಿಂದ ಬರೋರಿಗೆ ಹಂತ ಹಂತವಾಗಿ ಬಸ್ ವ್ಯವಸ್ಥೆ, ಸಾಮೂಹಿಕ ಕ್ವಾರಂಟೈನ್ ಮಾಡಲು ತೀರ್ಮಾನ, ಬೇರೆ ರಾಜ್ಯಗಳಿಂದ ಜನ ಬರೋದಕ್ಕೆ ಅವಕಾಶ, ಅನಿವಾರ್ಯ ಕಾರಣಗಳಿದ್ರೆ ಮಾತ್ರ ಅವಕಾಶ
ನಾಳೆಯಿಂದ ಮಾಲ್ , ಸಿನಿಮಾ, ಹೋಟೆಲ್ ಬಿಟ್ಟು ಎಲ್ಲಾ ಅಂಗಡಿಗಳು ತೆರೆಯಬಹುದು, ಟ್ರೈನ್ ಗಳು ನಮ್ಮ ರಾಜ್ಯದಲ್ಲಿ ಮಾತ್ರ ಸಂಚಾರ, ಹೊರ ರಾಜ್ಯಗಳಿಂದ ರೈಲ್ ಸಂಚಾರ ಇಲ್ಲ
ಆಟೋ, ಟ್ಯಾಕ್ಸಿಯಲ್ಲಿ ಡ್ರೈವರ್ ಬಿಟ್ಟು ಇಬ್ಬರಿಗೆ ಅವಕಾಶ, ಮ್ಯಾಕ್ಸಿ ಕ್ಯಾಬ್ ಗಳಲ್ಲಿ ಡ್ರೈವರ್ ಬಿಟ್ಟು ಮೂರು ಜನರಿಗೆ ಅವಕಾಶ, ಸಲೂನ್ ಶಾಪ್ ಓಪನ್ ಮಾಡಬಹುದು
ಪ್ರತೀ ಭಾನುವಾರ ಕಂಪ್ಲೀಟ್ ಲಾಕ್ ಡೌನ್ ಇರುತ್ತೆ , ಪಾರ್ಕ್ ಗಳಲ್ಲಿ ಬೆಳಿಗ್ಗೆ ಏಳರಿಂದ ಸಂಜೆ ಒಂಬತ್ತು ಗಂಟೆ ವರೆಗೆ ಓಡಾಟ, ಸಂಜೆ ಐದು ಗಂಟೆಯಿಂದ ಏಳು ಗಂಟೆ
ಎಲ್ಲಿ ಹೆಚ್ಚಾಗಿ ಸೋಂಕಿತರು ಇರ್ತಾರೋ ಆ ಪ್ರದೇಶ ಕಂಟೇನ್ಮೆಂಟ್ ಝೋನ್ ಅಂತ ಪರಿಗಣನೆ, ಕಂಟೇನ್ಮೆಂಟ್ ಬಿಟ್ಟು ಎಲ್ಲಾ ಕಡೆ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ, ಸದ್ಯಕ್ಕೆ ಬಸ್ ಟಿಕೆಟ್ ದರ ಏರಿಕೆ ಇಲ್ಲ, ಸಾರಿಗೆ ಇಲಾಖೆಗೆ ಲಾಸ್ ಆಗುತ್ತೆ, ಆದ್ರೆ ನಷ್ಟ ತುಂಬೋ ಕೆಲಸ ಮಾಡ್ತೇವೆ, ಹೋಟೆಲ್ ಗಳಲ್ಲಿ ಪಾರ್ಸೆಲ್ ಕೊಡಬೇಕು, ಪಾರ್ಸೆಲ್ ಕೊಟ್ಟಿಲ್ಲ ಅಂದ್ರೆ ಕ್ರಮ ತೆಗೆದುಕೊಳ್ಳಬೇಕಾಗುತ್ತೆ, ಬೀದಿ ಬದಿ ವ್ಯಾಪಾರಿಗಳಿಗೆ ಅಂಗಡಿ ತೆರೆಯೋದಕ್ಕೆ
ಕ್ರೀಡೆಗೆ ಅವಕಾಶ, ಆದ್ರೆ ಜಿಮ್ ಓಪನ್ ಇಲ್ಲ, ಷರತ್ತು ಬದ್ಧವಾಗಿ ಮದ್ವೆ ಮಾಡಿಕೊಳ್ಳಬಹುದು, ಅಗತ್ಯಕ್ಕನುಸಾರವಾಗಿ ಬಸ್ ಹೆಚ್ವಳ,ನಮ್ಮ ಮೆಟ್ರೋ ಸಂಚಾರಕ್ಕೆ ನಿರ್ಭಂಧ ಮುಂದುವರಿಕೆ, ಹೊರ ರಾಜ್ಯಗಳಿಂದ ಬರೋರಿಗೆ ಕ್ವಾರ‌ಂಟೇನ್ ಮಾಡ್ಬೇಕಾಗುತ್ತೆ, ಹೊರ ರಾಜ್ಯಗಳಿಗೆ ಹೋಗೋರು ಹೋಗಬಹುದು. ಸಿಎಂ ಯಡಿಯೂರಪ್ಪ ಅವರು ಇಂದು ಬಿಡುಗಡೆಗೊಳಿಸಿರುವ ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ.

Comments are closed.