ಮಂಗಳೂರು / ಬೆಂಗಳೂರು, ಮೇ.17: ಕರ್ನಾಟಕ ರಾಜ್ಯದಲ್ಲಿ ಭಾನುವಾರ ಬೆಳಗ್ಗಿನ ಹೆಲ್ತ್ ಬುಲಿಟಿನ್ ನಲ್ಲಿ 54 ಮಂದಿಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 1146ಕ್ಕೆ ತಲುಪಿದೆ. ಒಟ್ಟು 37 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಕಲಬುರ್ಗಿ 10, ಮಂಡ್ಯ 22, ಯಾದಗಿರಿ 3, ದ.ಕ. 2, ಉಡುಪಿ -1, ಹಾಸನ 6, ಧಾರವಾಡ -4, ಕೋಲಾರ 3, ವಿಜಯಪುರ,1, ಶಿವಮೊಗ್ಗ 2 ಪ್ರಕರಣ ವರದಿಯಾಗಿದೆ.
ಪಾಸಿಟಿವ್ ಬಂದ 54 ಪ್ರಕರಣಗಳಲ್ಲಿ 40 ಕ್ಕೂ ಹೆಚ್ಚು ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ ಎಂಬುದು ಗಮನಾರ್ಹ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಎರಡು ಪಾಸಿಟಿವ್ ಬಂದಿದೆ. ಇದರಲ್ಲಿ ಒಬ್ಬರಿಗೆ ಮಹಾರಾಷ್ಟ್ರ ಸಂಪರ್ಕ ಇದ್ದರೆ, ಇನ್ನೊಬ್ಬರ ಸಂಪರ್ಕ ಸಿಕ್ಕಿಲ್ಲ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 52ಕ್ಕೆ ಏರಿದೆ.
ಉಡುಪಿ ಜಿಲ್ಲೆಯಲ್ಲಿ ಒಂದು ಹೊಸ ಪ್ರಕರಣ ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 11 ಕ್ಕೆ ಏರಿದೆ.

Comments are closed.